ಪೇಶಾವರ ಮಸೀದಿ ಸ್ಫೋಟ : ಪಾಕಿಸ್ತಾನಕ್ಕೆ ಠಕ್ಕರ್ ನೀಡಿದ ಅಫ್ಘಾನಿಸ್ತಾನ

ನವದೆಹಲಿ:

      ಕೆಲ ದಿನಗಳ ಹಿಂದೆ ನಡೆದಿದ್ದ ಪೇಶಾವರ ಮಸೀದಿ ಸ್ಫೋಟಕ್ಕೆ ಅಫ್ಘಾನಿಸ್ತಾನವನ್ನು ದೂಷಿಸಿದ್ದಕ್ಕಾಗಿ ತಾಲಿಬಾನ್ ಪಾಕಿಸ್ತಾನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ತಾಲಿಬಾನ್‌ನ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಮುಟ್ಟಾಕಿ ಅವರು ಭಯೋತ್ಪಾದಕ ಹತ್ಯಾಕಾಂಡಕ್ಕಾಗಿ ನೆರೆಯ ದೇಶವನ್ನು  ದೂಷಿಸುವ ಬದಲು ಘಟನೆಯ  ಬಗ್ಗೆ ಸೂಕ್ತ ರೀತಿಯಲ್ಲಿ  ತನಿಖೆ ನಡೆಸುವಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ “ನಿಮ್ಮ ವೈಫಲ್ಯಗಳಿಗೆ ಇತರರನ್ನು ದೂಷಿಸಬೇಡಿ” ಎಂದು ತಾಲಿಬಾನ್ ಠಕ್ಕರ್‌ ಕೊಟ್ಟಿದೆ.

     ಜನವರಿ 30 ರಂದು, ಪೇಶಾವರ ಪೊಲೀಸ್ ಲೈನ್ಸ್ ಪ್ರದೇಶದ ಮಸೀದಿಯೊಂದರಲ್ಲಿ ಆತ್ಮಹತ್ಯಾ ಬಾಂಬ್ ದಾಳಿಯು ಕನಿಷ್ಠ 101 ಜನರನ್ನು ಬಲಿ ತೆಗೆದುಕೊಂಡಿತು. ಕಾಬೂಲ್ ಅನ್ನು ದೂಷಿಸುವ ಬದಲು ಪೇಶಾವರ ದಾಳಿಯ ಬಗ್ಗೆ ತನಿಖೆ ನಡೆಸುವಂತೆ ಪಾಕಿಸ್ತಾನಕ್ಕೆ ಕರೆ ನೀಡಿದ ಮುಟ್ಟಾಕಿ ಮತ್ತು ಅಫ್ಘಾನಿಸ್ತಾನವು ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಲ್ಲ ಎಂದು ಸಮರ್ಥಿಸಿಕೊಂಡಿದೆ.

ಪಾಕಿಸ್ತಾನದ ಅಧಿಕಾರಿಗಳು ಸ್ಥಳೀಯವಾಗಿ ತಮ್ಮ ಭದ್ರತಾ ಸವಾಲುಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಮತ್ತು ಉಭಯ ದೇಶಗಳ ನಡುವೆ “ಶತ್ರುತ್ವದ ಬೀಜಗಳನ್ನು ಬಿತ್ತುವುದನ್ನು” ನಿಲ್ಲಿಸಬೇಕು ಎಂದು ರಾಜಧಾನಿ ಕಾಬೂಲ್‌ನಲ್ಲಿ ನಡೆದ ಸಭೆಯಲ್ಲಿ ಹೇಳಿದರು.

Recent Articles

spot_img

Related Stories

Share via
Copy link
Powered by Social Snap