ಬೆಂಗಳೂರು
ಭಾರತೀಯರೆಲ್ಲರಿಗೂ ಡಿಜಿಟಲ್ ಜೀವನಶೈಲಿ ಪರಿಚಯಿಸುವ ಪಯಣ ಮುಂದುವರೆಸಿರುವ ರಿಲಯನ್ಸ್ ಸಂಸ್ಥೆಯು ಜಿಯೋಫೋನ್ ನಂತರ ಜಿಯೋ ಫೋನ್ 2 ಹೊರತರುತ್ತಿದೆ.
2, 999 ರೂ ಬೆಲೆಯ ಜಿಯೋಫೋನ್ 2 ಮಾರುಕಟ್ಟೆ ಪ್ರವೇಶಕ್ಕೆ ಸಿದ್ಧವಾಗಿದೆ. ಆಗಸ್ಟ್ 16ರ ಮಧ್ಯಾಹ್ನ 12ರಿಂದ JIO.COMನಲ್ಲಿ ಫ್ಲಾಶ್ ಸೇಲ್ ಪ್ರಾರಂಭವಾಗಲಿದೆ. ಫ್ಲಾಶ್ ಸೇಲ್ ಮೂಲಕ ಆನ್‌ಲೈನ್ ಖರೀದಿಗೆ ಲಭ್ಯವಾಗಲಿದೆ.
ಜಿಯೋಫೋನ್‌ನ ಈ ಹೊಸ ಮಾದರಿಯಲ್ಲಿ ಹಾರಿಜಾಂಟಲ್ ಪರದೆಯ ಡಿಸ್ಪ್ಲೇ ಜೊತೆಗೆ ಪೂರ್ಣಪ್ರಮಾಣದ ಕೀಬೋರ್ಡ್ ಕೂಡ ಇದೆ.ಈ ಡಿಸ್ಪ್ಲೇ ಗ್ರಾಹಕರಿಗೆ ಉತ್ತಮ ವೀಕ್ಷಣಾ ಅನುಭವವನ್ನು ನೀಡಿದರೆ, ಪೂರ್ಣಪ್ರಮಾಣದ ಕೀಬೋರ್ಡ್‌ನಿಂದಾಗಿ ಸುಲಭ ವಿನ್ಯಾಸದ QWERTY ಕೀಲಿಮಣೆಯನ್ನು ಬಳಸುವುದು ಸಾಧ್ಯವಾಗಲಿದೆ.
ಕೈಗೆಟುಕುವ ಬೆಲೆಯ ಮೂಲಕ ಭಾರತದಲ್ಲಿ ಡಿಜಿಟಲ್ ಕ್ರಾಂತಿಯನ್ನು ಇನ್ನಷ್ಟು ಚುರುಕುಗೊಳಿಸುವ ಉದ್ದೇಶವನ್ನು ಜಿಯೋಫೋನ್ ಹೊಂದಿದ್ದು, ಈ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನೂ ಅಂತರ್ಜಾಲ ಸಂಪರ್ಕ ಪಡೆದುಕೊಳ್ಳುವುದು, ಡಿಜಿಟಲ್ ಜೀವನಶೈಲಿಯನ್ನು ಆನಂದಿಸುವುದು ಸಾಧ್ಯವಾಗಲಿದೆ.
ಹೆಚ್ಚುವರಿ ಸವಲತ್ತುಗಳೊಡನೆ ಹೊಸದಾಗಿ ಪರಿಚಯಿಸಲಾಗುತ್ತಿರುವ ಜಿಯೋಫೋನ್ 2 ಮಾದರಿ, ದೇಶಾದ್ಯಂತ ವ್ಯಾಪಿಸಿರುವ ಜಿಯೋ ನೆಟ್‌ವರ್ಕ್ ಹಾಗೂ ಸದೃಢ ರೀಟೆಲ್ ಉಪಸ್ಥಿತಿಯಿಂದಾಗಿ, ಅತ್ಯಂತ ಕಡಿಮೆ ಸಮಯದಲ್ಲಿ 100 ಮಿಲಿಯನ್ ಗ್ರಾಹಕರನ್ನು ತನ್ನ ವೇದಿಕೆಗೆ ಕರೆತರಲು ಜಿಯೋಫೋನ್ ಸಜ್ಜಾಗುತ್ತಿದೆ.
ಇನ್ನೂ ಜಿಯೋಫೋನ್ ಗ್ರಾಹಕರಿಗೆ ಫೇಸ್‌ಬುಕ್, ಯೂಟ್ಯೂಬ್ ಹಾಗೂ ಗೂಗಲ್ ಮ್ಯಾಪ್ಸ್ ಆಪ್‌ಗಳು ದೊರಕಲಿವೆ. ಇವೆಲ್ಲದರ ಜೊತೆಗೆ ಜಿಯೋಫೋನ್ ಸಾಧನಗಳಲ್ಲಿ ವಾಟ್ಸಪ್ ಕೂಡ ಸದ್ಯದಲ್ಲೇ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ಜಿಯೋಫೋನ್ ಗ್ರಾಹಕರು ಈಗಾಗಲೇ ಉಚಿತ ವಾಯ್ಸ್ ಕರೆಗಳು ಹಾಗೂ ಜಿಯೋಟಿವಿ, ಜಿಯೋಸಿನಿಮಾ, ಜಿಯೋಮ್ಯೂಸಿಕ್ ಹಾಗೂ ಜಿಯೋಚಾಟ್‌ನಂತಹ ಉತ್ಕೃಷ್ಟ ಅಪ್ಲಿಕೇಶನ್‌ಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಕರೆ ಮಾಡಲು, ಸಂದೇಶ ಕಳುಹಿಸಲು, ಅಂತರಜಾಲದಲ್ಲಿ ಮಾಹಿತಿ ಹುಡುಕಲು, ಹಾಡು ಕೇಳಲು, ವೀಡಿಯೋಗಳನ್ನು ನೋಡಲು ಹಾಗೂ ಜಿಯೋಫೋನ್‌ನಲ್ಲಿರುವ ಬೇರೆಲ್ಲ ಆಪ್‌ಗಳನ್ನು ಬಳಸಲು ಧ್ವನಿರೂಪದ ಆದೇಶ (ವಾಯ್ಸ್ ಕಮ್ಯಾಂಡ್) ನೀಡಬಹುದಾದ ವಿಶಿಷ್ಟ ವ್ಯವಸ್ಥೆಯನ್ನೂ ಜಿಯೋಫೋನ್ ಗ್ರಾಹಕರು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ. ಹೆಚ್ಚು ಸಂಖ್ಯೆಯ ಭಾರತೀಯರು ಶಿಕ್ಷಣ, ಮನರಂಜನೆ, ಜ್ಞಾನ ಮತ್ತಿತರ ಪ್ರಮುಖ ಸೇವೆಗಳನ್ನು ಪಡೆದುಕೊಳ್ಳುವ ವಿಧಾನಕ್ಕೆ ಜಿಯೋಫೋನ್ ಹೊಸ ವ್ಯಾಖ್ಯಾನ ನೀಡುತ್ತಿದೆ.