ಚಿತ್ರದುರ್ಗ
ಪರಿಸರ ನಮಗೆ ಬಂದಿರುವ ಕೊಡುಗೆಯೇ ಹೊರೆತು ಸ್ವಂತಕ್ಕೆ ಅಲ್ಲ ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿ ಮುಂದಿನ ಪೀಳಿಗೆ ನೀಡಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಜಿಲ್ಲಾ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಬಿ. ವಸ್ತ್ರಮಠ ತಿಳಿಸಿದರು.
ಪ್ರಾದೇಶಿಕ ಕಛೇರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿತ್ರದುರ್ಗ ಮತ್ತು ಪರಿಸರ ತಜ್ಞರ ಸಹಯೋಗದೊಂದಿಗೆ ಕ್ರೀಡಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿಸರ ಮಿತ್ರ ಶಾಲೆ-2019 ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಪರಿಸರ ಮಿತ್ರ ಪ್ರಶಸ್ತಿಯನ್ನು ವಿತರಣೆ ಮಾಡಿ ಮಾತನಾಡಿದರು.
ಪರಿಸರ ಹಾಳಾದರೆ ಎಲ್ಲವೂ ಹಾಳಾದಂತೆ ಪರಿಸರ ಎಂದರೆ ಅದು ಬರಿ ಮಾನವರಿಗೆ ಮಾತ್ರವೇ ಸಂಬಂಧಪಟ್ಟಿಲ್ಲ ಎಲ್ಲ ಪ್ರಾಣಿಗಳಿಗೂ ಸಹಾ ಸಂಬಂಧಪಟ್ಟಿದೆ, ಆದರೆ ಮಾನವರು ಇದು ನನ್ನದು ಎಂಬ ಮನೋಭಾವದಿಂದ ಸ್ವಾರ್ಥದಿಂದ ಪರಿಸರವನ್ನು ನಾಶ ಮಾಡುತ್ತಿದ್ದಾನೆ, ಇದರ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ ಮಕ್ಕಳಾದ ನಿಮ್ಮಲ್ಲಿ ಪರಿಸರದ ಬಗ್ಗೆ ಕಾಳಜಿಯನ್ನು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಶಾಲೆಯಲ್ಲಿ ಪರಿಸರವನ್ನು ಬೆಳಸುವುದರ ಮೂಲಕ ಉತ್ತಮವಾದ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ ಎಂದರು.
ಜನಸಂಖ್ಯೆ ಹೆಚ್ಚಳವಾಗುತ್ತಿದೆ ಹೊರೆತು ಇರುವ ಭೂಮಿ ಹೆಚ್ಚಳವಾಗುತ್ತಿಲ್ಲ, ಇರುವುದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮುಂದಿನ ಜನಾಂಗಕ್ಕೆ ನೀಡಬೇಕಿದೆ, ಆದರೆ ಇದರ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ, ಎಲ್ಲವೂ ತನ್ನದು ತನಗೆ ಸೇರಿದ್ದು ಎಂದು ಮಾನವ ಹಾಳು ಮಾಡುತ್ತಿದ್ದಾನೆ, ಗಣಿಗಾರಿಕೆಯಿಂದಾಗಿ ಪರಿಸರ ಪೂರ್ಣ ಪ್ರಮಾಣದಲ್ಲಿ ಹಾಳಾಗುತ್ತಿದೆ, ನ್ಯಾಯಾಲಯ ಇದರ ಬಗ್ಗೆ ಕಾಳಜಿವಹಿಸಿದಾಗ ಗಣಿಗಾರಿಕೆ ನಿಂತಿದೆ, ಇಲ್ಲವಾದರೆ ಭೂಮಿಯನ್ನು ಪೂರ್ಣ ಪ್ರಮಾಣದಲ್ಲಿ ಬರಿದು ಮಾಡಲಾಗುತ್ತಿತು ಎಂದು ವಿಷಾಧಿಸಿದರು,
ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ : ಇತ್ತಿಚೀನ ದಿನಮಾನದಲ್ಲಿ ಎಲ್ಲೆಂದರೆ ಅಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ ಪ್ರತಿದಿನ ಲೋಡಗಟ್ಟಲೆ ಪ್ಲಾಸ್ಟಿಲದ ಕಸದ ರೂಪದಲ್ಲಿ ಬೀಳುತ್ತಿದೆ ಇದರಿಂದ ಭೂಮಿ ನಾಶದ ಅಂಚಿನಲ್ಲಿದೆ, ಒಂದು ಪ್ಲಾಸ್ಟಿಕ್ ಕೊಳೆಯಲು ವರ್ಷಗಟ್ಟಲೆ ಸಮಯ ಬೇಕಾಗುತ್ತದೆ ಆದರೆ ಇದರ ಬಗ್ಗೆ ಗಮನ ನೀಡದೇ ನಾವುಗಳು ಎಲ್ಲದಕ್ಕೂ ಸಹಾ ಪ್ಲಾಸ್ಟಿಕಗ ಬಳಕೆ ಮಾಡುತ್ತಿದ್ದೇವೆ ಇನ್ನೂ ಮುಂದಾದರು ಸಹಾ ಪ್ಲಾಸ್ಟಿಕ್ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸುವುದರ ಮೂಲಕ ಭೂಮಿಯನ್ನು ಕಾಪಾಡಬೇಕಿದೆ ಇದರ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ನ್ಯಾ, ವಸ್ತ್ರಮಠ್ ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿವತಿಯಿಂದ ನಡೆದ ಪರಿಸರ ಮಿತ್ರ ಶಾಲೆಗೆ 30ಸಾವಿರ, ಪ್ರಮಾಣ ಪತ್ರ ಮತ್ತು ಫಲಕವನ್ನು ವಿತರಣೆ ಮಾಡಲಾಯಿತು, ಇದೇ ರೀತಿ 10 ಶಾಲೆಗಳನ್ನು ಹಸಿರು ಶಾಲೆ ಮತ್ತು 10 ಶಾಲೆಗಳನ್ನು ಹಳದಿ ಶಾಲೆಗಳನ್ನಾಗಿ ಗುರುತಿಸಿ ಪ್ರಮಾಣ ಪತ್ರ ಫಲಕವನ್ನು ನೀಡಲಾಯಿತು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದಶೀ ದಿಂಡಲಕೊಪ್ಪ, ಶಿಕ್ಷಣ ಇಲಾಖೆಯ ಉಪ ನಿರ್ದೆಶಕರಾದ ಅಥೋನಿ, ಡಯಟ್‍ನ ರಮೇಶ್ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಕುಮಾರ್, ಪರಿಸರವಾದಿ ಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.