ತುಮಕೂರು
ತುಮಕೂರು ಮಹಾನಗರ ಪಾಲಿಕೆಗೆ ಪ್ರಪ್ರಥಮ ಚುನಾಯಿತ ಮಂಡಲಿಯು ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಪಾಲಿಕೆಯ ಮೇಯರ್ ಸ್ಥಾನ ಮತ್ತು ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದು, ಆ ಎರಡು ಪ್ರಮುಖ ಸ್ಥಾನಗಳನ್ನು ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಲಾಬಿ ಆರಂ‘ಗೊಂಡಿದೆ.
ಮೇಯರ್ ಸ್ಥಾನವನ್ನು ‘‘ಹಿಂದುಳಿದ ವರ್ಗ-ಎ- ಮಹಿಳೆ’’ಗೆ ಮೀಸಲಿಡಲಾಗಿದೆ. ಅಂತೆಯೇ ಉಪಮೇಯರ್ ಸ್ಥಾನವನ್ನು ‘‘ಪರಿಶಿಷ್ಟ ಜಾತಿಯ ಮಹಿಳೆ‘‘ಗೆ ಮೀಸಲಿರಿಸಲಾಗಿದೆ.
ಮೇಯರ್ ಸ್ಥಾನಕ್ಕೆ
ಈ ಮೀಸಲಾತಿ ಅನ್ವಯ ಮೇಯರ್ ಸ್ಥಾನಕ್ಕೆ ಜೆಡಿಎಸ್‌ನಲ್ಲಿ 21 ನೇ ವಾರ್ಡ್ (ಕುವೆಂಪು ನಗರ)ನಿಂದ ಆಯ್ಕೆ ಆಗಿರುವ ಮಾಜಿ ಮೇಯರ್ ಲಲಿತಾ ರವೀಶ್ ಮತ್ತು 33 ನೇ ವಾರ್ಡ್ (ಕ್ಯಾತಸಂದ್ರ) ನಿಂದ ಇದೇ ಮೊದಲ ಬಾರಿಗೆ ಪಾಲಿಕೆ ಪ್ರವೇಶಿಸಿರುವ ಶಶಿಕಲಾ ಗಂಗಹನುಮಯ್ಯ ಮತ್ತು 29 ನೇ ವಾರ್ಡ್(ಮರಳೂರು ದಿಣ್ಣೆ) ನ ನಾಜಿಮಾಬಿ ಅವರಿಗೆ ಅವಕಾಶವಿದೆ.
ಇದೇ ರೀತಿ ಕಾಂಗ್ರೆಸ್ ಪಕ್ಷದಲ್ಲಿ 13 ನೇ ವಾರ್ಡ್ (ಕುರಿಪಾಳ್ಯ)ನ ರೀದಾ ಬೇಗಂ (ಮಾಜಿ ಕಾರ್ಪೊರೇಟರ್ ಮಹಮದ್ ಹಫೀಜ್ ಅವರ ಪತ್ನಿ), 14 ನೇ ವಾರ್ಡ್(ವಿನಾಯಕ ನಗರ)ನ ನಾಸಿರಾ ಬಾನು (ಇವರು ಮಾಜಿ ಉಪ ಮೇಯರ್ ಅಸ್ಲಂ ಪಾಷ ಅವರ ಪುತ್ರಿ) ಮತ್ತು 18 ನೇ ವಾರ್ಡ್ (ಬನಶಂಕರಿ)ನ ಮುಜೀದಾ ಖಾನಂ (ಇವರು ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ) ಅವರಿಗೆ ಮೇಯರ್ ಆಗುವ ಅವಕಾಶವಿದೆ.
ಉಪಮೇಯರ್ ಸ್ಥಾನಕ್ಕೆ
ಪಾಲಿಕೆಯ ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ 9 ನೇ ವಾರ್ಡ್(ವೀರಸಾಗರ) ನ ಎಂ.ಪ್ರ‘ಾವತಿ (ಇವರು ಮಾಜಿ ಮೇಯರ್ ಸುಧೀಶ್ವರ್ ಅವರ ಪತ್ನಿ) ಮತ್ತು 19 ನೇ ವಾರ್ಡ್(ಕೋತಿತೋಪು)ನ ಬಿ.ಎಸ್.ರೂಪಶ್ರೀ ಅವರಿಗೆ ಅವಕಾಶವಿದೆ. ಜೆಡಿಎಸ್ ಈ ಮೀಸಲಾತಿಯುಳ್ಳ ಯಾವುದೇ ಅಭ್ಯರ್ಥಿಗಳಿಲ್ಲ.