ಪಾದಚಾರಿ ಶಾಲಾ ಬಾಲಕನಿಕೆ ಕೆ.ಆರ್.ಆರ್.ಟಿ.ಸಿ ಬಸ್ ಡಿಕ್ಕಿ ಕಾಲುಮುರಿತ

ಮಿಡಗೇಶಿ:
            ಮಧುಗಿರಿ ಯಿಂದ ಪಾವಗಡ ರಾಜ್ಯ ಹೆದ್ದಾರಿ ಕೆ.ಶಿಫ್ ಲೋಕೋಪಯೋಗಿ ರಸ್ತೆ ಮಿಡಿಗೇಶಿಯ ಬಸ್ ನಿಲ್ದಾಣದ ಬಳಿ ಸೆ.5 ರಂದು ಅಪರಾಹ್ನ 12-30 ಗಂಟೆಯ ಸಮಯದಲ್ಲಿ ಬೆಂಗಳೂರಿನಿಂದ ಕೆ.ಎ40 71127 ಕಲ್ಯಾಣದುರ್ಗಕ್ಕೆ ಹಾದು ಹೋಗುವ ಬಸ್ ಶಾಲಾ ಬಾಲಕ ಎಸ್.ವಿ.ಎಂ ಕಾನ್ವೆಂಟ್ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಮಿಥುನ್(8) ಆಗಿದ್ದು ಬಸ್ ನಿಲ್ದಾನದಲ್ಲಿ ರಸ್ತೆ ದಾಟುತ್ತಿರುವಾಗ ಬಸ್ ಡಿಕ್ಕಿಹೊಡೆದ ಪರಿಣಾಮದಿಂದಾಗಿ ಬಲಗಾಲು ಮುರಿದಿದ್ದು ಕೆ.ಶಿಫ್ ಅಂಬುಲೆನ್ಸ್‍ನ ಮೂಲಕ ಮಧುಗಿರಿ ಸರ್ಕಾರಿ ತಾಲ್ಲೂಕು ಆಸ್ಪತ್ರೆಯ ಮೂಳೆ ವೈದ್ಯರಾದ ಡಾ|| ರಾಮಕೃಷ್ಣಯ್ಯನವರು ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ನಲ್ಲಿಯೇ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಗೆ ಸಾಗಿಸಿದ್ದು ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾನೆ.
             ಕೆ.ಶಿಫ್ ಇಲಾಖೆಯವರ ಮೇಲೆ ಸಾರ್ವಜನಿಕರ ಆರೋಪ ರಾಜ್ಯ ಹೆದ್ದಾರಿಯೇನೋ ಮಾಡಿದ್ದು ಆಯ್ತು. ಲೋಕಾರ್ಪಣೆಗೊಳಿಸಿದ್ದು ಆಯ್ತು ಆದರೆ ಮಿಡಿಗೇಶಿ ಬಸ್ ನಿಲ್ದಾಣದಲ್ಲಿ ಕೆ.ಶಿಫ್ ವತಿಯಿಂದ ಏನೇನು ಸೌಲಭ್ಯಗಳನ್ನು ಒದಗಿಸಬೇಕಾಗಿದೆಯೋ ಅವುಗಳಲ್ಲಿ ಒಂದನ್ನಾದರೂ ಒದಗಿಸದೇ ಇರುವುದು ಎಷ್ಠರ ಮಟ್ಟಿಗೆ ಸರಿ? ಬಸ್ ನಿಲ್ದಾಣದ ಬಳಿ ಬ್ಯಾರಿಕೇಟ್ ಕಂಬಿಗಳ ಅಳವಡಿಕೆ ಮಾಡಿರುವುದಿಲ್ಲ ರಸ್ತೆಯ ಒಂದುಕಡೆ ಚರಂಡಿ ವ್ಯವಸ್ಥೆಮಾಡಿರುತ್ತಾರೆ ಮತ್ತೊಂದು ಕಡೆ ಚರಂಡಿ ಕಲ್ಪಿಸುವ ಗೋಜಿಗೆ ಹೋಗಿರುವುದಿಲ್ಲ ಹೈಮಾಕ್ಸ್ ವಿದ್ಯುತ್ ವ್ಯವಸ್ಥೆಯು ಸಹ ಸರಿಯಾಗಿರುವುದಿಲ್ಲ ಆದ್ದರಿಂದ ಕೆ.ಶಿಫ್ ಇಲಾಖಾಧಿಕಾರಿಗಳವರು ಅತಿ ಶೀರ್ಘವಾಗಿ ಬಸ್ ನಿಲ್ದಾಣದ ಬಳಿ ಅಗತ್ಯ ಕಾರ್ಯಗಳನ್ನು ಮಾಡದೇ ಇದ್ದ ಪಕ್ಷದಲ್ಲಿ ರಸ್ತೆ ತಡೆ ಮಾಡುವ ಮೂಲಕ ಉಗ್ರ ಪ್ರತಿಭಟನೆ ಮಾಡಲಾಗುವುದೆಂಬುದಾಗಿ ಸಾರ್ವಜನಿಕರು ಈ ಮೂಲಕ ಎಚ್ಚರಿಕೆ ನೀಡಿರುತ್ತಾರೆ.

Recent Articles

spot_img

Related Stories

Share via
Copy link