ಪಲ್ಸ್ ಪೊಲೀಯೋ ಕಾರ್ಯಕ್ರಮಕ್ಕೆ ಚಾಲನೆ

ಚಳ್ಳಕೆರೆ

         ಮುಗ್ಧ ಮಕ್ಕಳು ಪೋಲಿಯೋ ಪೀಡಿತರಾಗದೇ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪಲ್ಸ್ ಪೋಲಿಯೋ ಅಭಿಯಾನವನ್ನು ಹಮ್ಮಿಕೊಂಡಿದ್ದು, ಪೋಷಕರು ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ತಮ್ಮ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕ್ಷೇತ್ರದ ಶಾಸಕ, ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಮನವಿ ಮಾಡಿದರು.

          ಅವರು, ಭಾನುವಾರ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಪುಟ್ಟ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ಆರೋಗ್ಯ ಇಲಾಖೆಯ ಈ ಮಹತ್ವದ ಅಭಿಯಾನಕ್ಕೆ ನಾನು ಚಾಲನೆ ನೀಡುತ್ತಾ ಬಂದಿದ್ದೇನೆ. ಪ್ರತಿವರ್ಷವೂ ಸಹ ಆರೋಗ್ಯ ಇಲಾಖೆ ಈ ಅಭಿಯಾನದಲ್ಲಿ ಉತ್ತಮ ಯಶಸ್ಸನ್ನು ದಾಖಲಿಸುತ್ತಾ ಹೋಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಮನೆ ಮನೆಗೂ ಭೇಟಿ ನೀಡಿ ಮನೆಯಲ್ಲಿರುವ ಪ್ರತಿಯೊಂದು ಮಗುವಿಗೂ ಲಸಿಕೆ ಹಾಕುವ ಮೂಲಕ ಆರೋಗ್ಯ ಇಲಾಖೆ ಈ ಅಭಿಯಾನದ ಯಶಸ್ಸಿಗೆ ಸಹಕಾರಿಯಾಗಿದ್ದು, ಸಾರ್ವಜನಿಕರ ಪರವಾಗಿ ಆರೋಗ್ಯ ಇಲಾಖೆಯನ್ನು ಅಭಿನಂದಿಸುವುದಾಗಿ ತಿಳಿಸಿದರು.

       ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ, ಪ್ರಸ್ತುತ ಈ ವರ್ಷ ತಾಲ್ಲೂಕಿನ 0 ಯಿಂದ 5ರ ತನಕ ಮಕ್ಕಳ ಸಂಖ್ಯೆ 31,725 ಇದ್ದು 231 ಬೂತ್‍ಗಳಲ್ಲಿ 462 ಸಿಬ್ಬಂದಿ ವರ್ಗ ಈ ಲಸಿಕೆಯನ್ನು ಹಾಕುವರು. ಮಾರ್ಚ್ 11ರಿಂದ 13ರ ತನಕ ತಾಲ್ಲೂಕಿನ 78927 ಮನೆಗಳಿಗೆ ಭೇಟಿ ನೀಡಿ ಪುಟ್ಟ ಮಕ್ಕಳನ್ನು ಪತ್ತೆ ಹಚ್ಚಿ ಲಸಿಕೆ ಹಾಕಲಿದ್ಧಾರೆ.

         ಇದುಅಲ್ಲದೆ ಊರ ಹೊರಗಿನ ಹಟ್ಟಿಗಳು, ಗುಡ್ಡಗಾಡುಗಳ ಪ್ರದೇಶಕ್ಕೂ ತೆರಳಿ ಲಸಿಕೆ ಹಾಕುವರು. ಗ್ರಾಮೀಣ ಭಾಗದ ಪ್ರಾಥಮಿಕ ಶಾಲೆಗಳಿಗೂ ಸಹ ಭೇಟಿ ನೀಡಿ ಸಿಬ್ಬಂದಿ ವರ್ಗ ಲಸಿಕೆ ಹಾಕುತ್ತಾರೆ. ಈ ಕಾರ್ಯದಲ್ಲಿ ನಮ್ಮ ಸಿಬ್ಬಂದಿಯೊಂದಿಗೆ ಅಂಗನವಾಡಿ, ಆಶಾಕಾರ್ಯಕರ್ತರು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಸಹಕಾರ ನೀಡುತ್ತಾರೆ. 48 ಮೇಲ್ವಿಚಾರಕರು ಅಭಿಯಾನದ ಯಶಸ್ಸಿಗಾಗಿ ಶ್ರಮಿಸುತ್ತಿದ್ಧಾರೆಂದರು.

         ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಜಿ.ತಿಪ್ಪೇಸ್ವಾಮಿ ಮಾತನಾಡಿ, ನಗರಪ್ರದೇಶದಲ್ಲಿ ಒಟ್ಟು 40ಕ್ಕೂ ಹೆಚ್ಚು ಬೂತ್‍ಗಳನ್ನು ನಿರ್ಮಿಸಲಾಗಿದ್ದು, ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಮೂರು ದಿನಗಳ ಕಾಲ ಗ್ರಾಮೀಣ ಭಾಗಗಳ ಮಕ್ಕಳಿಗೆ ನಮ್ಮ ಸಿಬ್ಬಂದಿ ವರ್ಗ ಲಸಿಕೆಯನ್ನು ಹಾಕಲಿದ್ದಾರೆ. ಕಳೆದ ಬಾರಿಯೂ ಸಹ ಪ್ರಗತಿಯನ್ನು ದಾಖಲಿಸಿದ್ದು, ಈಓ ಬಾರಿಯೂ ಸಹ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವ ವಿಶ್ವಾಸವನ್ನು ಹೊಂದಲಾಗಿದೆ ಎಂದರು. 

          ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾರಾಮಣ್ಣ, ನಗರಸಭಾ ಸದಸ್ಯರಾದ ಟಿ.ಮಲ್ಲಿಕಾರ್ಜುನ, ಬಿ.ಟಿ.ರಮೇಶ್‍ಗೌಡ, ಜೈತುಂಬಿ, ಮಂಜುಳಾಪ್ರಸನ್ನ, ಸಿ.ಟಿ.ಶ್ರೀನಿವಾಸ್, ಹನುಮಂತಪ್ಪ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಓಬಣ್ಣ, ಡಾ.ಪ್ರಜ್ವಲ್‍ಧನ್ಯ, ಡಾ.ಅಮೀತ್ ಗುಪ್ತ, ಮ್ಯಾಟ್ರನ್ ಸಾಂತಮ್ಮ, ಶುಶ್ರೂಷಕಿಯರಾದ ಪಾರ್ವತಮ್ಮ, ಪುಟ್ಟರಂಗಪ್ಪ, ಮಂಜುಳಾ, ಸವಿತಾ ಮುಂತಾದವರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಡಿ.ಚಿದಾನಂದ ಸ್ವಾಗತಿಸಿದರು, ಕಿರಿಯ ಆರೋಗ್ಯ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link