ಪಾಲಿಕೆ ಚುನಾವಣೆ: ಜನರಲ್ಲಿ ಕುತೂಹಲ

 ತುಮಕೂರು:

      ತುಮಕೂರು ಮಹಾನಗರ ಪಾಲಿಕೆ ಚುನಾವಣೆ ನಾಳೆ (ಆಗಸ್ಟ್ 31) ನಡೆಯಲಿದ್ದು, ಇದೀಗ ನಗರಾದ್ಯಂತ ‘‘ಯಾರು ಗೆಲ್ಲುವರು? ಯಾವ ಪಕ್ಷ ಎಷ್ಟು ಸ್ಥಾನ ಗಳಿಸಬಹುದು? ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಬಹುದು?’’ ಎಂಬ ವಿಷಯ ಸಾರ್ವಜನಿಕರಲ್ಲಿ ಕುತೂಹಲದ ಚರ್ಚೆಗೆ ಎಡೆಮಾಡಿಕೊಟ್ಟಿದೆ.

      ಕಳೆದ ಚುನಾವಣೆಯಲ್ಲಿ 35 ಸದಸ್ಯ ಬಲದ ಆಗಿನ ನಗರಸ‘ೆಗೆ ಆಯ್ಕೆಗೊಂಡಿದ್ದ ಸದಸ್ಯರ ಸಂಖ್ಯಾಬಲ ಹೀಗಿತ್ತು:- ಕಾಂಗ್ರೆಸ್ನಿಂದ 14, ಜೆಡಿಎಸ್ನಿಂದ 13, ಕರ್ನಾಟಕ ಜನತಾ ಪಕ್ಷ (ಕೆಜೆಪಿ)ದಿಂದ 5 ಹಾಗೂ ಬಿಜೆಪಿಯಿಂದ 3. ನಂತರದ ರಾಜಕೀಯ ಬೆಳವಣಿಗೆಯಲ್ಲಿ ಕೆಜೆಪಿ ಸದಸ್ಯರು ಬಿಜೆಪಿಯೊಂದಿಗೆ ವಿಲೀನವಾದ ಹಿನ್ನೆಲೆಯಲ್ಲಿ ಬಿಜೆಪಿ ಬಲ 8 ಆಗಿತ್ತು.

      ಇದೀಗ ಪಾಲಿಕೆಗೆ ನಡೆಯುತ್ತಿರುವ ಮೊದಲನೇ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗಳಿಸಬಹುದಾದ ಸ್ಥಾನಗಳ ಬಗ್ಗೆ ಜನರು ವಿ‘ವಿ‘ದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ‘‘ನಾವು ಬಹುಮತ ಗಳಿಸಿ, ಪಾಲಿಕೆಯ ಅಧಿಕಾರ ಚುಕ್ಕಾಣಿ ಹಿಡಿಯುತ್ತೇವೆ’’ ಎಂದು ಈವರೆಗೆ ಯಾವುದೇ ರಾಜಕೀಯ ಪಕ್ಷಗಳು ಸಾರ್ವಜನಿಕವಾಗಿ ಹೇಳಿಕೊಂಡಿಲ್ಲವೆಂಬುದು ಸಹ ಗಂಭೀರ ಚರ್ಚೆಗೊಳಗಾಗುತ್ತಿದೆ. ಈ ಮ‘್ಯೆ ಪಕ್ಷೇತರರು ಕೆಲವೆಡೆ ಗೆಲ್ಲಬಹುದು ಎಂಬ ವಿಷಯ ಸಹ ಕುತೂಹಲ ಮೂಡಿಸುತ್ತಿದೆ.

