ಪೋಷಕರ ಗಮನಕ್ಕೆ : ವೃತ್ತಿ ಶಿಕ್ಷಣ ಕೋರ್ಸ್ ಶುಲ್ಕ ಹೆಚ್ಚಳ

ಬೆಂಗಳೂರು 

    ವೃತ್ತಿಪರ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ ನಡೆಸಿದ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಇದರ ಬೆನ್ನಲ್ಲೇ ಎಂಜಿನಿಯರಿAಗ್ ಕೋರ್ಸ್ ಗಳ ಶುಲ್ಕ ಶೇಕಡಾ 10ರಷ್ಟು ಹೆಚ್ಚಾಗಲಿದೆ.

     ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಈ ವಿಷಯ ತಿಳಿಸಿದ್ದು, ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಶುಲ್ಕವನ್ನು ಈ ಬಾರಿ ಶೇ. 10ರಷ್ಟು ಹೆಚ್ಚಿಸಲಾಗುತ್ತದೆ. ಹಿಂದಿನ ಸರ್ಕಾರದ ಅವಧಿಯಲ್ಲೇ ಶುಲ್ಕ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿತ್ತು ಎಂದು ಅವರು ತಿಳಿಸಿದರು. ಕಾಲೇಜುಗಳ ಜತೆಯೂ ಚರ್ಚೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದಿದ್ದಾರೆ. ಕಳೆದ ಬಾರಿ ಇಂಜಿನಿಯರಿಂಗ್‌ನಲ್ಲಿ 1,66000 ಸೀಟ್‌ಗಳು ಲಭ್ಯವಿದ್ದವು. ಈ ಬಾರಿ 2 ಲಕ್ಷಕ್ಕೂ ಹೆಚ್ಚು ಸೀಟ್‌ಗಳು ಲಭ್ಯವಿದೆ ಎಂದು ತಿಳಿಸಿದರು.

1. ಸರ್ಕಾರಿ ಕಾಲೇಜುಗಳಲ್ಲಿ- 42,020 ರೂ.

2. ಅನುದಾನಿತ ಕಾಲೇಜು- 42,020 ರೂ.

3. ಅನುದಾನರಹಿತ ಟೈಪ್ 1- 1,00,976 ರೂ.

4. ಅನುದಾನರಹಿತ ಟೈಪ್ 2- 1,08,882 ರೂ.

5. ಖಾಸಗಿ ಮತ್ತು ಡೀಮ್ಡ್- 1,00,976 ರೂ.

ಎಂಜಿನಿಯರಿಂಗ್ ಟಾಪರ್‌ಗಳಿಗೆ ವಿದ್ಯಾರ್ಥಿ ವೇತನ

ಎಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆದ ಸಿಇಟಿಯಲ್ಲಿ ಟಾಪ್ 10 ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿದ್ಯಾರ್ಥಿ ವೇತನ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ರಮ್ಯಾ ಅವರು ತಿಳಿಸಿದರು.

ಅಸಿಸ್ಟೆಂಟ್ ಪ್ರೊಫೆಸರ್ ನೇಮಕಾತಿ ಅಕ್ರಮ    ರಾಜ್ಯದಲ್ಲಿ ನಡೆದಿದೆ ಎನ್ನಲಾದ ಅಸಿಸ್ಟೆಂಟ್ ಪ್ರೊಫೆಸರ್ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಸಿಐಡಿ ತನಿಖೆಗೆ ಆದೇಶ ನೀಡಲಾಗಿತ್ತು. ತನಿಖಾಧಿಕಾರಿಗಳು ಇಲಾಖೆಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ತನಿಖಾ ಪೂರ್ಣಗೊಂಡಿದ್ದು ವರದಿ ಕೈ ಸೇರಿಲ್ಲ ಎಂದು ಸಚಿವ ಡಾ. ಎಂ.ಸಿ ಸುಧಾಕರ್ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap