ತುಮಕೂರು:
ಪತ್ರಿಕೋದ್ಯಮ ಸಮಾಜದ ಓರೆಕೋರೆಗಳನ್ನು ತಿದ್ದಿಅಭಿವೃದ್ಧಿಗೆ ಪೂರಕವಾಗಬೇಕು. ಭವಿಷ್ಯದ ಪತ್ರಕರ್ತರು ನೈಜತೆಯನ್ನುಎತ್ತಿಹಿಡಿಯುವುದನ್ನುತಮ್ಮ ಗುರಿಯಾಗಿಸಿಕೊಳ್ಳಬೇಕು ಎಂದುತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರೊಕೋದ್ಯಮ ವಿಭಾಗ ಹಾಗೂ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿಏರ್ಪಡಿಸಲಾಗಿದ್ದಕಾರ್ಯಕ್ರಮದಲ್ಲಿಪತ್ರಿಕೋದ್ಯಮ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ‘ಕ್ಯಾಂಪಸ್ ಸುದ್ದಿ’ ಮತ್ತು‘ಕಲ್ಪತರುಟೈಮ್ಸ್’ ಪ್ರಾಯೋಗಿಕ ಪತ್ರಿಕೆಗಳನ್ನು ಬಿಡಿಗಡೆ ಮಾಡಿ ಮಾತನಾಡಿದರು.
ಪ್ರಜಾಪ್ರಭುತ್ವದ ಮೂರು ಮೂಲ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಆಯಾಕ್ಷೇತ್ರಕ್ಕೆ ಸೀಮಿತವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ, ಪತ್ರಿಕೋದ್ಯಮಎಲ್ಲಕ್ಷೇತ್ರಕ್ಕೂ ಸಂಬಂಧಿಸಿದ್ದು, ಸದಾಜಾಗೃತವಾಗಿರುವ ಅಂಗವೂ ಹೌದುಎಂದರು.
ಪತ್ರಿಕೋದ್ಯಮ ಸಾಕ್ಷಿಆಧಾರಿತಕಾರ್ಯವಾಗಿದ್ದು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಕೊಠಡಿಯೊಳಗಿನ ಪಾಠಕ್ಕಿಂತಲೂ ಹೆಚ್ಚಾಗಿ ಪ್ರಾಯೋಗಿಕ ಕಾರ್ಯಗಳಲ್ಲಿ ತೊಡಗಬೇಕುಎಂದರು.
ಹೊಸ ಕಾಲದ ಪತ್ರಿಕೋದ್ಯಮ ಬಯಸುವ ಕೌಶಲಗಳು’ಕುರಿತುಉಪನ್ಯಾಸ ನೀಡಿದ ಪತ್ರಕರ್ತಉಗಮ ಶ್ರೀನಿವಾಸ್, ಪತ್ರಿಕೋದ್ಯಮದ ಪ್ರವೃತ್ತಿ ಬದಲಾಗುತ್ತಿದೆ.ಹೀಗಾಗಿ ಇಂದಿನ ವಿದ್ಯಾರ್ಥಿಗಳು ಹೊಸ ತಲೆಮಾರಿನ ಪತ್ರಿಕೋದ್ಯಮಅಂದರೆಆನ್ಲೈನ್ ಪತ್ರಿಕೋದ್ಯಮಕ್ಕೆಅಗತ್ಯವಿರುವ ಕೌಶಲಗಳನ್ನು ಹೊಂದಲೇಬೇಕಾದ ಅನಿವಾರ್ಯತೆಇದೆಎಂದರು.
ಇದು ನಾಗರಿಕ ಪತ್ರಿಕೋದ್ಯಮದ ಕಾಲ.ಸ್ಮಾರ್ಟ್ಫೋನ್ ಹೊಂದಿದವರೆಲ್ಲಒಂದರ್ಥದಲ್ಲಿ ಪತ್ರಕರ್ತರೇ.ಹೀಗಾಗಿ ಪತ್ರಿಕೋದ್ಯಮ ಸದಾ ಹೊಸದನ್ನು ಹೇಳಬೇಕಾದ ಸವಾಲನ್ನುಎದುರಿಸುತ್ತಿದೆ.ಈ ಸವಾಲನ್ನು ನಿರ್ವಹಿಸಬಲ್ಲವರು ಮಾತ್ರ ಯಶಸ್ವೀ ಪತ್ರಕರ್ತರಾಗಬಲ್ಲರುಎಂದು ವಿಶ್ಲೇಷಿಸಿದರು.
ಪತ್ರಿಕೆಗಳ ಒಟ್ಟಾರೆಉತ್ಪಾದನಾ ವೆಚ್ಚ ಏರುತ್ತಿದೆ.ಓದುಗರನ್ನುಐದು ನಿಮಿಷಕ್ಕಿಂತ ಹೆಚ್ಚು ಒಂದು ಪತ್ರಿಕೆ ಹಿಡಿದಿಡುವುದೇದೊಡ್ಡ ಸಾಹಸವೆನಿಸಿದೆ.ಇನ್ನೇನಿದ್ದರೂಆನ್ಲೈನ್ ಪತ್ರಿಕೆಗಳ ಕಾಲ.ಯುವಪತ್ರಕರ್ತರು ಹೊಸ ಸಾಧ್ಯತೆಗಳಿಗೆ ತಮ್ಮನ್ನು ತೆರೆದುಕೊಳ್ಳಬೇಕು ಎಂದರು.
ಭಾಸ್ಕರಅಕಾಡೆಮಿತರಬೇತುದಾರಆರ್.ಚಂದ್ರಮೋಹನ್ಅವರುಉದ್ಯೋಗಜಗತ್ತಿಗೆಅಗತ್ಯವಾದಸಂವಹನ ಕೌಶಲಗಳ ಬಗ್ಗೆ ಉಪನ್ಯಾಸ ನೀಡಿದರು.ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲರಾದ ಕೆ.ರಾಮಚಂದ್ರಪ್ಪಅಧ್ಯಕ್ಷತೆ ವಹಿಸಿದ್ದರು.
ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕ ಸಿಬಂತಿ ಪದ್ಮನಾಭ ಕೆ. ವಿ.,ಪತ್ರಿಕೋದ್ಯಮಉಪನ್ಯಾಸಕರಾದದೇವರಾಜು ಸಿ., ಕೋಕಿಲ ಎಂ. ಎಸ್. ಹಾಗೂ ಬಾನುಪ್ರಸಾದ್ ಕೆ.ಎನ್. ಉಪಸ್ಥಿತರಿದ್ದರು.