ಪಾವಗಡ:-
ಮದುವೆ ಮಟ್ಟಪಕ್ಕೆ ತೆರಳುತ್ತಿದಾ ಟಾಟಾ ಏಸ್ ವಾಹನಕ್ಕೆ ಬೂಲೆರೊ ವಾಹನ ಡಿಕ್ಕಿ ಹೊಡೆದಾ ಪರಿಣಾಮ ಆರು ಜನ ಸ್ಥಳದಲ್ಲೆ ಸಾವನ್ನಪ್ಪಿದ್ದ ಘಟನೆ ಪಾವಗಡ ಗಡಿಯ ಪೆನುಗೊಂಡ ತಾಲ್ಲೂಕಿನ ಸತ್ತಾರಪಲ್ಲಿ ಗ್ರಾಮದ ಬಳಿ ಶುಕ್ರವಾರ ಬೆಳ್ಳಿಗ್ಗೆ ನಡೆದಿದೆ.
ಆಂಧ್ರ ಪ್ರದೇಶದ ಅನಂತಪುರದಲ್ಲಿ ಶುಕ್ರವಾರ ವೈ.ಎಸ್.ಆರ್ ಪಕ್ಷದ ಮುಖಂಡರಾದ ಶ್ರೀಧರನಾರಾಯಣ ಪುತ್ರನ ಮದುವೆಗೆ ಪೆನುಗೊಂಡ ತಾಲ್ಲೂಕಿನ ತಿಮ್ಮಪೂರ ಮತ್ತು ಲಕ್ಸಂಪಲ್ಲಿ ಗ್ರಾಮದವರು ಟಾಟಾಏಸ್ ವಾಹನದಲ್ಲಿ ಮದುವೆಗೆ ತೆರಳುವಾ ವೇಳೆ ಸತ್ತಾರಪಲ್ಲಿ ಗ್ರಾಮದ ಸಮೀಪ ಬಾಳೆಹಣ್ಣು ತುಂಬಿ ಬರುತ್ತಿದ್ದ ಬೂಲೆರೊ ವಾಹನ ಆತೀ ವೇಗದಿಂದ ಬಂದು ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೋಡೆದಾ ಪರಿಣಾಮ ಆರು ಜನ ಸ್ಥಳದಲ್ಲೆ ಸಾವನ್ನಪ್ಪಿದ್ದು , ವಾಹನದಲ್ಲಿದ್ದ ಇತರೆ ಹತ್ತು ಮಂದಿಗೆ ಗಂಬೀರವಾಗಿ ಗಾಯಗೊಂಡಿದ್ದು , ಗಾಯಗೋಂಡವರನ್ನು ಚಿಕಿತ್ಸೆಗಾಗಿ ಪೆನುಗೊಂಡ ಹಾಗೂ ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಅಪಘಾತದಲ್ಲಿ ರವೀಂದ್ರರೆಡ್ಡಿ 40 , ವೆಂಕಟಸ್ವಾಮಿ 65 , ಗೋಪಾಲರೆಡ್ಡಿ 60 ,ಗೊಲ್ಲ ಅಂಜಿನೇಯಲು 36 , ವಡ್ಡಿ ಅಂಜಿನೇಯಲು 31 , ವೆಂಕಟಪ್ಪ 50 ಮೃತಪಟ್ಟಿರುತ್ತಾರೆ.
ಘಟನಾ ಸ್ಥಳಕ್ಕೆ ಪೆನುಗೊಂಡ ಶಾಸಕರಾದ ಪಾರ್ಥಸಾರಥಿ,ಎಐಸಿಸಿ ಸದಸ್ಯರಾದ ಪಿ.ಶ್ರೀಧರ್‍ರವರು ಬೇಟಿ ನೀಡಿ ಮೃತರ ಕುಟುಂಬಗಳಿಗೆ ಸ್ವಾಂತನ ಹೇಳಿ ಬೀಮಾ ವಿಮಾ ಯೋಜನೆಡಿಯಲ್ಲಿ 4 ಜನಕ್ಕೆ 5 ಲಕ್ಷ,ವಿಮಾ ಇಲ್ಲದ ಮೃತರಿಗೆ ತಲಾ 2 ಲಕ್ಷ ಹಣ ನೀಡುವುದಾಗಿ ತಿಳಿಸಿರುತ್ತಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಪೆನುಗೊಂಡ ಪೋಲಿಸರು ಅಪಘಾತ ಸ್ಥಳಕ್ಕೆ ಬೇಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