      ಇನ್ನು ಆಯಾ ವಾರ್ಡ್ಗಳ ಅ‘್ಯರ್ಥಿಗಳ ಕುರಿತೂ ಚರ್ಚೆ ನಡೆಯುತ್ತಿದೆ. ‘‘ನನಗೆ ಈ ಜಾತಿಯ ಓಟು ಬೀಳೋದು ಗ್ಯಾರಂಟಿ. ಇವರೆಲ್ಲ ಪಾರ್ಟಿ ನೋಡಿ ಓಟು ಹಾಕಿಬಿಡ್ತಾರೆ. ಗೆಲ್ಲೋದು ಗ್ಯಾರಂಟಿ’’ ಎಂದು ಕೆಲ ಅ‘್ಯರ್ಥಿಗಳು ಬೀಗುತ್ತಿದ್ದರೆ, ಇತ್ತ ಜನರು ‘‘ಯಾರನ್ನು ಆರಿಸಬೇಕು?’’ ಎಂಬ ಬಗ್ಗೆ ತಮ್ಮದೇ ವಿಮರ್ಶೆಯಲ್ಲಿ ತೊಡಗಿದ್ದಾರೆ. ಇದಕ್ಕೆ ನಿದರ್ಶನವೋ ಎಂಬಂತೆ ಓಟು ಕೇಳಲು ಹೋದ ಅ‘್ಯರ್ಥಿಯನ್ನು ‘‘ನಿಮ್ಮ ಪಕ್ಷಕ್ಕೆ ನಮ್ಮ ಈ ರಸ್ತೆಯ ಜನರು ಓಟು ಹಾಕುವುದಿಲ್ಲ. ಎರಡು-ಮೂರು ತಿಂಗಳುಗಳ ಕಾಲ ನಾವಿಲ್ಲಿ ನೀರಿನ ಸಮಸ್ಯೆ ಎದುರಿಸುವಾಗ ಯಾರೊಬ್ಬರೂ ಇತ್ತ ಸುಳಿಯಲಿಲ್ಲ. ಆದ್ದರಿಂದ ನೀವ್ಯಾರೂ ಇತ್ತ ಬರಬೇಡಿ’’ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಕಳಿಸಿರುವ ಪ್ರಸಂಗವೂ ಸ್ವಾರಸ್ಯಕರವಾಗಿ ಚರ್ಚೆಗೊಳ್ಳುತ್ತಿದೆ.

      ಇನ್ನು ಕೆಲವು ವಾರ್ಡ್ಗಳಲ್ಲಿ ಪಕ್ಷೇತರರು ನಿರ್ಣಾಯಕ ಪಾತ್ರ ವಹಿಸಲಿದ್ದು, ಜನರನ್ನಷ್ಟೇ ಅಲ್ಲದೆ ರಾಜಕೀಯ ಪಕ್ಷಗಳ ಅ‘್ಯರ್ಥಿಗಳನ್ನೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ. ‘‘ಪಕ್ಷೇತರರು ಸ್ವತಃ ಗೆಲುವು ಸಾಧಿಸಬಹುದು ಅಥವಾ ಪ್ರಮುಖ ಪಕ್ಷದ ಅ‘್ಯರ್ಥಿಯ ಸೋಲಿಗೂ ಕಾರಣವಾಗಬಹುದು’’ ಎಂದು ಜನರು ತಮ್ಮದೇ ಲೆಕ್ಕದಲ್ಲಿ ವಿಮರ್ಶಿಸುತ್ತಿದ್ದಾರೆ.

     ‘‘ಈ ಬಾರಿ ಪಾಲಿಕೆಯಲ್ಲಿ ಯಾವುದೇ ಒಂದು ಪಕ್ಷ ಪೂರ್ಣಬಹುಮತದಿಂದ ಅಧಿಕಾರ ಹಿಡಿಯುವುದೇ? ಅಥವಾ ಹಿಂದಿದ್ದಂತೆ ಪಕ್ಷಗಳ ನಡುವೆ ಹೊಂದಾಣಿಕೆ ಆಗುವುದೇ? ಎಷ್ಟು ಜನ ಪಕ್ಷೇತರರು ಗೆಲ್ಲಬಹುದು? ಗೆದ್ದ ಪಕ್ಷೇತರರು ಯಾವ ಪಕ್ಷದ ಬೆಂಬಲಕ್ಕೆ ನಿಲ್ಲಬಹುದು?’’ ಎಂಬುದು ಸಹ ಈಗ ನಗರದಲ್ಲಿ ಚರ್ಚೆಗೊಳ್ಳುತ್ತಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap