ಪ್ರತಿಯೊಬ್ಬ ವಿದ್ಯಾರ್ಥಿಯೂ ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾತ್ರ ಚಿಂತಿಸುವ ಮನೋಭಾವನ ಬೆಳೆಸಿಕೊಳ್ಳಬೇಕು.

ಚಳ್ಳಕೆರೆ

    ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜದ ಮತ್ತು ರಾಷ್ಟ್ರದ ಹಿತದೃಷ್ಠಿಯಿಂದ ಪರಿಶ್ರಮದಿಂದ ಶೈಕ್ಷಣಿಕ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕಿದೆ. ಸರ್ಕಾರ ಶಿಕ್ಷಣ ಇಲಾಖೆ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ತನ್ನ ಸ್ವಾವಲಂಬನೆ ಬದುಕನ್ನು ರೂಪಿಸಿಕೊಳ್ಳಲು ಅನುಕೂಲವಾಗುವಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಹಿನ್ನೆಡೆಗೆ ಅವಕಾಶ ನೀಡದಂತೆ ಸದಾ ಉತ್ತಮ ಅಂಕಗಳನ್ನು ಪಡೆದು ಸಮಾಜವು ಮೆಚ್ಚುವಂತಹ ಉನ್ನತ್ತ ಹುದ್ದೆಗಳನ್ನು ಅಲಂಕರಿಸಿ ನಿಮ್ಮದೇಯಾದ ವಿಶೇಷ ಕೊಡುಗೆಯನ್ನು ಈ ಸಮಾಜಕ್ಕೆ ನೀಡುವ ನಿಟ್ಟಿನಲ್ಲಿ ಕಾಯೋನ್ಮುಖರಾಗುವಂತೆ ಶಾಸಕ ಟಿ.ರಘುಮೂರ್ತಿ ವಿದ್ಯಾರ್ಥಿ ಸಮುದಾಯಕ್ಕೆ ಮನವಿ ಮಾಡಿದರು.

    ಅವರು, ಬುಧವಾರ ಮಧ್ಯಾಹ್ನ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನೂತನ ಧ್ವಜ ಸ್ತಂಭ, ವಾಹನ ನಿಲುಗಡೆ ಸ್ಟಾಂಡ್ ಹಾಗೂ ಪ್ರಸ್ತುತ ನೂತನ ವರ್ಷದ ಕ್ರೀಡಾ, ಸಾಂಸ್ಕೃತಿಕ, ಎನ್‍ಎಸ್‍ಎಸ್ ಹಾಗೂ ರೋವರ್ಸ್ ಘಟಕ ಉದ್ಘಾಟಿಸಿ ಮಾತನಾಡಿದರು. ಕಳೆದ ಸುಮಾರು 6 ವರ್ಷಗಳಿಂದ ಈ ಕ್ಷೇತ್ರದ ಶಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದು, ವಿಶೇಷವಾಗಿ ಶೈಕ್ಷಣಿಕ ಪ್ರಗತಿ ಸಾಧಿಸಲು ಹೆಚ್ಚಿನ ಆದ್ಯತೆ ನೀಡಿರುವೆ. ಇಲ್ಲಿ ಗ್ರಾಮಾಂತರಪ್ರದೇಶದ ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಲವಾರು ಸಮಸ್ಯೆಗಳ ನಡುವೆಯೂ ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾವಿರಾರು ಸಂಖ್ಯೆಯಲ್ಲಿ ಕಾಲೇಜಿಗೆ ಸೇರಿದ್ಧಾರೆ. ಎಲ್ಲರಿಗೂ ಸಹ ಗುಣಾತ್ಮಕ ಶಿಕ್ಷಣ ನೀಡಲು ಪ್ರಾಚಾರ್ಯರು, ಉಪನ್ಯಾಸಕ ವರ್ಗ ಸದಾ ಕಾಯೋನ್ಮುಖವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನದೇಯಾದ ಗುರಿಯನ್ನು ಸಾಧಿಸಲು ಬೇರೆ ಎಲ್ಲಾ ಚಟುವಟಿಕೆಗಳನ್ನು ಬದಗಿರಿಸಿ ಕೇವಲ ಶೈಕ್ಷಣಿಕ ವಿಚಾರವನ್ನು ಮೈಗೂಡಿಸಿಕೊಳ್ಲಬೇಕಿದೆ. ಕಾಲೇಜಿನ ಫಲಿತಾಂಶ ಉತ್ತಮವಾಗಿದ್ದರೂ ಸಮದಾನವಾಗಿಲ್ಲ. ಪ್ರತಿಯೊಬ್ಬರೂ ಉತ್ತೀರ್ಣರಾಗಬೇಕು ಎಂಬುವುದು ನನ್ನ ಬಯಕೆ. ಮುಂಬರುವ ದಿನಗಳಲ್ಲಾದರೂ ಈ ಕಾಲೇಜು ಇನ್ನೂ ಹೆಚ್ಚಿನ ಫಲಿತಾಂಶವನ್ನು ಪಡೆಯಲು ಮುಂದಾಗಬೇಕಿದೆ. ಈಗಾಗಲೇ ಒಂದು ಕೋಟಿ ವೆಚ್ಚದಲ್ಲಿ 3 ಶಾಲಾ ಕೊಠಡಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ದವಿದ್ದು ಮುಂದಿನ ತಿಂಗಳು ಕಾರ್ಯಾರಂಭವಾಗಲಿದೆ ಎಂದರು.

     ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಂಶುಪಾಲ ಪಿ.ಎನ್.ಕೃಷ್ಣಪ್ರಸಾದ್, ಕಳೆದ ವರ್ಷ 750 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಪ್ರಸ್ತುತ 1300ಕ್ಕೆ ಏರಿದೆ. ಕಾಲೇಜಿನ ಎಲ್ಲಾ ಉಪನ್ಯಾಸಕರು ಸದಾಕಾಲ ವಿದ್ಯಾರ್ಥಿಗಳ ಹಿಂದೆ ಇದ್ದು, ಅವರನ್ನು ಶೈಕ್ಷಣಿಕವಾಗಿ ಪೋತ್ಸಾಹಿಸುತ್ತಿದ್ಧಾರೆ. ದ್ವಿತೀಯ ಪಿಯು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಟ್, ಸಿಇಟಿ ತರಬೇತಿ ತರಗತಿಗಳನ್ನು ಮುಂದಿನ ತಿಂಗಳು ಪ್ರಾರಂಭಿಸಲಾಗುವುದು. ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಶಿಸ್ತು ಬದ್ದವಾಗಿ ವರ್ತಿಸುತ್ತಿದ್ಧಾರೆ. ಪ್ರತಿಯೊಂದು ಹಂತದಲ್ಲೂ ವಿದ್ಯಾರ್ಥಿಗಳು ಶೈಕ್ಷಣಿಕ ವಿಚಾರಗಳಿಗೆ ಗಮನ ನೀಡುವಂತೆ ಪ್ರೇರಣೆ ನೀಡಲಾಗುತ್ತಿದೆ. ಶೈಕ್ಷಣಿಕ ದೃಷ್ಠಿಯಿಂದ ಹೆಚ್ಚುವರಿಯಾಗಿ ಕೊಠಡಿ ಹಾಗೂ ಪಿಠೋಪಕರಣಗಳು ಅವಶ್ಯಕತೆ ಇದ್ದು ಶಾಸಕರು ಈ ಬಗ್ಗೆ ಗಮನಹರಿಸಬೇಕು ಎಂದು ಬೇಡಿಕೆ ಇಟ್ಟರು. ಇತ್ತೀಚೆಗೆ ಕೆಲವು ಉಪನ್ಯಾಸಕರನ್ನು ವರ್ಗಾವಣೆ ಬದಲಿ ಉಪನ್ಯಾಸಕರ ಆಗಮಿಸಬೇಕಿದೆ ಎಂದರು.

     ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕವಿತಾರಾಮಣ್ಣ, ಜಿಲ್ಲಾ ಉಪನ್ಯಾಸಕರ ಸಂಘ ಅಧ್ಯಕ್ಷ ಎಸ್.ಲಕ್ಷ್ಮಣ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಸನ್ನಕುಮಾರ್, ಖಜಾಂಚಿ ಟಿ.ಶ್ರೀನಿವಾಸ್‍ಮೂರ್ತಿ, ಸದಸ್ಯರಾದ ಜ್ಯೋತಿಗುರುಸ್ವಾಮಿ, ಎಸ್.ಕೋಣಪ್ಪ, ನಗರಸಭಾ ಸದಸ್ಯರಾದ ರಮೇಶ್‍ಗೌಡ, ಮಲ್ಲಿಕಾರ್ಜುನ, ಉಪನ್ಯಾಸಕರಾದ ಗುರುಸಿದ್ದಪ್ಪ, ಚಂದ್ರಶೇಖರ್, ಮುಜೀಬ್, ರವೀಶ್ ಮುಂತಾದವರು ಉಪಸ್ಥಿತರಿದ್ದರು.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap