ಪ್ರೌಢಾವಸ್ಥೆಗೆ ತಲುಪಿದ ವಿದ್ಯಾರ್ಥಿಗಳಿಗೆ ವ್ಯವಹಾರಿಕ ಜ್ಞಾನ ಅಗತ್ಯವಾಗಿದೆ- ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರಚಂದ್ರ

 ಜಗಳೂರು:

      ಇಂದಿನ ದಿನಮಾನಗಳಲ್ಲಿ ಪ್ರೌಢಾವಸ್ಥೆಗೆ ತಲುಪಿದ ವಿದ್ಯಾರ್ಥಿಗಳಿಗೆ ವ್ಯವಹಾರಿಕ ಜ್ಞಾನ ಅಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರಚಂದ್ರ ಹೇಳಿದರು.

      ಪಟ್ಟಣದ ಇಮಾಂ ಸ್ಮಾರಕ ಪ್ರೌಢಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಂದ ಇಮಾಂ ಸಂತೆ ಮೇಳಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

      ಮಕ್ಕಳಲ್ಲಿ ಪಠ್ಯೆದ ಜ್ಞಾನದ ಜತೆಗೆ ಸಾಮಾಜಿಕ ಚಿಂತನೆಗಳ ವ್ಯವಹಾರಿಕ ಜ್ಞಾನ ಬೆಳೆಸಿದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಸಾಮರಸ್ಯದ ಪ್ರಜ್ಞೆ ಬೆಳೆಯುತ್ತದೆ. ವಿದ್ಯಾರ್ಥಿಗಳು ದಿನನಿತ್ಯ ಜೀವನದಲ್ಲಿ ನಡೆಯುವಂತಹ ಘಟನೆಗಳನ್ನು ಅವಲೋಕಿಸಿದಾಗ ವಿಭಿನ್ನ ಆಲೋಚನೆಗಳು ಮೂಡುತ್ತವೆ. ವಿದ್ಯಾರ್ಥಿಗಳ ಸಂತೆ ಮೇಳಾ ಇಂತಹ ಪೂರಕ ವಾತಾವರಣವನ್ನು ಕಲ್ಪಿಸಿರುವುದು ಶ್ಲಾಘನೀಯವಾಗಿದೆ ಎಂದರು.

      ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಈ ಸಂತೆ ಮೇಳದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೇ ಕೊಂಡು ತಂದ ಬಗೆ ಬಗೆಯ ತಾಜಾ ತರಕಾರಿ, ಸಿಹಿ ತಿನಿಸು, ಕುರುಕಲು ತಿಂಡಿ, ಕಾರ ಮಂಡಕ್ಕಿ ಸೇರಿದಂತೆ ವಿವಿಧ ರೀತಿಯ ತಿನಿಸು ಪದಾರ್ಥಗಳನ್ನು ಅಳತೆ ಮಾಡಿ ನಿಗಧಿತ ದರಕ್ಕೆ ಮಾರಾಟ ಮಾಡಿ ವ್ಯವಹಾರಿಕ ಜ್ಞಾನವನ್ನು ಪ್ರಚಾರ ಪಡಿಸಿದರು. ವಿದ್ಯಾರ್ಥಿಗಳೆ ಇದನ್ನು ಕೊಂಡು ಮನೆಗೆ ತೆರಳಿದರು.

      ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಹುಸೇನ್ಮೀಯಾ, ಶಿಕ್ಷಣ ಸಂಯೋಜಕ ಶಿವಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ವಿರೇಶ್, ಸಂಸ್ಥೆ ಕಾರ್ಯದರ್ಶಿ ಮಹಮದ್ ಮುನ್ನಾ, ಮುಖ್ಯ ಶಿಕ್ಷಕಿ ವಿಜಯ ಲಕ್ಷ್ಮೀ, ಮೇಲ್ವಿಚಾರಕರಾದ ನಾಗರಾಜ್, ಹಾಲಪ್ಪ , ಶಿಕ್ಷಕರಾದ ಶಿಲ್ಪ, ಸುಚಿತ್ರಾ ಸೇರಿದಂತೆ ಮತ್ತಿತರಿದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link