ಪಾರ್ಕ್ ಕಾಮಗಾರಿಯಲ್ಲಿ ಲೋಪ; ಗುತ್ತಿಗೆದಾರ, ಇಂಜಿನೀಯರ್‍ಗೆ ತಿಪ್ಪಾರೆಡ್ಡಿ ತರಾಟೆ

ಚಿತ್ರದುರ್ಗ

      ಅಮೃತ್ ಸಿಟಿ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿರುವ ಪಾರ್ಕ್‍ಗಳ ಅಭಿವೃದ್ದಿ ಕಾಮಗಾರಿಯಲ್ಲಿ ಲೋಪ ಕಂಡು ಬಂದ ಹಿನ್ನಲೆಯಲ್ಲಿ ಗುತ್ತಿಗೆದಾರ ಮತ್ತು ಕಂಪೆನಿಯ ಅಧಿಕಾರಿಗಳಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ ಮಂಗಳವಾರ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದ ಶಾಸಕರು, ಯೂನಿಯನ್ ಪಾರ್ಕ್‍ನ ಕಾಮಗಾರಿಯಲ್ಲಿ ನಡೆದಿರುವ ಲೋಪಕಂಡು ಗರಂ ಆದರು. ಸ್ಥಳದಲ್ಲೇ ಇದ್ದ ಗುತ್ತಿಗಾರರನ್ನು ತೀವ್ರ ತರಾಟೆಗೂ ತೆಗೆದುಕೊಂಡರು

     ಕಾಮಗಾರಿಯನ್ನು ಸರಿಯಾಗಿ ಮಾಡಿದ್ದರೆ ಮಾತ್ರ ಪ್ರಮಾಣಪತ್ರವನ್ನು ನೀಡಬೇಕು ಆದರೆ ಪರ್ಸೆಂಟೇಜ್ ಪಡೆದು ಸರಿಯಾಗಿದೆ ಎಂದು ಪತ್ರವನ್ನು ನೀಡಲಾಗಿದೆ ಈ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಪತ್ರ ಬರೆಯುವಂತೆ ಅಧಿಕಾರಿಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸೂಚನೆ ನೀಡಿದರು.

      ನಗರದ ವಿವಿಧ ಪಾರ್ಕಗಳನ್ನು ಅಮೃತ್ ಸಿಟಿ ಯೋಜನೆಯಡಿ ತೆಗೆದುಕೊಂಡು ಅಭೀವೃದ್ದಿಯನ್ನು ಮಾಡಲಾಗುತ್ತಿದೆ ಇದರಲ್ಲಿ ಯೂನಿಯನ್ ಪಾರ್ಕ ಸಹಾ ಒಂದಾಗಿದ್ದು ಇಂದು ಬೆಳಿಗ್ಗೆ ಅಲ್ಲಿಗೆ ಭೇಟಿ ನೀಡಿದ ಶಾಸಕರು, ನೆಲಕ್ಕೆ ಹುಲ್ಲನ್ನು ಹಾಕುವಂತೆ ಹೇಳಲಾಗಿದೆ ಆದರೆ ಇಲ್ಲಿ ಸ್ಥಳೀಯವಾಗಿ ಸಿಗುವಂತ ಹುಲ್ಲಿನ ಬೀಜವನ್ನು ಹಾಕಲಾಗಿದೆ ಇದು ಸಾಮಾನ್ಯವಾಗಿ ಬೆಳೆಯುವ ಹುಲ್ಲಾಗಿದೆ, ಇದನ್ನು ಯಾರು ಸಹಾ ಒಪ್ಪುವುದಿಲ್ಲ, ಇದನ್ನು ಕಿತ್ತು ಸರಿಯಾದ ರೀತಿಯಲ್ಲಿ ಹುಲ್ಲನ್ನು ಹಾಕುವಂತೆ ಗುತ್ತಿಗೆದಾರನಿಗೂ ಮತ್ತು ಇದರ ಬಗ್ಗೆ ನಿಗಾವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಶಾಸಕರು ಸೂಚನೆ ನೀಡಿದರು.

