ಚಳ್ಳಕೆರೆ
ಪ್ರತಿಯೊಬ್ಬರ ಅನಾರೋಗ್ಯಕ್ಕೆ ಮೂಲ ಕಾರಣ ನಮ್ಮ ಪರಿಸರ ಎಲ್ಲಿ ಪರಿಸರ ಉತ್ತಮವಾಗಿರುತ್ತದೆಯೋ ಅಲ್ಲಿ ಯಾವುದೇ ರೋಗಗಳು ಹರಡಲು ಸಾಧ್ಯವಿಲ್ಲ. ಅದ್ದರಿಂದ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳಬೇಕಲ್ಲದೆ ಯಾವುದೇ ರೀತಿಯ ರೋಗಗಳಿಗೆ ತುತ್ತಾಗದೆ ಜಾಗೃತಿ ವಹಿಸಬೇಕೆಂದು ನಗರ ಆರೋಗ್ಯ ಘಟಕದ ಡಾ.ಬಷೇರಿಯ ತಿಳಿಸಿದರು.
ಅವರು, ಬುಧವಾರ ನಗರದ ಜನತಾ ಕಾಲೋನಿ, ಅಂಬೇಡ್ಕರ್ ನಗರ ಹಾಗೂ ಗಾಂಧಿನಗರ ವ್ಯಾಪ್ತಿಯಲ್ಲಿ ಡೆಂಗ್ಯೂ ಮತ್ತು ಮಲೇರಿಯ ವಿರೋಧಿ ಮಾಸಾಚರಣೆ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು. ನಗರ ಆರೋಗ್ಯ ಘಟಕದ ವ್ಯಾಪ್ತಿಯಲ್ಲಿ ಈಗಾಗಲೇ ಲಾರ್ವ ಸರ್ವೆ ನಡೆಸಿದ್ದು, ರೋಗಗಳ ಹರಡುವಿಕೆಗೆ ಕಾರಣವಾಗುವ ಸೊಳ್ಳೆಗಳ ಮೊಟ್ಟೆಯನ್ನು ನಾಶಪಡಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಆರೋಗ್ಯವಂತನಾಗಿರಬೇಕಾದಲ್ಲಿ ಉತ್ತಮ ಪರಿಸರ ಹೊಂದಬೇಕು ಎಂದರು.
ಕ್ಷೇತ್ರ ಆರೋಗ್ಯ ಸಹಾಯಕ ಎಸ್.ಬಿ.ತಿಪ್ಪೇಸ್ವಾಮಿ ಮಾತನಾಡಿ, ಡೆಂಗ್ಯೂ ಮತ್ತು ಮಲೇರಿಯ ರೋಗಗಳು ರೋಗಿಯನ್ನು ಭಯಭೀತಗೊಳಿಸಿ ಪ್ರಾಣಕ್ಕೆ ಅಪಾಯವನ್ನು ತಂದೊಡ್ದುವವು. ಯಾವುದೇ ಹಂತದಲ್ಲಾದರೂ ರೋಗಗಳು ಉಲ್ಭಣಗೊಂಡು ವ್ಯಕ್ತಿಯ ಜೀವಕ್ಕೆ ಅಪಾಯವನ್ನು ತಂದೊಡ್ಡ ಬಹುದು.
ನಾವು ಜಾಗೃತರಾದಲ್ಲಿ ಮಾತ್ರ ಇಂತಹ ರೋಗಗಳು ನಮ್ಮನ್ನು ಕಾಡುವುದಿಲ್ಲ. ಪ್ರತಿ ಹಂತದಲ್ಲೂ ಆರೋಗ್ಯ ಇಲಾಖೆ ಹಲವಾರು ಮಾರಕ ರೋಗಗಳ ಬಗ್ಗೆ ಜಾಗೃತಿ ಜಾಥವನ್ನು ನಡೆಸುವ ಮೂಲಕ ಜನರನ್ನು ಜಾಗೃತಿಗೊಳಿಸುತ್ತಿದ್ದು, ಸಾರ್ವಜನಿಕರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಆರೋಗ್ಯ ಇಲಾಖೆ ಈ ಕಾರ್ಯಕ್ರಮಕ್ಕೆ ಹೆಚ್ಚು ಸಹಕಾರ ನೀಡಬೇಕೆಂದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಶಾಲಾ ವಿದ್ಯಾಥಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
