ತುರುವೇಕೆರೆ
ರಾಜ್ಯದ ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ನಿರಾಶ್ರಿತ ಜನರಿಗೆ ಆಹಾರ ಮತ್ತು ಇನ್ನಿತರ ಮೂಲಭೂತ ವಸ್ತುಗಳನ್ನು ಕಳುಹಿಸಿಕೊಡಲು ಶಾಸಕ ಮಸಾಲಾಜಯರಾಮ್ ಹಾಗೂ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪರಿಹಾರ ನಿಧಿ ಹಣ ಸಂಗ್ರಹಣೆ ಮಾಡುವ ಪ್ರಯುಕ್ತ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಂಜೆ ಪೂರ್ವಭಾವಿ ಸಭೆ ನಡೆಸಲಾಯಿತು.
ತಾಲ್ಲೂಕಿನ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಸದಸ್ಯರು, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸೇರಿದಂತೆ ಅನೇಕ ಮುಖಂಡರುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳÀ ಪದಾಧಿಕಾರಿಗಳು ಪಕ್ಷಭೇದ ಮರೆತು ಪರಿಹಾರ ಸಂಗ್ರಹಿಸುವ ಹಿನ್ನೆಲೆಯಲ್ಲಿ ಸÀಭೆ ನಡೆಸಿದರು.
ಪರಿಹಾರ ನಿಧಿ ದೇಣಿಗೆ ಸಂಗ್ರಹಿಸುವ ಕಾರ್ಯವನ್ನು ಆಗಸ್ಟ್ 20 ರ ಸೋಮವಾರ ಮಧ್ಯಾಹ್ನ ಎಲ್ಲ ಪಕ್ಷಗಳ ಮುಖಂಡರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಹಲವು ಸಂಘಟನೆಗಳ ಪದಾಧಿಕಾರಿಗಳೊಂದಿಗೆ ತಾಲ್ಲೂಕು ಕಚೇರಿ ಮುಂಭಾಗದಿಂದ ಹೊರಟು ದಬ್ಬೆಘಟ್ಟ ರಸ್ತೆಯಲ್ಲಿ ಎಪಿಎಂಸಿ ಮಾರುಕಟ್ಟೆವರೆಗೆ, ತಿಪಟೂರು ರಸ್ತೆ, ಮಾಯಸಂದ್ರ, ಬಾಣಸಂದ್ರ ರಸ್ತೆಗಳಲ್ಲಿನ ಸರ್ಕಾರಿ ಕಚೇರಿ, ಕಮರ್ಷಿಯಲ್ ಅಂಗಡಿಗಳಲ್ಲಿ ದೇಣಿಗೆ ಹಣ ಸಂಗ್ರಹಿಸುವುದು. ಬಟ್ಟೆ ಅಂಗಡಿಗಳಲ್ಲಿ ಹೊಸ ಬೆಡ್ ಶೀಟ್, ಬ್ಲಾಂಕೆಟ್ ಮತ್ತು ಶರ್ಟ್‍ಗಳನ್ನು ಪಡೆಯುವುದು. ಅನಂತರ ಸಂತೆ ಮೈದಾನಕ್ಕೆ ತೆರಳಿ ಸಾರ್ವಜನಿಕರಿಂದ ಸಂತ್ರಸ್ಥರಿಗೆ ಪರಿಹಾರದ ಹಣ ಸಂಗ್ರಹಿಸುವ ಬಗ್ಗೆ ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನ ತೆಗೆದುಕೊಳ್ಳಲಾಯಿತು.
ಇದೇ ವೇಳೆ ಬಾಣಸಂದ್ರ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಾ ಕೃಷ್ಣಮೂರ್ತಿ 10 ಸಾವಿರ ರೂಪಾಯಿಗಳ ನಗದು ಹಣವನ್ನು ಸಂತ್ರಸ್ಥರ ಪರಿಹಾರ ನಿಧಿಗೆ ಸ್ಥಳದಲ್ಲಿಯೇ ನೀಡಿದರು. ನಂತರ ಶಾಸಕ ಮಸಾಲಾಜಯರಾಮ್‍ರಿಂದ 1ಲಕ್ಷ, ಕಾಸ್ಮೋ ಕ್ಲಬ್‍ನಿಂದ 10 ಸಾವಿರ, ಸರ್ಕಾರಿ ನೌಕರರ ಸಂಘ, ಪಟ್ಟಣ ಪಂಚಾಯಿತಿ, ವೀರಶೈವ ಲಿಂಗಾಯಿತ ಸಮಾಜ ತಲಾ 10 ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡುವ ಭರವಸೆಯನ್ನು ವ್ಯಕ್ತಪಡಿಸಿದರು.
ಸಂಗ್ರಹವಾದ ಹಣದಿಂದ ಬಟ್ಟೆ, ಆಹಾರ ಮತ್ತು ಇನ್ನಿತರ ಅಗತ್ಯ ವಸ್ತುಗಳ ಪಟ್ಟಣವನ್ನು ನಿರಾಶ್ರಿತರ ಸ್ಥಳಕ್ಕೆ ಕಳುಹಿಸಿಕೊಡುವ ತೀರ್ಮಾನವನ್ನು ಶಾಸಕರು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಸದಸ್ಯೆ ರೇಣುಕಾಕೃಷ್ಣಮೂರ್ತಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ದುಂಡಾರೇಣುಕಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನರಸಿಂಹ, ಪ್ರೊ|| ಪುಟ್ಟರಂಗಪ್ಪ, ಕಸಾಪ ಅಧ್ಯಕ್ಷ ನಂ.ರಾಜು, ಮುಖಂಡರಾದ ಕೊಂಡಜ್ಜಿ ವಿಶ್ವಣ್ಣ, ಅರಳೀಕೆರೆ ಶಿವಯ್ಯ, ಡಿ.ಆರ್.ಬಸವರಾಜು, ಪ್ರಹ್ಲಾದ್, ನವೀನ್ ಬಾಬು, ಯಜಮಾನ್ ಮಹೇಶ್, ಶಿವಲಿಂಗಪ್ಪ, ರೇಣುಕೇಶ್, ಪ್ರಕಾಶ್ ಸೇರಿದಂತೆ ಅನೇಕರು ಇದ್ದರು.