ಬಂಜಾರರು ಸೌಲಭ್ಯಗಳಿಂದ ವಂಚಿತರು

 ದಾವಣಗೆರೆ :

      ಸ್ವಾತಂತ್ರ ಬಂದು ಏಳು ದಶಕ ಕಳೆದರೂ ಬಂಜಾರ ಸಮುದಾಯದ ಸಮಾಜ ಬಾಂಧವರು ವಿವಿಧ ಸೌಲಭ್ಯಗಳಿಂದ ವಂಚಿತಗೊಂಡಿದೆ ಎಂದು ಕರ್ನಾಟಕ ತಾಂಡ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಲಿಂಗರಾಜ ನಾಯ್ಕ ವಿಷಾಧ ವ್ಯಕ್ತಪಡಿಸಿದರು.

      ನಗರದ ರೋಟರಿ ಬಾಲಭವನದಲ್ಲಿ ಕರ್ನಾಟಕ ತಾಂಡ ರಕ್ಷಣಾ ವೇದಿಕೆಯ ತಾಲೂಕು ಘಟಕ ಹಾಗೂ 5ನೇ ವಾರ್ಡ್‍ನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಲಂಬಾಣಿ ಜನಾಂಗವನ್ನು ಕಡೆಗಣಿಸಿರುವ್ಯದರಿಂದ ಉದ್ಯೋಗಕ್ಕಾಗಿ ವಲಸೆ ಹೋಗುವುದು, ಕಟ್ಟಿಗೆ ಮಾರಾಟ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ತಾಂಡಗಳ ಜನತೆ ಮಕ್ಕಳು ಮಾರಾಟ ಮಾಡಿ ಜೀವನ ನಡೆಸುವ ದಯನೀಯ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಸರ್ಕಾರದ ಸವಲತ್ತು ಬಂಜಾರ ಜನಾಂಗದ ಮನೆ ಬಾಗಿಲಿಗೆ ತಲುಪಿಸಲು ಕರ್ನಾಟಕ ತಾಂಡ ರಕ್ಷಣಾ ವೇದಿಕೆ ಸಜ್ಜಾಗಿದೆ ಎಂದರು.

       ಕರ್ನಾಟಕ ತಾಂಡ ರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಕಳೆದಿದೆ. ರಾಜ್ಯದ ಸುಮಾರು ಜಿಲ್ಲೆಯಲ್ಲಿ ಪ್ರವಾಸವನ್ನು ಮಾಡಿ ಕರ್ನಾಟಕ ತಾಂಡ ರಕ್ಷಣಾ ವೇದಿಕೆ ಘಟಕ ಸ್ಥಾಪನೆ ಮಾಡಿ ಸಮಾಜಬಾಂಧವನ್ನು ಸಂಘಟಿಸಲಾಗುತ್ತಿದೆ. ಬಂಜಾರ ಜನಾಂಗವು ಬಹಳ ಸ್ವಾಭಿಮಾನದಿಂದ ಜೀವನವನ್ನು ನಡೆಸುತ್ತಿದ್ದು, ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಬಹಳ ಈ ಸಮಾಜ ಹಿಂದೆ ಉಳಿದಿದೆ. ರಾಜ್ಯದಲ್ಲಿ 3573 ತಾಂಡಗಳಿದ್ದು, ಇದುವರೆಗೂ ಸರ್ಕಾರಿ ದಾಖಲೆಯಲ್ಲಿ ಸೇರದಿರುವುದು ದುರಂತದ ಸಂಗತಿಯಾಗಿದೆ ಎಂದರು.

      ಲಂಬಾಣಿ ಸಮುದಾಯದಿಂದ ಬೇರೆ ಸಮುದಾಯಕೆ ಮತಾಂತರವಾದರೆ ಮತಾಂತರ ಮಾಡುವವರ ವಿರುದ್ದ ಉಗ್ರ ಹೋರಾಟ ಮಾಡಲಾಗುವುದು. ಹಾಗೂ ಅವರ ಜಾತಿ ಪ್ರಮಾಣ ಪತ್ರ ರದ್ದು ಮಾಡಬೇಕು. ಈಗ ತಕ್ಷಣಕ್ಕೆ ಈ ಸಮುದಾಯದವರು ವಲಸೆ ಹೋಗಿರುವ ಜಾಗಕ್ಕೆ ಕೂಡಲೇ ಶಾಲೆಯನ್ನು ತೆರೆದು ಅಲ್ಲಿರುವ ಬಂಜಾರ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು ಹಾಗೂ ಅವೈಜ್ಞಾನಿಕವಾಗಿರುವಬ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕೆಂದು ಆಗ್ರಹಿಸಿದರು.

      ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ದಾವಣಗೆರೆ ಜಿಲ್ಲಾ ಅಧ್ಯಕ್ಷರಾಧ ಶಶಿನಾಯ್ಕ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜನಾಯ್ಕ, ರಾಜ್ಯ ಕಾರ್ಯದರ್ಶಿ ಉಮೇಶ್‍ನಾಯ್ಕ, ಗೌರವ ಅಧ್ಯಕ್ಷ ವೆಂಕಟೇಶ್‍ನಾಯ್ಕ, ಸಂಘಟನಾ ಕಾರ್ಯದರ್ಶಿ ಕುಮಾರನಾಯ್ಕ, ಜಿಲ್ಲಾ ಗೌರವ ಅಧ್ಯಕ್ಷ ವೆಂಕಟೇಶ್‍ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಜಗದೀಶ್‍ನಾಯ್ಕ, ಚಿತ್ರದುರ್ಗ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೊಳಲ್ಕರೆ ಸತೀಶನಾಯ್ಕ, ಸಿದ್ದೇಶನಾಯ್ಕ, ಉಮೇಶ್ ನಾಯ್ಕ, ಪವನ್ ಎಂ ನಾಯ್ಕ, ಶ್ರೀಕಾಂತನಾಯ್ಕ, ಸೋಮಶೇಖರನಾಯ್ಕ ಆರ್, ಡಿ.ಎಲ್.ರಾಮಚಂದ್ರನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link