ಪವಿತ್ರವಾದ ಮತದಾನ ಮಾಡಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ

ಹರಿಹರ:

       ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರವಾದುದು. ಪ್ರಾಮಾಣಿಕವಾಗಿ ಮತ್ತು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ ದೇಶವನ್ನು ಗುಣಾತ್ಮಕವಾಗಿ ಸದೃಢಗೊಳಿಬೇಕು ಎಂದು ಶ್ರೀ ಶಕ್ತಿ ಸಂಸ್ಥೆಯ ಹಿರಿಯರಾದ ವೈ .ನಾಗಪ್ಪ ಹೇಳಿದರು.

       ನಗರದ ಗುತ್ತೂರು ಕಾಲೋನಿಯ ವೃದ್ದಾಶ್ರಮದಲ್ಲಿ ಮಂಗಳವಾರ ಶ್ರೀ ಶಕ್ತಿ ಸಂಸ್ಥೆ , ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಶ್ರಯದಲ್ಲಿ ನಡೆದ ಹಿರಿಯ ನಾಗರಿಕ ಮತದಾರರ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಮತದಾರರು ಮತ ಚಲಾವಣೆಗಾಗಿ ಯಾವುದೇ ದಾಕ್ಷ ಣ್ಯಕ್ಕೆ, ಆಸೆ, ಅಮಿಷಕ್ಕೆ ಒಳಗಾಗಿ ಅತ್ಮವಂಚನೆ ಮಾಡಿಕೊಳ್ಳಬಾರದು.

         ಆ ರೀತಿಯಾದಲ್ಲಿ ಪ್ರಜಾಪ್ರಭುತ್ವದ ಅಭಿವೃದ್ಧಿಗೆ ಕುಂಠಿತವಾಗುತ್ತದೆ ಎಂದರು ಭಾರತ ಚುನಾವಣಾ ಆಯೋಗವು ಉತ್ತಮವಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದು ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗಳುನ್ನು ಆಯ್ಕೆಮಾಡಿ ಕೇಂದ್ರಕ್ಕೆ ಪ್ರತಿನಿಧಿ ನೀಡುವ ಹಕ್ಕನ್ನು ನಮಗೆ ನೀಡಿದೆ.ಅದರಿಂದ ಪ್ರತಿಯೊಬ್ಬ ವ್ಯಕ್ತಿಯು ಮಾತದಾನ ಮಾಡುವುದರ ಮೂಲಕ ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಬೇಳಸಿಕೋಳ್ಳಿ. ಆಕಾರಣದಿಂದ ಪ್ರತಿಯೊಬ್ಬರು ತಮ್ಮ ಮತವನ್ನು ಚಲಾಯಿಸಿ ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ತಿಳಿಸಿದರು.

          ನಂತರ ಹಿರಿಯ ನಾಗರಿಕ ಮತ್ತು ಸಬಲೀಕರಣ ಇಲಾಖೆಯ ಶಶಿಧರ್ ಮಾತನಾಡಿ ಜಿಲ್ಲೆಯಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ 25 ಜನ ಅಭ್ಯರ್ಥಿಗಳು ನಾಮ ಪತ್ರಸಲಿಸಿದ್ದಾರೆ. ಯಾವುದೇ ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಚುನಾವಣೆಗೆ ಸ್ಪರ್ಧೆ ಸುವ ವ್ಯಕ್ತಿಯು ಸಮರ್ಥರು, ದಕ್ಷರು,ಮತ್ತು ಚಾಣಕ್ಷರು ಆಗಿದ್ದರೆ ಮಾತ್ರ ಅ ದೇಶ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

         ವ್ಯಕ್ತಿ ಯಾರೇ ಅಗಿದ್ದರು ಸಹಾ ಸಮಾಜದ ಕಟ್ಟಕಡೆಯ ವ್ಯಕ್ತಿಯು ಕಡ್ಡಾಯವಾಗಿ ಮತದಾನ ಮಾಡಬೇಕು, ವೃದ್ಧ ಆಶ್ರಮದಲ್ಲಿ ಪ್ರತಿಯೊಬ್ಬ ವೃದ್ಧರಿಗೂ ಗುರುತಿನ ಚೀಟಿ ಇರುವ ಸ್ಥಳಗಳಲ್ಲಿ ಮತದಾನ ಮಾಡಲು ಸರ್ಕಾg ವಿಶೇಷ ವಾಹನ ವ್ಯವಸ್ಥೆ ಮಾಡಿದೆ ಅದರ ಸೌಲಭ್ಯಗಳನ್ನು ಎಲ್ಲರೂ ಬಳಸಿಕೊಳ್ಳುವಂತೆ ಆಶ್ರಮದ ಹಿರಿಯರಿಗೆ ಸಲಹೆ ನೀಡಿದರು.

           ಈ ಬಾರಿ ಚುನಾವಣೆ ಆಯೋಗವು 100 ಕ್ಕೆ 100 ರಷ್ಟು ಮತದಾನದ ಗುರಿಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಮತಗಟ್ಟೆಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಅಂಗವಿಕಲರಿಗೆ ಭೂತಕನ್ನಡಿ ವ್ಯವಸ್ಥೆ , ವಾಹನ ಸೌಲಭ್ಯ ಮಾಡಿಕೊಟ್ಟಿದೆ ಅದರ ಸದುಪಯೋಗ ಪಡೆದುಕೊಳ್ಳಿ ಎಂದರು.

          ಶ್ರೀ ಶಕ್ತಿ ಸಂಸ್ಥೆಯ ನಿರ್ದೇಶಕರಾದ ಶೈಲ ಶ್ರೀ ಅವರ ಮಾತನಾಡಿ ದೇಶದ ಸಂವಿಧಾನದವು ಪ್ರಜಾಪ್ರಭುತ್ವ ಮಾದರಿಯಲ್ಲಿ ಅಳ್ವಿಕೆ ಮಾಡುವಂತ ನಿರ್ದೇಶನ ನಿಡಿ ಮತ ಚಲಾವಣೆ ಮಾಡುವ ಹಕ್ಕನ್ನು ಹೊದಗಿಸಿಕೊಟ್ಟಿದ್ದು ಉತ್ತಮ ವ್ಯಕ್ತಿಯನ್ನು , ದೇಶವನ್ನು ಅಭಿವೃದ್ಧಿ ಮಾಡುವ ಆಯ್ಕೆ ಮಾಡಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ , ಸಂಸ್ಥೆಯ ಸದಸ್ಯರುಗಳಾದ ಜೈರಾಜ್ ,ಪಾಂಡುರಂಗ ,ವಿನೋದ ಜಗದೀಶ್. ಹಾಗೂ ವೃದ್ಧಾಶ್ರಮದ ಹಿರಿಯ ನಾಗರಿಕರು ಉಪಸ್ಥಿತರಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap