ಹರಪನಹಳ್ಳಿ:
ಪಟ್ಟಣದ ನಟರಾಜ್ ಬಡಾವಣೆಯಲ್ಲಿ ಆರು ವರ್ಷದ ಬಾಲಕನಿಗೆ ಡೆಂಗ್ಯೂ ಪತ್ತೆಯಾದ ಹಿನ್ನೆಲೆಯಲ್ಲಿ ಡೆಂಗ್ಯೂ ಪತ್ತೆಯಾದ ಬಾಲಕನ ಮನೆಗೆ ಆರೋಗ್ಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಿಢೀರ್ ಭೇಟಿ ನೀಡಿ ಜಾಗೃತಿ ಮೂಡಿಸಿದರು.
ಈ ವೇಳೆ ಪುರಸಭೆ ಅಧ್ಯಕ್ಷ ಮಂಜುನಾಥ್ ಇಜಂತ್ಕರ್ ಮಾತನಾಡಿ ತುಂಬಾ ದಿನಗಳ ಕಾಲ ನೀರಿನತೊಟ್ಟಿ, ಬ್ಯಾರಲ್ ಸೇರಿದಂತೆ ಇತರೆ ವಸ್ತುಗಳಲ್ಲಿ ಸಂಗ್ರಹಿಸಿದ ನೀರನ್ನು ಆಗಾಗ ಸ್ವಚ್ಛಗೊಳಿಸಬೇಕು ಮಳೆಗಾಲವಾದ್ದರಿಂದ ನದಿ ನೀರು ಕೆಂಪಾಗಿ ಬರುತ್ತದೆ ಆದ ಕಾರಣ ಪಟ್ಟಣದ ನಾಗರೀಕರು ನೀರನ್ನು ಕಾಯಿಸಿ ಹಾರಿಸಿ ಕುಡಿಯಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಕೌಟಿ ವಾಗೀಶ್, ಅಮಾನುಲ್ಲಾ, ಹಿರಿಯ ಆರೋಗ್ಯ ನಿರೀಕ್ಷಕ ಪಿ.ಮಂಜುನಾಥ್, ನೀರು ಸರಬರಾಜು ಮೇಲುಸ್ತುವಾರಿ ಜಬೀಲ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.