      ಇದೇ ರೀತಿ ಅಲ್ಲಿ ಮಕ್ಕಳು ಆಟವಾಡಲು ಹಾಕಿದ್ದ ಮರಳಿನ ಗುಣಮಟ್ಟ ಸರಿಯಾಗಿ ಇಲ್ಲದಿರುವುದರಿಂದ ಗುತ್ತಿಗೆದಾರರನಿಗೆ ತರಾಟೆಗೆ ತೆಗೆದುಕೊಂಡು ಇದನ್ನು ಯಾರು ಸಹಾ ಮರಳು ಎನ್ನುವುದಿಲ್ಲ, ಇದಕ್ಕಿಂತ ಉತ್ತಮವಾದ ಮರಳನ್ನು ಹಾಕಿದರೆ ಮತ್ತೊಮ್ಮೆ ತೆಗೆದು ಹಾಕುವುದು ತಪ್ಪುತ್ತದೆ ಎಂದಾಗ ಗುತ್ತಿಗೆದಾರ ಇಲ್ಲಿ ಸಿಗುವುದು ಇಂತಹದೇ ಮರಳು ಅದನ್ನು ಹಾಕಿದ್ದೇನೆ ಎಂದಾಗ ಕೋಪಗೊಂಡ ಶಾಸಕರು ಇದಕ್ಕಿಂತ ಉತ್ತಮವಾದ ಮರಳು ಸಿಗುತ್ತಿದೆ ಅದನ್ನು ನಾನು ಕೊಡಿಸುತ್ತೇನೆ ಸಿಗದಿದ್ದರೆ ಇದನ್ನು ಹಾಕುವಂತೆ ಖಾರವಾಗಿ ತಿಪ್ಪಾರೆಡ್ಡಿ ನುಡಿದರು.

       ಈ ಕಾಮಗಾರಿಯ ಗುಣಮಟ್ಟವನ್ನು ಪರೀಶೀಲನೆ ಮಾಡುವ ಮೂರನೇ ಸಂಸ್ಥೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು ನೀವು ಕಾಮಗಾರಿ ಸರಿಯಾಗಿ ಇದ್ದೇಯೇ ಇಲ್ಲವೆ ಎಂದು ಪ್ರಮಾಣ ಪತ್ರವನ್ನು ನೀಡುವಾಗ ಸರಿಯಾಗಿ ಪರೀಶೀಲನೆ ಮಾಡಬೇಕು ಪರ್ಸೆಂಟೇಜ್ ಗಾಗಿ ಕೆಲಸವನ್ನು ಮಾಡಬೇಡಿ ಅಲ್ಲದೆ ಕುಡಿಯುವ ನೀರಿನ ಕಾಮಗಾರಿ ನಡೆದಿದ್ದು ಅಗೆದಿರುವ ರಸ್ತೆಯನ್ನು ರಿಪೇರಿ ಮಾಡಬೇಕೆಂದು ಇದ್ದರು ಸಹಾ ಅದನ್ನು ಮಾಡಿಸಿಲ್ಲ ಅದರೆ ಕಾಮಗಾರಿ ಸರಿ ಇದೆ ಎಂದು ಪ್ರಮಾಣೆಪತ್ರವನ್ನು ಯಾವ ರೀತಿ ನೀಡಿದಿರಿ ಎಂದು ಸಂಸ್ಥೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಈ ಸಂಸ್ಥೆಯ ಬಗ್ಗೆ ಪತ್ರವನ್ನು ಬರೆಯಿರಿ ಅಲ್ಲದೆ ಇದನ್ನು ಕಪ್ಪುಪಟ್ಟಿಗೆ ಸೇರಿಸುವಂತೆಯೂ ಸಹಾ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link