ಪಟ್ಟಣದ ಸ್ಡೇಡಿಯಂ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಯುವ ಜನ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದಶಕ ಶ್ರೀನಿವಾಸ ಹೇಳಿದ್ದಾರೆ.
ಅವರು ಪಟ್ಟಣದ ಸ್ಟೇಡಿಯಂ ಗೆ ಮಂಗಳವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಜಿ.ಪಂ ಯಿಂದ 6 ಲಕ್ಷ ರು.ಗಳು ಬಿಡುಗಡೆಗೊಂಡಿದ್ದು, ಅದರಲ್ಲಿ ಕೌಕ್ಯಾಚ್ , ಸುಣ್ಣ ಬಣ್ಣ, ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ ಇತರ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಸ್ಡೇಡಿಯಂ ನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಲು ಭೂ ಸೇನಾ ನಿಗಮದ ಇಂಜಿನಿಯರಿಗೆ ಸೂಚಿಸಲಾಗಿದೆ, ಎಂದು ಅವರು ನುಡಿದರು.
ಜಗಳೂರಿನಲ್ಲಿ ಎಸ್ ಸಿ ಪಿ , ಟಿಎಸ್ ಪಿ ಯೋಜನೆಯಲ್ಲಿ 22 ಲಕ್ಷ ರು.ಗಳ ವೆಚ್ಚದಲ್ಲಿ ವ್ಯಾಯಮ ಶಾಲೆ ಹಾಗೂ ಕಾಮಗಾರಿ 3 ಲಕ್ಷ ರು.ಗಳ ವೆಚ್ಚದಲ್ಲಿ ವಿವಿಧ ಅಂಕÀಣಗಳ ಕ್ರೀಡಾಂಗಣ ಅಭಿವೃದ್ದಿ ಪಡಿಸಲಾಗಿದೆ , ಚೆನ್ನಗಿರಿಯಲ್ಲೂ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಕ್ರಿಯಾ ಯೋಜನೆ ತಯಾರಿಸಲು ಹೇಳಲಾಗಿದೆ ಎಂದರು.
ಕ್ರೀಡಾ ಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದರೆ ಅಂತವರಿಗೆ 10 ಸಾವಿರ ಸ್ಕಾಲರ್ ಶಿಪ್ ನೀಡಲಾಗುವುದು ಆದರೆ ಸಾಧನೆಗೆ ಹೋಗುವ ಸಾಧಕರಿಗೆ ಪೆÇ್ರೀತ್ಸಾಹ ಧನದ ವ್ಯವಸ್ಥೆ ಇಲ್ಲವಾಗಿದೆ, ಆ ನಿಟ್ಟಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು.
ಶ್ರೀನಿವಾಸ ಅವರು ಸ್ಟೇಡಿಯಂ ನ ವಿವಿಧ ಭಾಗಗಳನ್ನು ವೀಕ್ಷಿಸಿದರು. ಇಲ್ಲಿ ಈಗ ತರಬೇತುದಾರರು ಅವಶ.ಕ್ಕತೆ ಇರುವುದನ್ನು ಒಪ್ಪಿಕೊಂಡ ಅವರು ತಾಲೂಕು ಕೇಂದ್ರಕ್ಕೆ ಒಬ್ಬ ತರಬೇತುದಾರರು ಇರಬೇಕು ಆದರೆ ಇಲಾಖೆಯಲ್ಲಿ ತರಬೇತುದಾರರ ಕೊರತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಲ್ಲಿ ಅನೇಕ ವರ್ಷಗಳ ಕಾಲ ತರಬೇತುದಾರರಾಗಿ ಕಾರ್ಯನಿರ್ವಹಿಸಿ ಸ್ಡೇಡಿಯಂ ಅಭಿವೃದ್ದಿ ಹಾಗೂ ಕ್ರೀಡಾ ಪಟುಗಳ ಶ್ರೇಯೊಬಿವೃದ್ದಿಗೆ ಕಾರಣರಾಗಿ ಇದೀಗ ದಾವಣಗೆರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಖೋ ಖೋ ತರಬೇತುದಾ ಜೆ.ರಾಮಲಿಂಗಪ್ಪ ಹಾಗೂ ಮಂಜು ಉಪಸ್ಥಿತರಿದ್ದರು.







