ಚಿಕ್ಕನಾಯಕನಹಳ್ಳಿ :
ಸಾಲ ಮನ್ನಾ ಯೋಜನೆಯಲ್ಲಿ ಸರ್ಕಾರ ಎಲ್ಲಾ ಬ್ಯಾಂಕ್, ವರ್ಗಗಳ ಸಾಲ ಮನ್ನಾ ಮಾಡುತ್ತಿದೆ ಆದರೆ ಪಿಎಲ್‍ಡಿ ಬ್ಯಾಂಕ್‍ನಲ್ಲಿ ಸಾಲ ಪಡೆದ ರೈತರ ಸಾಲ ಮನ್ನಾವಾಗುತ್ತಿಲ್ಲ ಇದರಿಂದಲೇ ರಾಜ್ಯಾದ್ಯಂತ ಪಿಎಲ್‍ಡಿ ಬ್ಯಾಂಕ್‍ಗಳು ನಷ್ಠದತ್ತ ಮುಖ ಮಾಡಿವೆ ಎಂದು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಹೆಚ್.ಆರ್.ಶಶಿಧರ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಪಿಎಲ್‍ಡಿ ಬ್ಯಾಂಕ್‍ನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರ ಸಹಕಾರಿ ಸಂಘಗಳ ಬೆಳೆ ಸಾಲವನ್ನು ಮಾತ್ರ ಮನ್ನಾ ಮಾಡುತ್ತಿದೆ ಆದರೆ ಪಿಎಲ್‍ಡಿ ಬ್ಯಾಂಕ್‍ನಲ್ಲಿ ಪಡೆದಿರುವ ಸಾಲವನ್ನು ಮನ್ನಾ ಮಾಡಿಲ್ಲ, ಇದರಿಂದ ರೈತರಲ್ಲಿಯೂ ತಾರತಮ್ಯ ಮಾಡುವ ಸ್ಥಿತಿ ಎದುರಾಗಿದೆ, ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಜೊತೆಗೆ ಬೆಳೆಯೂ ಕೈಗೆ ದೊರಕದೆ ರೈತರು ಇಂದು ನಷ್ಠದ ಸ್ಥಿತಿ ತಲುಪಿದ್ದಾರೆ, ಇದರಿಂದ ಪಿಎಲ್‍ಡಿ ಬ್ಯಾಂಕ್‍ನಲ್ಲಿ ಸಾಲ ಪಡೆದ ರೈತರು ಸಾಲ ಕಟ್ಟಲಾಗದೆ ಸಂಕಷ್ಠದ ಸುಳಿಯಲ್ಲಿ ಸಿಲುಕಿದ್ದಾರೆ, ಬ್ಯಾಂಕಿನಲ್ಲಿ ಸಾಲ ಮರುಪಾವತಿಯಾಗದೆ ಪಿಎಲ್‍ಡಿ ಬ್ಯಾಂಕ್ ಕೂಡ ನಷ್ಠದ ಸುಳಿಯಲ್ಲಿ ಸಿಲುಕುತ್ತಿದೆ ಈ ಬಗ್ಗೆ ಶಾಸಕರಿಗೆ ಗಮನಕ್ಕೂ ತಂದಿದ್ದೇವೆ, ಶಾಸಕರು ಮುಂದಿನ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚಿಸುವ ಬಗ್ಗೆ ತಿಳಿಸಿದ್ದಾರೆ ಎಂದರು.
ಚಿ.ನಾ.ಹಳ್ಳಿ ಪಿಎಲ್‍ಡಿ ಬ್ಯಾಂಕ್‍ನಲ್ಲಿ 6637 ಷೇರುದಾರರಿದ್ದಾರೆ, ಬ್ಯಾಂಕಿನಲ್ಲಿ ಬ್ಯಾಂಕಿನಿಂದ ಸಾಲ ನೀಡಿರುವಲ್ಲಿ 4ಕೋಟಿಯಷ್ಟು ಸಾಲದಲ್ಲಿ 1ಕೋಟಿ ವಸೂಲಾಗಿದೆ ಇನ್ನೂ 3ಕೋಟಿಯಷ್ಟು ಸಾಲ ಬಾಕಿಯಿದೆ ಎಂದು ಹೇಳಿದರು.
ಷೇರುದಾರ ಬಸವರಾಜು ಮಾತನಾಡಿ, ರಾಜ್ಯದಲ್ಲಿ ನೀರಾವರಿ ಜಾಗದಲ್ಲಿರುವ ಪಿಎಲ್‍ಡಿ ಬ್ಯಾಂಕ್‍ಗಳು ಉತ್ತಮ ಸ್ಥಿತಿಯಲ್ಲಿವೆ ಅಲ್ಲಿನ ರೈತರು ಸಾಲ ಕಟ್ಟುತ್ತಿದ್ದಾರೆ ಆದರೆ ಬರಪೀಡಿತ ಪ್ರದೇಶವಾದ ಈ ಭಾಗದಲ್ಲಿ ರೈತರಿಗೆ ಬೆಳೆ ಇಲ್ಲದೆ ನಷ್ಠ ಅನುಭವಿಸುತ್ತಿದ್ದಾರೆ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರು, ಉಪಾಧ್ಯಕ್ಷರು, ಸದ್ಯರು ರಾಜ್ಯದ್ಯಂತ ಹೋರಾಟ ಮಾಡಿ ಈ ಬ್ಯಾಂಕಿನ ಸಾಲವನ್ನು ಮನ್ನಾ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಸಭೆಯಲ್ಲಿ ಹೇಳಿದರು.
ಸಭೆಯಲ್ಲಿ ಪಿಎಲ್‍ಡಿ ಬ್ಯಾಂಕ್‍ನ ಉಪಾಧ್ಯಕ್ಷ ಜಯದೇವ್, ಸದಸ್ಯರಾದ ಬರಗೂರು ಬಸವರಾಜು, ಬುಳ್ಳೇನಹಳ್ಳಿ ಶಿವಪ್ರಕಾಶ್, ಎಂ.ಎನ್.ಶಿವರಾಜು, ರಂಗನಾಥ್, ಕಲ್ಪನಾ, ಲಕ್ಷ್ಮೀದೇವಮ್ಮ, ಧನಂಜಯ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು