ಪ್ರಗತಿ ಪಥದಲ್ಲಿ ಶಿರಾ ತಾ|| ಕನಕಪತ್ತಿನ ಸಹಕಾರ ಸಂಘ

ಶಿರಾ:

               1,30,43,093 ರೂಗಳ ಷೇರು ಬಂಡವಾಳ ಹೊಂದಿರುವ ಶಿರಾ ತಾ|| ಕನಕಪತ್ತಿನ ಸಹಕಾರ ಸಂಘವು 1,69,24,284 ರೂಗಳ ನಿವ್ವಳ ಲಾಭ ಗಳಿಸಲು ಗ್ರಾಹಕರು, ಷೇರುದಾರರು, ಠೇವಣಿದಾರರಷ್ಟೇ ಅಲ್ಲದೆ ಸಂಘದ ನಿರ್ದೇಶಕರು ಹಾಗೂ ಸಿಬ್ಬಂಧಿಯ ಶ್ರಮವೂ ಕಾರಣ ಎಂದು ಸಂಘದ ಅಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
               ನಗರದ ಕನಕಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಹಕರಿಗೆ ವಾಹನ ಸಾಲ, ಗಿರವಿ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡಲಾಗಿದ್ದು 2017-18ನೇ ಸಾಲಿನಲ್ಲಿ ಶೇ.96 ರಷ್ಟು ಸಾಲ ವಸೂಲಾತಿಯೂ ಆಗಿದೆ ಎಂದರು.
               2002ರಿಂದ ಇಲ್ಲಿಯವರೆಗೆ ನಮ್ಮ ಸಹಕಾರ ಸಂಘವು 7 ಶಾಖೆಗಳನ್ನು ಹೊಂದಿದ್ದು ಎಲ್ಲಾ ಶಾಖೆಗಳೂ ಲಾಭ ಗಳಿಕೆಯತ್ತ ಮುಂದುವರೆಯುತ್ತಿವೆ. ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಹಕಾರ ಸಂಘ ಅನ್ನುವ ಖ್ಯಾತಿಗೂ ನಮ್ಮ ಸಂಘ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಸಂಘದ ವತಿಯಿಂದ ಸೆ:8 ರಂದು ನಡೆಯುವ ಸರ್ವ ಸದಸ್ರ ಸಭೆಯಲ್ಲಿ ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಇದರೊಟ್ಟಿಗೆ ಮುಂಬರುವ ದಿನಗಳಲ್ಲಿ ಆರೋಗ್ಯ ಶಿಬಿರಗಳನ್ನು ಕೈಗೊಳ್ಳಲಾಗುವುದು. ಆರೋಗ್ಯ ಯೋಜನಾ ಭಾಗ್ಯ ಕಲ್ಪಸಲು ಸಂಘವು ಸಿದ್ಧತೆ ನಡೆಸಿದೆ ಎಂದು ಮಂಜುನಾಥ್ ತಿಳಿಸಿದರು.

Recent Articles

spot_img

Related Stories

Share via
Copy link