ಪ್ರತಿಯೊಬ್ಬರ ಭವಿಷ್ಯದ ಬದುಕಿಗೆ ಜೀವವಿಮಾ ನಿಗಮ ದಿಕ್ಸೂಚಿ – ಡಾ.ಬಿ.ರಾಕೇಶ್ ಅಭಿಮತ

ಚಳ್ಳಕೆರೆ

          ಭಾರತೀಯ ಜೀವವಿಮಾ ನಿಗಮ ಪ್ರತಿಯೊಬ್ಬರ ಬದುಕಿಗೂ ಭದ್ರವಾದ ಬುನಾದಿಯನ್ನು ಒದಗಿಸುತ್ತದೆ. ಪ್ರತಿಯೊಂದು ಹಂತದಲ್ಲೂ ನಾಡಿನ ಜನತೆ ಹಾಗೂ ಸರ್ಕಾರಕ್ಕೆ ತನ್ನದೇಯಾದ ರೀತಿಯಲ್ಲಿ ನೆರವನ್ನು ನೀಡುವ ಮೂಲಕ ಪ್ರತಿಯೊಬ್ಬರಿಗೂ ಆಸರೆಯಾಗಿದೆ. ಜೀವ ವಿಮಾ ನಿಗಮ ಮಾತ್ರ ಭವಿಷ್ಯದ ಬದುಕಿನ ದಿಕ್ಸೂಚಿ ಎಂದರೆ ಅತಿಶೋಯೋಕ್ತಿಯಲ್ಲವೆಂದು ಇಲ್ಲಿನ ಖ್ಯಾತ ಹೃದಯ ತಜ್ಞ ಡಾ.ಬಿ.ರಾಕೇಶ್ ತಿಳಿಸಿದರು.

