ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರ ಉಚಿತ ದಂತ ಚಿಕಿತ್ಸಾ ಶಿಬಿರ

ತುರುವೇಕೆರೆ

          ಸಮೀಪದ ಮಾದಿಹಳ್ಳಿಯ ಬದರಿಕಾಶ್ರಮದ ಆಶ್ರಯದಲ್ಲಿ ಪ್ರತಿ ತಿಂಗಳ 2 ನೇ ಮತ್ತು 4 ನೇ ಶನಿವಾರ ಉಚಿತವಾಗಿ ದಂತ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗುತ್ತಿದೆ ಎಂದು ಬದರಿಕಾಶ್ರಮದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸ್ವಾಮಿ ಓಂಕಾರಾನಂದಜೀ ಮಹಾರಾಜ್ ತಿಳಿಸಿದ್ದಾರೆ.

         ಗ್ರಾಮಾಂತರ ಜನರು ತಮ್ಮ ಜೀವನದ ಜಂಜಾಟದಲ್ಲಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಿಂದೇಟು ಹಾಕುತ್ತಾರೆ. ಅಲ್ಲದೆ ವೈದ್ಯ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸಲು ಸಹ ಸಾಧ್ಯವಾಗದು. ಹಣಕಾಸಿನ ಮುಗ್ಗಟ್ಟಿನಿಂದಾಗಿ ತಮ್ಮ ಆರೋಗ್ಯವನ್ನು ಗಮನಿಸಲು ಮುಂದಾಗುತ್ತಿಲ್ಲ. ಇದನ್ನು ಗಮನಿಸಿದ ತಾವು ಪ್ರತಿ ತಿಂಗಳ 2 ನೇ ಮತ್ತು 4 ನೇ ಶನಿವಾರ ಬದರಿಕಾಶ್ರಮದಲ್ಲೇ ದಂತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗುವುದು. ಪ್ರತಿ ತಿಂಗಳು ನಡೆಯುವ ದಂತ ಚಿಕಿತ್ಸಾ ಶಿಬಿರವನ್ನು ಬೆಂಗಳೂರಿನ ಅರುಣೋದಯ ವ್ಯಕ್ತಿತ್ವ ವಿಕಸನ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಎಂ.ಶಿವಕುಮಾರ್ ಮತ್ತು ಡಾ.ಎ.ಎಸ್.ವಂಟಮತ್ತೆ ನಡೆಸಿಕೊಡಲಿದ್ದಾರೆ. ಸಾರ್ವಜನಿಕರು ಈ ಶಿಬಿರದ ಅನುಕೂಲವನ್ನು ಪಡೆದುಕೊಳ್ಳಬೇಕೆಂದು ಶ್ರೀಮತ್ ಸ್ವಾಮಿ ಓಂಕಾರಾನಂದಜೀ ಮಹಾರಾಜ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಬದರಿಕಾಶ್ರಮವನ್ನು ಸಂಪರ್ಕಿಸಲು ಕೋರಲಾಗಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link