ಪೌರಸೇವೆಗಳು ಇನ್ನು ಮುಂದೆ ಆನ್‌ಲೈನ್‌ನಲ್ಲಿ

ತುಮಕೂರು
          ‘‘ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ, ವಹಿ-ನಕಲು (ಖಾತಾ), ಕಟ್ಟಡ ನಕ್ಷೆ ಅನುಮೋದನೆ, ನೀರು ಮತ್ತು ವಿದ್ಯುತ್ ಸಂಪರ್ಕ, ರಸ್ತೆ ತುಂಡರಿಸಲು ಅನುಮತಿ ಇತ್ಯಾದಿ ಎಲ್ಲ ಪೌರ ಸೇವೆಗಳನ್ನು ದಿನಾಂಕ 01-01-2019 ರಿಂದ ಆನ್‌ಲೈನ್ ತಂತ್ರಾಂಶದ ಮೂಲಕವೇ ನಾಗರಿಕರಿಗೆ ಒದಗಿಸುವುದನ್ನು ಕಡ್ಡಾಯಗೊಳಿಸಿ’’ ರಾಜ್ಯ ಸರ್ಕಾರ ಮಹತ್ವದ ಆದೇಶ (ಸಂಖ್ಯೆ: ನಅಇ/152/ಎಸ್.ಎ್.ಸಿ./ 2018, ದಿನಾಂಕ: 29-08-2018) ವನ್ನು ಇತ್ತೀಚೆಗೆ ಹೊರಡಿಸಿದೆ.
ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ಯೋಮೇಕೋ) ಕೆ.ಲಲಿತಾ ಬಾಯಿ ಅವರು ಈ ಆದೇಶಕ್ಕೆ ಸಹಿ ಹಾಕಿದ್ದಾರೆ.
           ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಾಗರಿಕ ಸೇವೆಗಳನ್ನು ಸ್ವಯಂಚಾಲಿತ ಆನ್‌ಲೈನ್ ತಂತ್ರಾಂಶದ ಮೂಲಕ ಒದಗಿಸುವುದನ್ನು ಕಡ್ಡಾಯಗೊಳಿಸಲು ಉದ್ದೇಶಿಸಿ ಸರ್ಕಾರವು ಈ ಆದೇಶ ಹೊರಡಿಸಿದೆ.
‘‘ಕರ್ನಾಟಕ ಮುನಿಸಿಪಲ್ ಡೇಟಾ ಸೊಸೈಟಿ ಮುಖಾಂತರ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಟ್ಟಡ ಪರವಾನಗಿ ಮತ್ತು ಲೇಔಟ್ ಅನುಮೋದನಾ ವ್ಯವಸ್ಥೆ (ಎಲ್ ಬಿ ಬಿ ಎ ಎಸ್) ತಂತ್ರಾಂಶವನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಅಗತ್ಯವಿದ್ದೆಡೆ ಗ್ರಾಹಕೀಕರಣ (ಕಸ್ಟಮೈಸೇಷನ್) ಮಾಡಿ ಬಳಸಲು ಸಹ ಅನುಮತಿಸಲಾಗಿದೆ’’ ಎಂದು ಸದರಿ ಆದೇಶದಲ್ಲಿ ತಿಳಿಸಲಾಗಿದೆ.

 

Recent Articles

spot_img

Related Stories

Share via
Copy link