ಪೆಟ್ರೋಲ್‌, ಡೀಸೆಲ್‌ ವ್ಯಾಟ್‌ ಇಳಿಕೆ ಅಸಾಧ್ಯ: ಸಿಎಂ ಕುಮಾರಸ್ವಾಮಿ

ಬೆಂಗಳೂರು :

ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಗಗನಮುಖೀಯಾಗುತ್ತಿರುವ ಹೊರತಾಗಿಯೂ ಅವಗಳ ಮೇಲಿನ ವ್ಯಾಟ್‌ ಇಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್‌ ಡಿ  ಕುಮಾರಸ್ವಾಮಿ ಹೇಳಿದ್ದಾರೆ.

ಇದೇ ವೇಳೆ ಪೆಟ್ರೋಲ್‌ ಲೀಟರ್‌ ಬೆಲೆ 81 ರೂ. ಆಗಿದೆ; ಡೀಸೆಲ್‌ ಬೆಲೆ ಲೀಟರಿಗೆ 71 ಆಗಿದೆ. ಏರುತ್ತಿರುವ ಈ ಬೆಲೆಗಳನ್ನು ಇಳಿಸುವ ದಿಶೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಏನನ್ನೂ ಮಾಡುತ್ತಿಲ್ಲ ಎಂಬ ಆಕ್ರೋಶವನ್ನು ಜನಸಾಮಾನ್ಯರು ತೋರ್ಪಡಿಸುತ್ತಿದ್ದಾರೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಮಾರಾಟ ತೆರಿಗೆಯು ರಾಜ್ಯ ಸರಕಾರದ ಪ್ರಮುಖ ಆದಾಯ ಮೂಲವಾಗಿದ್ದು ಇದನ್ನು ಕಳೆದುಕೊಳ್ಳಲು ಅದು ಸುತರಾಂ ಬಯಸುವುದಿಲ್ಲ. ಜಿಎಸ್‌ಟಿ ಅಡಿ ಪೆಟ್ರೋಲ್‌, ಡೀಸೆಲ್‌ ತಂದರೂ ಅವುಗಳ ಮೇಲೆ ವ್ಯಾಟ್‌ ಹೇರುವ ಅಧಿಕಾರ ರಾಜ್ಯ ಸರಕಾರಗಳಿಗೆ ಇದೇ ಇರುವುದರಿಂದ ಜನರಿಗಂತೂ ಜಿಎಸ್‌ಟಿಯಿಂದ ಯಾವುದೇ ಲಾಭವಾಗುವುದಿಲ್ಲ  ಎನ್ನಲಾಗುತ್ತಿದೆ.

ಡೀಸೆಲ್‌ ದರ ಹೆಚ್ಚುತ್ತಿರುವ ಹೊರತಾಗಿಯೂ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಈ ತನಕ ಪ್ರಯಾಣ ದರ ಹೆಚ್ಚಿಸದಿರುವದೊಂದೇ ಜನಸಾಮಾನ್ಯರಿಗೆ ಸಮಾಧಾನದ ವಿಷಯವಾಗಿದೆ. ಜನರು ಈ ದಿನಗಳಲ್ಲಿ ತಮ್ಮ ಸ್ವಂತ ವಾಹನವನ್ನು ಮನೆಯಲ್ಲೇ ಉಳಿಸಿಕೊಂಡು ಸಮೂಹ ಸಾರಿಗೆಯನ್ನೇ ಹೆಚ್ಚಾಗಿ ಬಳಸುತ್ತಿರುವದು ಕಂಡು ಬರುತ್ತಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap