ಪಟ್ಟಣದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ಮಾರಾಟಕ್ಕೆ ಯತ್ನಿಸುತ್ತಿರುವವರ ವಿರುದ್ದ ಕ್ರಮಕೈಗೊಳ್ಳಿ

ಜಗಳೂರು :

     ಜಿಲ್ಲಾಡಳಿತ ಹಾಗೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಉಲ್ಲಂಘಿಸಿ ಪಟ್ಟಣದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ಮಾರಾಟಕ್ಕೆ ಯತ್ನಿಸುತ್ತಿರುವವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಮಣ್ಣಿನ ಗೌರಿ ಮತ್ತು ಗಣಪತಿ ತಯಾರಕ ಚಿತ್ರಗಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಶ್ರೀಧರ್‍ಮೂರ್ತಿಗೆ ಮನವಿ ಸಲ್ಲಿಸಿದರು.

      ಈ ವೇಳೆ ಅಧ್ಯಕ್ಷ ನಾಗರಾಜ್ ಮಾತ ನಾಡಿ ನಾನು ಹುಟ್ಟಿನಿಂದಲೂ ನಮ್ಮ ಮೂಲ ಕಸುಬಾದ ದೇವತಾ ಮೂರ್ತಿಗಳನ್ನು ತಯಾರಿ ಸುವ ಚಿತ್ರಗಾರರಾದ ನಾವುಗಳು ಪ್ರತಿವರ್ಷ ಗಣೇಶ ಹಬ್ಬಕ್ಕೆ ಮಣ್ಣಿನಿಂದ ಗಣೇಶಗಳನ್ನು ತಯಾರಿಸುವುದು ಒಂದು ವಿಶೇಷ. ಅದರಂತೆ ಯೇ ನಾವು ಮಣ್ಣಿನ ಗಣಪತಿಗಳನ್ನು ತಯಾರಿ ಸಿಕೊಂಡು ಜೀವನ ಸಾಗಿಸುತ್ತ ಬರುತ್ತಿದ್ದೇವೆ. ಆದರೆ ಗಣಪತಿ ಹಬ್ಬ ಸಮೀಪಿಸುತ್ತಿದ್ದಂತೆ ಕೆಲವ ರು ಪಿಒಪಿ ಗಣಪಗಳ ಮಾರಾಟ ಮಾಡುತ್ತಿದ್ದು ತಾಲೂಕು ದಂಡಾಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

      ಸಂದೀಪ್ ಕುಮಾರ್ ಮಾತನಾಡಿ ದೇಶದ ಬಹುಸಂಖ್ಯಾತ ಜನತೆ ಆಚರಿಸುವ ಗಣೇಶೋತ್ಸವ ಸರ್ವ ಜನಾಂಗದವರಿಗೂ ಶಾಂತಿ, ಸೌಹಾರ್ದ ಮತ್ತು ಭಾತೃತ್ವ ಬೆಸೆಯುವ ಹಬ್ಬವಾಗಿದೆ. ಧಾರ್ಮಿಕ ಹಿನ್ನೆಲೆಯಲ್ಲಿ ಮಣ್ಣಿನಿಂದ ನಿರ್ಮಿಸಿದ ಗಣೇಶ ಮೂರ್ತಿಗಳನ್ನು ಪೂಜಿಸುವುದೇ ಶ್ರೇಷ್ಠ ಎಂಬ ನಂಬಿಕೆಯಿದೆ. ಆದರೆ ಇಚ್ಚೀಚೆಗೆ ಆರ್ಥಿಕ ಮತ್ತು ವ್ಯವಹಾರಿಕ ದೃಷ್ಠಿಯಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ವಿಗ್ರಹಗಳನ್ನು ತಯಾರಿಸಬಹುದೆಂಬ ದುರಾಸೆಯಿಂದ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದ್ದಾರೆ. ಪಿಒಪಿಯಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಕೆರೆಗಳಲ್ಲಿ ವಿಸರ್ಜನೆ ಮಾಡುವುದರಿಂದ ನೀರು ಕಲುಷಿತ ಗೊಳ್ಳುತ್ತವೆ. ವಿಗ್ರಹಗಳಿಂದ ಹೊರಹೊಮ್ಮುವ ರಾಸಾಯನಿಕಯುಕ್ತ ಬಣ್ಣಗಳು ನೀರಿನಲ್ಲಿ ಸೇರು ವುದರಿಂದ ಜಲಚರಗಳ ಅವಸಾನಕ್ಕೆ ಕಾರಣವಾ ಗುತ್ತದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿ ಗಳು ಯಾವುದೇ ಕಾರಣಕ್ಕೂ ಪಿಒಪಿ ಮೂರ್ತಿ ಗಳ ಮಾರಾಟಕ್ಕೆ ಅವಕಾಶ ನೀಡಬಾರದೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರಾಜು ಬಣಕಾರ್, ಕರವೇ ಮಹಾಂತೇಶ್, ಲುಕ್ಮಾನ್‍ಖಾನ್, ಶಂಭು ಲಿಂಗಪ್ಪ, ಸಿ.ಎಸ್.ತಿಪ್ಪೇಸ್ವಾಮಿ, ಮಂಜುನಾಥ್, ಸಂತೋಶ್, ನವೀನ್‍ಕುಮಾರ್, ಮಹೇಶ್, ಅನಿಲ್ ಕುಮಾರ್, ಮಹಂತೇಶ್, ವೆಂಕಟೇಶ್, ಅಜ್ಜಯ್ಯ, ಮನೋಜ್, ವ್ಯಾಸಗೊಂಡನಹಳ್ಳಿ ರಾಜಪ್ಪ ಸೇರಿದಂತೆ ಮತ್ತಿತರರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link