ಚಿತ್ರದುರ್ಗ:
ಕೊಡಗು ಮಳೆ ನಿರಾಶ್ರಿತರ ಪರಿಹಾರಕ್ಕಾಗಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ದೇಣಿಗೆ ಮತ್ತು ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಸೋಮವಾರ ಅರ್ಪಿಸಲಾಯಿತು.
ನೀಲಕಂಠೇಶ್ವರ ದೇವಸ್ಥಾನದಿಂದ ಆರಂಭಗೊಂಡ ನಿಧಿ ಸಂಗ್ರಹ ಪಾದಯಾತ್ರೆಯಲ್ಲಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಾರದ ಬ್ರಾಸ್ ಬ್ಯಾಂಡ್‍ನ ಗುರುಮೂರ್ತಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆ, ಕರ್ನಾಟಕ ರಾಜ್ಯ ತಾಂಡ ರಕ್ಷಣಾ ವೇದಿಕೆ, ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ, ಸ್ಲಂ ಜನಾಂದೋಲನ ಸಂಘಟನೆ ಇನ್ನು ಮುಂತಾದ ಸಂಘಟನೆಗಳ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ನಿಧಿ ಸಂಗ್ರಹ ಮಾಡಿದರು.
ಕೊಡಗಿನಲ್ಲಿ ಧಾರಾಕಾರ ಮಳೆಯಿಂದಾಗಿ ನಿರಾಶ್ರಿತರಿಗಾಗಿರುವ ಜನರಿಗೆ ಅಗತ್ಯ ವಸ್ತುಗಳನ್ನು ಮತ್ತು ಹಣಕಾಸಿನ ನೆರವು ನೀಡುವಂತೆ ಮಾಡಿಕೊಂಡ ಮನವಿಗೆ ಸ್ಪಂದಿಸಿದ ಸಾರ್ವಜನಿಕರು ತಮ್ಮ ಕೈಲಾದಷ್ಟು ಹಣಕಾಸಿನ ನೆರವು ಮತ್ತು ಅಗತ್ಯ ವಸ್ತುಗಳಾದ ಹೊಸ ಬಟ್ಟೆ, ಬೆಡ್‍ಶೀಟ್, ಬ್ಲಾಂಕೆಟ್, ಚಾಪೆ ಮಹಿಳೆಯರು ಮತ್ತು ಪುರುಷರಿಗೆ ಮೂಲಭೂತ ಬಟ್ಟೆಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದರು.
ಗಾಂಧಿ ಸರ್ಕಲ್, ಲಕ್ಷ್ಮಿಬಜಾರ್, ಜೈನ್ ಕಾಲೋನಿಯ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಬಟ್ಟೆ ಬರೆ ಹಣ ನೀಡಿ ಬೆಂಬಲಿಸಿ ತಮ್ಮ ನೈಜ ಮಾನವೀಯತೆಯನ್ನು ತೋರಿದ್ದಾರೆ. ಲಕ್ಷ್ಮಿಬಜಾರ್‍ನ ಬಟ್ಟೆ ಅಂಗಡಿ ಮಾಲೀಕರೊಬ್ಬರು ಕೊಡಗು ಮಳೆಯಿಂದ ನಿರಾಶ್ರಿತರಾಗಿರುವ ಸುಮಾರು ಸಾವಿರ ಜನರಿಗೆ ತಮ್ಮ ಅಂಗಡಿಯಿಂದ ಹೊಸ ಬಟ್ಟೆಗಳನ್ನು ಕೊಡುವುದಾಗಿ ಭರವಸೆ ನೀಡಿದರು.
ಮುಖ್ಯ ರಸ್ತೆಯ ಎರಡೂ ಬದಿಯ ವ್ಯಾಪಾರಿಗಳು ನಿಧಿ ನೀಡಿ ಸಹಕರಿಸಿದರು. ಸಾರ್ವಜನಿಕರು, ವಿದ್ಯಾರ್ಥಿಗಳು, ಪುಟ್‍ಫಾತ್ ವ್ಯಾಪಾರಿಗಳೂ ಸಹ ನೆರವು ನೀಡಿದರು. ರಸ್ತೆಯ ಉದ್ದಕ್ಕೂ ಜನರು ಸ್ವಯಂ ಪ್ರೇರಿತರಾಗಿ ಹುಂಡಿಗೆ ಹಣ ಹಾಕಿದರು. ಕೆಲವು ಬಟ್ಟೆ ಅಂಗಡಿಗಳ ಮಾಲೀಕರು ಬಟ್ಟೆಯನ್ನೂ ಕೊಟ್ಟರು
ಇದೇ ಸಂದರ್ಭದಲ್ಲಿ ಶಾರದ ಬ್ರಾಸ್ ಬ್ಯಾಂಡ್‍ನ ಗುರುಮೂರ್ತಿ ತಮ್ಮ ಬ್ರಾಸ್ ಬ್ಯಾಂಡ್ ಕಲಾವಿದರೊಂದಿಗೆ ಉಚಿತ ಶೋಕ ವಾದ್ಯವನ್ನು ನುಡಿಸುವ ಮೂಲಕ ಹಣ ಬಟ್ಟೆ ಸಂಗ್ರಹಿಸುವಲ್ಲಿ ಅಪಾರವಾದ ಸಹಕಾರ ನೀಡಿದರು.
