ದಾವಣಗೆರೆ:
ನಗರದ ಹದಡಿ ರಸ್ತೆಯಲ್ಲಿರುವ ಕುರುಬರ ಹಾಸ್ಟೆಲ್‍ನಲ್ಲಿ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದಿಂದ ನಿರ್ಮಿಸಿರುವ ಲಿಂ.ಶ್ರೀ ವೇದಮೂರ್ತಿ ಚನ್ನಯ್ಯ ಒಡೆಯರ್ ಸಂಕೀರ್ಣದ ಉದ್ಘಾಟನಾ ಸಮಾರಂಭವು ಫೆ.13ರ ಬುಧವಾರ ಬೆಳಿಗ್ಗೆ 11 ಗಂಟೆಗೆ ನೆರವೇರಲಿದೆ ಎಂದು ಸಂಘದ ಅಧ್ಯಕ್ಷ ಬಿ.ದಿಳ್ಯೆಪ್ಪ ಮುದಹದಡಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯಕ್ರಮದ ದಿವ್ಯ ಸಾನಿಧ್ಯ ವಹಿಸಲಿರುವ ಕಾಗಿನೆಲೆ ಕನಕ ಗುರುಪೀಠದ ಶ್ರೀನಿರಂಜನಾನಂದಪುರಿ ಮಹಾಸ್ವಾಮೀಜಿ, ಹೊಸದುರ್ಗ ಶಾಖಾ ಮಠದ ಶ್ರೀಈಶ್ವರನಂದಪುರಿ ಸ್ವಾಮೀಜಿ, ಹದಡಿಯ ಚಂದ್ರಗಿರಿ ಮಠದ ಶ್ರೀಸದ್ಗುರು ಪರಮಹಂಸ ಮುರಳೀಧರ ಸ್ವಾಮೀಜಿ ಅವರುಗಳು ಸಂಕೀರ್ಣ ಉದ್ಘಾಟಿಸಲಿದ್ದಾರೆಂದು ಹೇಳಿದರು.
ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಹರಿಹರ ಶಾಸಕ ಎಸ್.ರಾಮಪ್ಪ, ಜಿಲ್ಲಾ ಕುರುಬ ಸಂಘದ ಗೌರವಾಧ್ಯಕ್ಷ ಡಾ.ಕೆ.ಪಿ.ಸಿದ್ಧಬಸಪ್ಪ ಅವರನ್ನು ಸನ್ಮಾನಿಸಲಾಗುವುದು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಮಲ್ಲಪ್ಪ, ಮಾಜಿ ಸಚಿವ ಡಾ.ವೈ.ನಾಗಪ್ಪ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕೆಂಗೋ ಹನುಮಂತಪ್ಪ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಸಿದ್ದಪ್ಪ ಅಡಾಣಿ, ಅತಿಥಿಗಳಾಗಿ ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಆರ್.ಜಯಶೀಲಾ, ಜಿ.ಪಂ.ಸದಸ್ಯರಾದ ಜಿ.ಸಿ.ನಿಂಗಪ್ಪ, ಹೆಚ್.ಬಿ.ಪರಶುರಾಮಪ್ಪ, ಎಂ.ಆರ್.ಮಹೇಶ್, ಪಾಲಿಕೆ ಸದಸ್ಯರಾದ ಹೆಚ್.ಬಿ.ಗೋಣೆಪ್ಪ, ಜೆ.ಎನ್.ಶ್ರೀನಿವಾಸ್, ಹೆಚ್.ಜಿ.ತಿಪ್ಪಣ್ಣ, ಆಶಾ ಉಮೇಶ್, ಲಲಿತಾ ರಮೇಶ್, ರೇಣುಕಮ್ಮ ಶಾಂತಪ್ಪ, ಕನಕ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಹೆಚ್.ಜಿ.ಸಂಗಪ್ಪ, ಸಮಾಜದ ಮುಖಂಡರಾದ ಜೆ.ಕೆ.ಕೊಟ್ರಬಸಪ್ಪ, ಪಿ.ರಾಜಕುಮಾರ್, ಬಿ.ಮಹಾದೇವಪ್ಪ ಕೊಳೆನಹಳ್ಳಿ, ಎಸ್.ನಿಂಗಪ್ಪ, ಬಿ.ಟಿ.ಹನುಮಂತಪ್ಪ, ಬಿ.ಎಂ.ಸತೀಶ್ ಕೊಳೆನಹಳ್ಳಿ, ಹೆಚ್.ಎಸ್.ರಾಜಶೇಖರ್, ಎನ್.ಜೆ.ನಿಂಗಪ್ಪ, ಎಲ್.ಬಿ.ಭೈರೇಶ್, ಹೆಚ್.ಬಿ.ಮಂಜಪ್ಪ, ಬಳ್ಳಾರಿ ಷಣ್ಮುಖಪ್ಪ ಮತ್ತಿತರರು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಸಿದ್ದಪ್ಪ ಅಡಾಣಿ, ಖಜಾಂಚಿ ಹೆಚ್.ವೈ.ಶಶಿಧರ್, ನಿರ್ದೇಶಕರಾದ ಎಸ್.ಟಿ.ಅರವಿಂದ್ ಹಾಲೇಕಲ್ಲು, ಕೆ.ಸಿದ್ದಪ್ಪ ಉದಗಟ್ಟಿ, ಬೀರಪ್ಪ ಬಿ.ಕೆ. ಮಾಯಕೊಂಡ, ಶ್ರೀಬೀರೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹೆಚ್.ಎಸ್.ರಾಜಶೇಖರ್ ಮತ್ತಿತರರು ಹಾಜರಿದ್ದರು.