           ಅವರು, ಶನಿವಾರ ಇಲ್ಲಿನ ಜೀವವಿಮಾ ಕಚೇರಿಯಲ್ಲಿ ನಿಗಮ ಹಮ್ಮಿಕೊಂಡಿದ್ದ 62ನೇ ವರ್ಷದ ಸಂಸ್ಥಾಪಕ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿವ ಮೂಲಕ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರ ಮಟ್ಟದಲ್ಲಿ ಜನಸಾಮಾನ್ಯರ ಬದುಕಿಗೆ ಆಸರೆಯಾಗಿರುವ ಜೀವವಿಮಾ ನಿಗಮ ತಮ್ಮದೇಯಾದ ಸೇವೆಯಿಂದ ಎಲ್ಲರ ಹೃದಯವನ್ನು ಗೆದ್ದಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಿಂದ ಬರುವ ಪಾಲಿಸಿದಾರರ ಕಾರ್ಯಗಳು ವಿಳಂಬವಾಗುತ್ತಿವೆ ಎಂಬ ಅಸಮದಾನವಿದೆ. ನಿಗಮದ ಅಧಿಕಾರಿಗಳು ಗ್ರಾಮೀಣ ಭಾಗದ ಪಾಲಿಸಿದಾರರ ಸಂಕಷ್ಟಗಳಿಗೆ ನೆರವಾಗಬೇಕಿದೆ. ಎಲ್ಲರೂ ಭದ್ರವಾದ ಬದುಕನ್ನು ಹೊಂದಿರಬೇಕಾದರೆ ಅದು ನಿಗಮದ ಸಹಕಾರದಿಂದ ಮಾತ್ರ ಸಾಧ್ಯ ಎಂದರು.
           ನಿಗಮದ ಶಾಖಾಧಿಕಾರಿ ಜಿ.ರಮೇಶ್ ಮಾತನಾಡಿ, ಕಳೆದ 62 ವರ್ಷಗಳ ಹಿಂದೆ ಸರ್ಕಾರ 5 ಕೋಟಿ ವೆಚ್ಚದಲ್ಲಿ ನಿಗಮವನ್ನು ಸ್ಥಾಪಿಸಿದ್ದು, ಇಂದು 29 ಲಕ್ಷ ದಶಕೋಟಿ ವ್ಯವಹಾರವನ್ನು ಈ ನಿಗಮ ಹೊಂದಿದೆ. ರಾಷ್ಟ್ರದಲ್ಲಿ 25 ಕೋಟಿ ಹೆಚ್ಚು ಪಾಲಿಸಿದಾರರು ನಿಗಮದಲ್ಲಿದ್ದಾರೆ. ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಜೀವವಿಮಾ ನಿಗಮದ ಸಹಕಾರ ಹೆಚ್ಚಿದೆ. ಇಂದು ರಾಷ್ಟ್ರದಲ್ಲಿ ಅಭಿವೃದ್ಧಿ ಕಾರ್ಯ ಚಾಲನೆಯಾಗಬೇಕಾದಲ್ಲಿ ಅದಕ್ಕೆ ನಿಗಮದ ಆರ್ಥಿಕ ಸಹಕಾರವೇ ಪ್ರಮುಖವಾಗಿರುತ್ತದೆ. ಚಳ್ಳಕೆರೆ ಜೀವವಿಮಾ ನಿಗಮ ಶಿವಮೊಗ್ಗ ವಿಭಾಗದಲ್ಲೇ ಅತ್ಯುತ್ತಮ ನಿಗಮವೆಂದು ಹೆಸರು ಪಡೆದಿದೆ. ಈ ನಿಗಮದಿಂದ ಕಳೆದ 2017ನೇ ಸಾಲಿನಲ್ಲಿ 10 ಸಾವಿರ ಪಾಲಿಸಿಯನ್ನು ಮಾಡಿಸಿ 14 ಕೋಟಿ ಪ್ರೀಮಿಯಂ ಹಣವನ್ನು ತುಂಬಲಾಗಿದೆ. ಪ್ರಸ್ತುತ 2018ನೇ ಸಾಲಿನಲ್ಲಿ 17 ಕೋಟಿ ಪ್ರೀಮಿಯಂ ಹಣ ತುಂಬುವ ಯೋಜನೆ ಇದೆ. ಪ್ರಸ್ತುತ ನಿಗಮದಿಂದ ಪರಿಹಾರ ಕಾರ್ಯಗಳು ಶರವೇಗದಲ್ಲಿ ನಡೆಯುತ್ತಿವೆ. ಅಪಘಾತ, ಅಪಘಾತದಲ್ಲಿ ಮರಣ, ಆಗ್ನಿ ಆಕಸ್ಮಿಕದಲ್ಲಿ ಮರಣ ಮುಂತಾದ ಘಟನೆಗಳಲ್ಲಿ ನೊಂದ ವ್ಯಕ್ತಿ ಪಾಲಿಸಿದಾರರಾಗಿದ್ದಲ್ಲಿ ಅವನ ವಾರಸುದಾರರಿಗೆ ಕೂಡಲೇ ನಿಗಮ ಹಣ ನೀಡಲಿದೆ ಎಂದರು.
                 ಕಾರ್ಯಕ್ರಮದಲ್ಲಿ ಉಪ ಶಾಖಾಧಿಕಾರಿ ಮಂಜುನಾಥ ಕಾಂಭ್ಳೆ, ಸಹಾಯಕ ಆಡಳಿತಾಧಿಕಾರಿ ನಾಗೇಂದ್ರಗುಪ್ತ, ಪ್ರಥಮ ಪಾಲಿಸಿದಾರೆ ಅನುಸೂಯಮ್ಮ, ಅಭಿವೃದ್ಧಿ ಅಧಿಕಾರಿಗಳಾದ ಬಿ.ತಿಪ್ಪೇಸ್ವಾಮಿ, ಟಿ.ರಾಜು, ತಾಯಪ್ಪ, ತಿಮ್ಮಣ್ಣ, ಪ್ರತಿನಿಧಿಗಳಾದ ಕೊರ್ಲಕುಂಟೆ ತಿಪ್ಪೇಸ್ವಾಮಿ, ಡಿ.ಎಸ್.ನಾಗಭೂಷನ್ ರಾವ್, ಎಸ್.ಎಸ್.ಕುಮಾರ್, ಎನ್.ಬಿ.ಶ್ರೀನಿವಾಸ್, ತಿಪ್ಪೇಸ್ವಾಮಿ, ಸತ್ಯನಾರಾಯಣಗುಪ್ತ, ಪರಸಪ್ಪ ಮುಂತಾದವರು ಉಪಸ್ಥಿತರಿದ್ದರು. ಎಲ್‍ಐಸಿ ಅಧಿಕಾರಿ ಶ್ರೀನಾಥ, ಜೀವವಿಮಾ ನಿಗಮದ ಗೀತೆ ಹಾಡಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap