ತೆಲಂಗಾಣ:
ಫಲಿತಾಂಶದಲ್ಲಿ ಉಂಟಾದ ಎಡವಟ್ಟಿನಿಂದಾಗಿ ಈಗಾಗಲೇ ತೆಲಂಗಾಣದಲ್ಲಿ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೋಷಕರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ತೆಲಂಗಾಣ ಮಾಧ್ಯಮಿಕ ಶಿಕ್ಷಣ ಮಂಡಳಿ ಹಾಗೂ ಸರ್ಕಾರ ಆಗಿರುವ ತಪ್ಪನ್ನು ಒಪ್ಪಿಕೊಂಡು, ತನಿಖೆಗೆ ಆದೇಶಿಸಿದೆ.
ಈ ಪ್ರಕರಣ ಸಂಬಂಧ ನೇಮಿಸಲ್ಪಟ್ಟ ಮೂರು ಜನ ಸದಸ್ಯರಿದ್ದ ಸಮಿತಿಯು ಸರ್ಕಾರದ ಶಿಕ್ಷಣ ಮಂಡಳಿಗೆ (ಬಿಐಇ) ವರದಿ ನೀಡಿ, ಕರ್ತವ್ಯಲೋಪ ಎಸಗಿದ್ದ ಶಿಕ್ಷಕಿ ಮೇಲೆ ಶಿಸ್ತುಕ್ರಮ ಜರುಗಿಸುವಂತೆ ಶಿಫಾರಸ್ಸು ಮಾಡಿತ್ತು. ಶಿಫಾರಸ್ಸಿನಂತೆ ಬಿಐಇ ಭಾನುವಾರ ಶಿಕ್ಷಕಿ ಉಮಾದೇವಿ ಅವರಿಗೆ 5 ಸಾವಿರ ದಂಡ ವಿಧಿಸಿದೆ. ಅಲ್ಲದೇ, ಈ ಪ್ರಮಾದ ತಡೆಗಟ್ಟಲು ವಿಫಲರಾದ ಮೇಲ್ವಿಚಾರಕ, ಬುಡಕಟ್ಟು ಕಲ್ಯಾಣ ಶಾಲೆಯ ಶಿಕ್ಷಕ ವಿಜಯ್ ಕುಮಾರ್ ಅವರನ್ನು ಅಮಾನತು ಮಾಡಿದೆ.
ಫಲಿತಾಂಶದಲ್ಲಿ ಉಂಟಾದ ಎಡವಟ್ಟಿನಿಂದಾಗಿ ಈಗಾಗಲೇ ತೆಲಂಗಾಣದಲ್ಲಿ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೋಷಕರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ತೆಲಂಗಾಣ ಮಾಧ್ಯಮಿಕ ಶಿಕ್ಷಣ ಮಂಡಳಿ ಹಾಗೂ ಸರ್ಕಾರ ಆಗಿರುವ ತಪ್ಪನ್ನು ಒಪ್ಪಿಕೊಂಡು, ತನಿಖೆಗೆ ಆದೇಶಿಸಿದೆ. ಅಲ್ಲದೇ ಫೇಲಾಗಿರುವ ಮೂರು ಲಕ್ಷ ವಿದ್ಯಾರ್ಥಿಗಳ ಉತ್ತರಪತ್ರಿಕೆಯನ್ನು ಮತ್ತೊಮ್ಮೆ ಉಚಿತವಾಗಿ ಮರುಮೌಲ್ಯಮಾಪನ ನಡೆಸುವುದಾಗಿ ಘೋಷಿಸಿದೆ