ಪಿಎಂ ರಂಗನಾಥಪ್ಪ ಬಡಾವಣೆ ಸ್ವಚ್ಛತೆಗೆ ಆಗ್ರಹ


ಪ್ರಜಾಪ್ರಗತಿ.ಕಾಂ
ಪಟ್ಟನಾಯಕನಹಳ್ಳಿ: ತಾಲೂಕಿನ ನಾದೂರು ಗ್ರಾ.ಪಂ. ವ್ಯಾಪ್ತಿಯ ಪಟ್ಟನಾಯಕನಹಳ್ಳಿಯ ಪಿಎಂ ರಂಗನಾಥಪ್ಪ ಬಡಾವಣೆಯಲ್ಲಿನ ಚರಂಡಿಗಳು ಕಲ್ಮಶದಿಂದ ಕೂಡಿದ್ದು ಸ್ವಚ್ಛತೆ ಇಲ್ಲದೆ ಸದರಿ ಬಡಾವಣೆಯ ವಾಸಿಗಳು ರೋಗ ರುಜಿನಗಳಿಂದ ನರಳುತ್ತಿದ್ದು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸದರಿ ಬಡಾವಣೆಯಲ್ಲಿ ವಾಸವಿರುವ ಬಹುತೇಕ ಮಂದಿ ಕೂಲಿ ಕಾರ್ಮಿಕರಾಗಿದ್ದು ಬಡಾವಣೆಯ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಪಂ ಸದಸ್ಯರ ಅವಧಿ ಪೂರ್ಣಗೊಂಡ ನಂತರ ಗ್ರಾಮದ ಸ್ವಚ್ಛತೆಯನ್ನೇ ಗ್ರಾಪಂ ಆಡಳಿತ ಮರೆತಿದೆ. ಈ ಕೂಡಲೇ ಸ್ವಚ್ಛತೆಯತ್ತ ಗಮನಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Recent Articles

spot_img

Related Stories

Share via
Copy link