ಪಾಲಿಕೆ ಚುನಾವಣೆ: 271 ಮತಗಟ್ಟೆ ಸ್ಥಾಪನೆ

ತುಮಕೂರು :       ತುಮಕೂರು ಮಹಾನಗರ ಪಾಲಿಕೆಗೆ ಆಗಸ್ಟ್ 31 ರಂದು ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನಗರದ ಎಲ್ಲ 35 ವಾರ್ಡ್ಗಳಿಂದ ಒಟ್ಟಾರೆ 271 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಯಲ್ಲಿ ನಾಲ್ವರು ಸಿಬ್ಬಂದಿ ಇರುವರು. ಒಟ್ಟಾರೆ ಸುಮಾರು 1400 ಸಿಬ್ಬಂದಿ ಚುನಾವಣಾ ಕಾರ್ಯ ನಿರ್ವಹಿಸುವರು ಎಂದು ಮೂಲಗಳು ತಿಳಿಸಿವೆ.

ಇವಿಎಂ ಬಳಕೆ:

      ಚುನಾವಣೆ ಸಂದ‘ರ್ ಮತದಾನ ಮಾಡಲು ಈ ಬಾರಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಸಲಾಗುವುದು. ಮತದಾರರ ಅನುಕೂಲಕ್ಕಾಗಿ ಮತಯಂತ್ರಕ್ಕೆ ಅಭ್ಯರ್ಥಿಗಳ ಭಾವಚಿತ್ರ ಅಳವಡಿಸಲಾಗುವುದು. ‘‘ನೋಟಾ’’ (ಮೇಲಿನ ಯಾರೂ ಅಲ್ಲ) ಎಂಬ ಅಭಿಪ್ರಾಯಕ್ಕೂ ಅವಕಾಶ ಇರುತ್ತದೆ.

ಪಾಲಿಕೆ ಆಯುಕ್ತರಿಂದ ಮತದಾರರಿಗೆ ಸಲಹೆ:

      ‘‘271 ಮತಗಟ್ಟೆಗಳನ್ನು ವಾರ್ಡ್ ಪುನರ್ವಿಂಗಡಣೆಗೆ ಅನುಗುಣವಾಗಿ ಆಯಾಯ ವಾರ್ಡ್ಗಳ ವ್ಯಾಪ್ತಿಯೊಳಗೆ ಬರುವಂತೆ ಕ್ರಮ ಕೈಗೊಳ್ಳಲಾಗಿದೆ. ಆದರೂ ಕೆಲವು ವಾರ್ಡ್ಗಳಲ್ಲಿ ಅಲ್ಪಸ್ವಲ್ಪ ಮತದಾರರ ವ್ಯಾಪ್ತಿಯು ಬದಲಾವಣೆ ಆಗಿರುತ್ತದೆ. ಆದ್ದರಿಂದ ಮತದಾರರು ಮತಗಟ್ಟೆಯ ಸ್ಥಳ, ಮತದಾರರ ಪಟ್ಟಿಯಲ್ಲಿರುವ ಹೆಸರು ಬಗ್ಗೆ ಮೊದಲೇ ಖಾತ್ರಿ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಆಯಾ ವಾರ್ಡ್ಗಳ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಿಗೆ ಖುದ್ದು ತೆರಳಿ ಅಲ್ಲಿರುವ ಮತದಾರರ ಪಟ್ಟಿಯನ್ನು ಪರಿಶೀಲಿಸಲು ಹಾಗೂ ಮತಗಟ್ಟೆಯ ಬಿ.ಎಲ್.ಓ. ಅವರನ್ನು ಭೇಟಿ ಆಗಿ ಅಗತ್ಯ ಮಾಹಿತಿ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಆಯಾ ವಾರ್ಡ್ಗಳ ಬಿಲ್ ಕಲೆಕ್ಟರ್ ಮತ್ತು ಕಂದಾಯ ನಿರೀಕ್ಷಕರನ್ನು ಸಂಪರ್ಕಿಸಬಹುದು’’ ಎಂದು ಮಹಾನಗರ ಪಾಲಿಕೆಯ ಆಯುಕ್ತ ಎಲ್. ಮಂಜುನಾಥ ಸ್ವಾಮಿ ಅವರು ಮತದಾರರಿಗೆ ಸಲಹೆ ನೀಡಿದ್ದಾರೆ.

ಪಾಲಿಟೆಕ್ನಿಕ್ನಲ್ಲಿ ಮತಎಣಿಕೆ:

      ನಗರದ ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಸೆಪ್ಟೆಂಬರ್ 3 ರಂದು ಸೋಮವಾರ ಬೆಳಗ್ಗೆ 8 ಗಂಟೆಯಿಂದ ನಡೆಯಲಿದೆ. ಪ್ರಕ್ರಿಯೆಗೆ ಸಂಬಂಧಿಸಿದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನೂ ಇಲ್ಲೇ ನಡೆಸಲಾಗುವುದು. ಇವಿಎಂ ಬಳಸಿರುವುದರಿಂದ ಲಿತಾಂಶ ಕ್ಷಿಪ್ರವಾಗಿ ದೊರಕಲಿದ್ದು, ಬೆಳಗ್ಗೆ 11 ರ ಹೊತ್ತಿಗೆ ಲಿತಾಂಶ ಬರಬಹುದೆಂಬ ನಿರೀಕ್ಷೆ ಇದೆ.

 ಪಾಲಿಕೆ: ವಾರ್ಡ್ವಾರು ಮತದಾರರು ಮಹಿಳೆಯರೇ ಅಧಿಕ

      ತುಮಕೂರು ನಗರದ 35 ವಾರ್ಡ್ಗಳಲ್ಲಿರುವ ಮತದಾರರ ಒಟ್ಟು ಸಂಖ್ಯೆ 259513 ಇದೆ. ಇದರಲ್ಲಿ ಪುರಷರ ಸಂಖ್ಯೆ 128882, ಮಹಿಳೆಯರ ಸಂಖ್ಯೆ 130597 ಹಾಗೂ ಇತರರ ಸಂಖ್ಯೆ 34 ರಷ್ಟಿದೆ. ಮತದಾರರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆ.

 

Recent Articles

spot_img

Related Stories

Share via
Copy link