ಪಡಿತರ ಚೀಟಿದಾರರು ಜುಲೈ ಒಳಗೆ ಈ-ಕೆವೈಸಿ ಮಾಡಿಸಿ

ಹುಳಿಯಾರು

     ಪಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲ ಸದಸ್ಯರು ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ನೀಡಿ, ಇ-ಕೆವೈಸಿ ಮಾಡಿಸಬೇಕು ಎಂದು ತಹಸೀಲ್ದಾರ್ ತೇಜಸ್ವಿನಿ ಅವರು ಸೂಚಿಸಿದ್ದಾರೆ.

      ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬದ ಫಲಾನುಭವಿಗಳು ಜಾತಿ ಪ್ರಮಾಣ ಪತ್ರ ಲಭ್ಯವಿದ್ದಲ್ಲಿ ಇ-ಕೆವೈಸಿ ಮಾಡುವ ಸಂದರ್ಭ ತಮ್ಮೊಂದಿಗೆ ಕೊಂಡೊಯ್ಯಲು ತಿಳಿಸಿದ್ದಾರೆ.

      ನ್ಯಾಯಬೆಲೆ ಅಂಗಡಿಯ ಪರವಾನಗಿದಾರರ ಲಾಗಿನ್ನಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆವರೆಗೆ ಮಾತ್ರ ಇ-ಕೆವೈಸಿ ಮಾಡಲು ಅವಕಾಶವಿದೆ ಎಂದು ತಿಳಿಸಿದರು.ಪ್ರಸ್ತುತ ಕುಟುಂಬದಲ್ಲಿನ ಹಿರಿಯ ಮಹಿಳಾ ಸದಸ್ಯೆ ಕುಟುಂಬದ ಮುಖ್ಯಸ್ಥ ರಾಗಲಿದ್ದು, ಇ-ಕೆವೈಸಿ ಮಾಡುವ ಸಮಯದಲ್ಲಿ ಸಂಬಂಧಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಸೂಚಿಸಿದ್ದಾರೆ. ಗ್ಯಾಸ್ ಸಂಪರ್ಕದ ಮಾಹಿತಿಯನ್ನು ಸಹ ಈ ಸಮಯದಲ್ಲಿ ನಮೂದಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

      ಪಡಿತರದಾರರ ಇಕೆವೈಸಿ ಸಂಪೂರ್ಣ ಉಚಿತವಾಗಿದ್ದು, ಈ ಸೇವೆ ಪಡೆಯಲು ಪಡಿತರ ಚೀಟಿದಾರರು ಯಾವುದೆ ಶುಲ್ಕ ನೀಡುವ ಅಗತ್ಯವಿಲ್ಲ. ಅಲ್ಲದೆ ಇ-ಕೆವೈಸಿ ಮಾಡಿಸದ ಪಡಿತರದಾರರ ಪಡಿತರ ಹಂಚಿಕೆ ನಿಲ್ಲಿಸಲಾಗುವುದು ಎಂದು ತಹಸೀಲ್ದಾರ್ ಅವರು ತಿಳಿಸಿದ್ದಾರೆ.

 

Recent Articles

spot_img

Related Stories

Share via
Copy link