ಕೊಡಗು ನಿರಾಶ್ರತರಿಗಾಗಿ ನಿಧಿ ಸಂಗ್ರಹಣೆ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಲಕ್ಷ್ಮಣ್, ಕಾರ್ಯದರ್ಶಿ ದಿನೇಶ್‍ಗೌಡಗೆರೆ, ಖಜಾಂಚಿ ಮೇಘಗಂಗಾಧರನಾಯಕ್, ಹಿರಿಯ ಪತ್ರಕರ್ತರಾದ ಟಿ.ಕೆ.ಬಸವರಾಜ್, ಹೆಚ್.ಕೆ.ಮುರುಗೇಶ್, ಹೆಂಜಾರಪ್ಪ, ಸುಭಾಷ್, ದಗ್ಗೆಶಿವಪ್ರಕಾಶ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ನರೇನಹಳ್ಳಿ ಅರುಣ್‍ಕುಮಾರ್, ಟಿ.ವಿ.ಮಾಧ್ಯಮದ ವರದಿಗಾರರಾದ ವಿನಾಯಕ್, ರಾಜಶೇಖರ್, ವೀರೇಶ್, ಬಸವರಾಜ್ ಕೋಟಿ, ಗುರುಮೂರ್ತಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ವೈ.ಕುಮಾರ್, ಸಿರಿಗೆರೆ ಚಿಕ್ಕೇಶ್, ರಾಜು ಭರಮಸಾಗರ, ಸ್ಲಂ ಜನಾಂದೋಲನ ಸಂಘಟನೆಯ ಮಂಜು, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ನಾಗರಾಜ್‍ಕಟ್ಟೆ, ಕರ್ನಾಟಕ ತಾಂಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವಸಂತ್‍ನಾಯ್ಕ, ಶಿವಕುಮಾರ್, ಸತೀಶ್, ಶಂಕರ್, ಧನರಾಜ್, ಮೋಹನ್, ವೀರಭದ್ರನಾಯ್ಕ, ರವಿನಾಯ್ಕ, ಪತ್ರಕರ್ತ ಸಿ.ಪಿ.ಮಾರುತಿ, ಸಿದ್ದಪ್ಪ ಇನ್ನು ಮುಂತಾದವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಡಿಡಿ ಹಸ್ತಾಂತರ
ಪತ್ರಕರ್ತರ ಸಂಘದವತಿಯಿಂದ ಸಾರ್ವಜನಿಕರಿಂದ ಸಂಗ್ರಹ ಮಾಡಿದ ಒಟ್ಟು 63 ಸಾವಿರ ರೂಪಾಯಿಗಳ ಡಿಡಿಯನ್ನು ಜಿಲ್ಲಾಧಿಕಾರಿ ವಿವಿ ಜೋತ್ಸ್ನ ಅವರಿಗೆ ಹಸ್ತಾಂತರ ಮಾಡಲಾಯಿತು
ಇದೇ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಪತ್ರಕರ್ತರಿಂದ ಸಂಗ್ರಹಿಸಲಾದ ಸುಮಾರು 63 ಸಾವಿರ ರೂ.ಗಳ ಚೆಕ್‍ನ್ನು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನರವರಿಗೆ ಸಲ್ಲಿಸಲಾಯಿತು. ಸಂಘದ ರಾಜ್ಯ ಸಮಿತಿ ಸದಸ್ಯ ನರೇನಹಳ್ಳಿ ಅರುಣ್‍ಕುಮಾರ್, ಜಿಲ್ಲಾ ಸಂಘದ ಅಧ್ಯಕ್ಷ ಹೆಚ್.ಲಕ್ಷ್ಮಣ್, ಖಜಾಂಚಿ ಮೇಘ ಗಂಗಾಧರ ನಾಯಕ್, ಕಾರ್ಯದರ್ಶಿ ದಿನೇಶ್, ಟಿ.ಕೆ.ಬಸವಾಜ್, ಕುಮಾರಸ್ವಾಮಿ, ಕಟ್ಟೆನಾಗರಾಜ್, ಸುಭಾಷ್ ಇನ್ನಿತರರು ಹಾಜರಿದ್ದರು