ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

 ದಾವಣಗೆರೆ:

      ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ಪರ್ಸ್ ಅನ್ನು ನಗರದ ಆಟೋ ಚಾಲಕರೊಬ್ಬರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಚೇತನ್.ಆರ್ ಅವರ ಮೂಲಕ ಪ್ರಮಾಣಿಕನಿಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

     ಬಸವರಾಜ್ ಪರ್ಸ್‍ನಲ್ಲಿದ್ದ ಹಣ, ದಾಖಲೆಗಳನ್ನು ಹಿಂದಿರುಗಿಸಿ ಮಾನವೀಯತೆ ಮೆರೆದ ಆಟೋ ಚಾಲಕನಾಗಿದ್ದು, ಕಳೆದ ಭಾನುವಾರ (ಆ. 26 ರಂದು) ರಾತ್ರಿ 9.30ಕ್ಕೆ ಮಿಜೋರಾಂ ಮೂಲದ ವಿದ್ಯಾರ್ಥಿ ಹಾಗೂ ಆತನ ಇಬ್ಬರು ಸ್ನೇಹಿತರು ನಗರದ ಆಂಜನೇಯ ಬಡಾವಣೆಯ ಹೋಟೆಲ್‍ನಿಂದ ಬಾಪೂಜಿ ಎಂಬಿಎ ಕಾಲೇಜಿನ ವಿದ್ಯಾರ್ಥಿ ವಸತಿ ಗೃಹಕ್ಕೆ ಬಸವರಾಜ್ ಅವರ ಆಟೋದಲ್ಲಿ ತೆರಳಿದ್ದರು. ಈ ವೇಳೆ ಹಣವಿದ್ದ ಪರ್ಸ್ ಆಟೋದಲ್ಲಿಯೇ ಬೀಳಿಸಿಕೊಂಡು ಹೋಗಿದ್ದರು.

      ನಂತರ ಬಸವರಾಜ್ ಮನೆಗೆ ಮರಳಿದಾಗ ಆಟೋದಲ್ಲಿ ಪರ್ಸ್ ಇರುವುದು ಗಮನಕ್ಕೆ ಬಂದಿದೆ. ಕೂಡಲೇ ಅದನ್ನು ನೋಡಿದಾಗ ಅದರಲ್ಲಿ 20,500 ರೂ ಹಾಗೂ ಇತರೆ ದಾಖಲೆಗಳಿರುವುದು ಕಂಡುಬಂದಿದೆ. ನಂತರ ಅವರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಚೇತನ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

     ನಂತರ ವಿದ್ಯಾರ್ಥಿಯನ್ನು ಪತ್ತೆ ಮಾಡಿ ಕಚೇರಿಗೆ ಕರೆಸಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್. ಚೇತನ್ ಕಳೆದುಕೊಂಡಿದ್ದರ ಬಗ್ಗೆ ಖಚಿತಪಡಿಸಿಕೊಂಡು ನಂತರ ಆಟೋ ಚಾಲಕ ಬಸವರಾಜ್ ಸಮಕ್ಷಮದಲ್ಲಿ ವಿದ್ಯಾರ್ಥಿಗೆ ಹಣ ಹಾಗೂ ಗುರುತಿನ ಪತ್ರಗಳನ್ನು ನೀಡಿದ್ದಾರೆ. ಆಟೋ ಚಾಲಕ ಬಸವರಾಜ್ ಅವರ ಪ್ರಾಮಾಣಿಕತೆ ಹಾಗೂ ನಿಷ್ಟೆ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸಿಸಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap