ಪ್ರಾಮಾಣಿಕ ಸೇವೆ ಮಾತ್ರ ಬದುಕಿಗೆ ವಿಶೇಷ ಗೌರವವನ್ನು ತಂದುಕೊಡಬಲ್ಲದು

ಚಳ್ಳಕೆರೆ

          ಇಲ್ಲಿನ ಬಿಎಸ್‍ಎನ್‍ಎಲ್ ಕಚೇರಿಯಲ್ಲಿ ಕಳೆದ 5 ವರ್ಷಗಳಿಂದ ಹಣಕಾಸು ನಿರ್ವಹಣೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಿ.ಲಾಲ್‍ಸಿಂಗ್ ನಾಯ್ಕ ಸೇವೆಯಿಂದ ಸ್ವಯಂ ನಿವೃತ್ತರಾಗಿದ್ದು, ಭಾನುವಾರ ಇಲ್ಲಿನ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಅವರನ್ನು ಆತ್ಮೀಯವಾಗಿ ಅಭಿನಂದಿಸಿ ಬೀಳ್ಕೊಟ್ಟರು.
           ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಜಿಎಂ ರಾಜಯ್ಯ ಮಾತನಾಡಿ, ಲಾಲ್‍ಸಿಂಗ್ ನಾಯ್ಕ ತಮ್ಮ ಸೇವೆಯಲ್ಲಿ ಉತ್ತಮ ಪ್ರಾಮಾಣಿಕತೆ ಮತ್ತು ದಕ್ಷತೆಯನ್ನು ಹೊಂದಿದ್ದರು. ಕಚೇರಿಗೆ ಎಂದಿಗೂ ತಡವಾಗಿ ಬಂದವರಲ್ಲ. ತಮ್ಮ ಪಾಲಿನ ಎಲ್ಲಾ ಕೆಲಸವನ್ನು ಅಂದೇ ಪೂರೈಸುತ್ತಿದ್ದರು. ಕಿರಿಯ ಅಧಿಕಾರಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದು, ಸ್ವಯಂ ನಿವೃತ್ತಿ ಹೊಂದಿರುವ ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸುವುದಾಗಿ ತಿಳಿಸಿದರು.
            ಕಾರ್ಯಕ್ರಮದಲ್ಲಿ ಎಜಿಎಂ ಜಯಣ್ಣ, ಇಲಾಖೆ ಅಧಿಕಾರಿಗಳಾದ ಎಸ್.ಪ್ರಕಾಶ್, ಮಂಜುನಾಥ, ಜಯಪ್ಪನಾಯ್ಕ, ನಾಗಭೂಷನ್, ಹನುಮಂತಪ್ಪ ಮುಂತಾದವರು ಭಾಗವಹಿಸಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link