ಬಜೆಟ್ ವಿಶ್ಲೇಷಣೆ ಮಾಡುವ ವಿದ್ಯಾರ್ಥಿಗಳ ಉತ್ಸಾಹ ಅಭಿನಂದನಾರ್ಹ : ಕೆ.ಬಿ. ಜಯಣ್ಣ

ತುಮಕೂರು      

       ದೇಶ ಕಟ್ಟುವ ಕೆಲಸದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ಬಜೆಟ್ ವಿಶ್ಲೇಷಣೆ ಮಾಡುವುದು ಸುಲಭವಲ್ಲ. ನಮ್ಮ ವಿದ್ಯಾರ್ಥಿಗಳು ಬಜೆಟ್ ಮಂಡನೆಯಾದ ಮರುದಿನವೆ ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸಿ ವಾದ ಪ್ರತಿವಾದದಲ್ಲಿ ತೊಡಗಿಸಿಕೊಳ್ಳಲು ಅಣಿಯಾಗಿರುವುದು ಅವರ ಬೌದ್ಧಿಕ ಮಟ್ಟವನ್ನು ತೋರಿಸುತ್ತದೆ. ಅವರ ಉತ್ಸಾಹ ಶ್ಲಾಘನೀಯ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಬಿ. ಜಯಣ್ಣ ಹೇಳಿದರು. 

   ಅವರು ವಿದ್ಯಾನಿಧಿ ಕಾಲೇಜಿನಲ್ಲಿ ಕೇಂದ್ರ ಬಜೆಟ್-2019ರ ಕುರಿತು ಆಯೋಜಿಸಲಾಗಿದ್ದ ಚರ್ಚಾಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

    ಮುಖ್ಯ ಅತಿಥಿ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ. ಪ್ರದೀಪ್‍ಕುಮಾರ್ ಮಾತನಾಡಿ, ಜನಸಾಮಾನ್ಯರು ವಿಶ್ಲೇಷಿಸುವುದಕ್ಕಿಂತ ಭಿನ್ನವಾಗಿ ವಾಣಿಜ್ಯ ವಿದ್ಯಾರ್ಥಿಗಳು ಬಜೆಟನ್ನು ಗಮನಿಸಬೇಕು. ಶ್ರೀಮಂತರಿಗೆ ಹೆಚ್ಚುವರಿ ತೆರಿಗೆಗಳನ್ನು ವಿಧಿಸುವುದರಿಂದ ದೇಶದ ಬೊಕ್ಕಸಕ್ಕೆ ಹೆಚ್ಚಿನ ಮೊತ್ತ ಹರಿದು ಬರುತ್ತದೆ ಎಂಬುದು ಖಾತರಿಯಲ್ಲ. ಬದಲು ಹೊರ ದೇಶಗಳಲ್ಲಿ ಹಣ ಹೂಡಿಕೆ ಮಾಡುವಂತೆ ಇದು ಜನರನ್ನು ಉತ್ತೇಜಿಸಬಹುದು. ಆದಾಗ್ಯೂ ಸಮತೋಲನ ಕಾಯ್ದುಕೊಂಡು ಮಾಡಿರುವ ಬಜೆಟ್ ದೇಶದ ಆರ್ಥಿಕತೆಯನ್ನು ಸುಧಾರಿಸಬಹುದಾದರೆ ಸಂತೋಷ ಎಂದರು.

     ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಪ್ರಸ್ತಾಪಿಸಿದ ಪ್ರದೀಪ್‍ಕುಮಾರ್, ‘ಮತ್ತೆ ಹಸಿರಿನೆಡೆಗೆ ನಮ್ಮ ನಡೆ’ಅಭಿಯಾನಕ್ಕೆ ನಮ್ಮ ಶಿಕ್ಷಣ ಸಂಸ್ಥೆಗಳೂ ಕೂಡ ತಮ್ಮಿಂದಾದ ಉತ್ತೇಜನ ನೀಡುವುದು ಅಗತ್ಯ. ಇಂಧನ ಚಾಲಿತ ವಾಹನಗಳ ಬದಲಾಗಿ ಸೈಕಲ್ ಅಥವಾ ವಿದ್ಯುತ್‍ಚಾಲಿತ ದ್ವಿಚಕ್ರ ವಾಹನಗಳಲ್ಲಿ ಕಾಲೇಜಿಗೆ ಬರುವವರನ್ನು ಗಣ್ಯರೆಂಬಂತೆ ಗೌರವಿಸಿ. ಇತರ ವಿದ್ಯಾರ್ಥಿಗಳಿಗೆ ಅವರು ಮಾದರಿಯಾಗಲಿ’ ಎಂಬ ಆಶಯ ವ್ಯಕ್ತಪಡಿಸಿದರು.

     ಈ ಸಂದರ್ಭದಲ್ಲಿ ಪ್ರಾಂಶುಪಾಲ ಸಿದ್ಧೇಶ್ವರಸ್ವಾಮಿ ಎಸ್.ಆರ್. ಉಪನ್ಯಾಸಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಚಂದನಾ ಪ್ರಾರ್ಥಿಸಿದರು. ಅಂಜಲಿ ಸ್ವಾಗತಿಸಿ, ಯೋಗಿತಾ ವಂದಿಸಿದರು. ಭವ್ಯಾ ಮತ್ತು ಡಿಂಪಲ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಉಪನ್ಯಾಸಕಿ ಅನುಷಾ ಟಿವಿ ಬಜೆಟ್ ಕುರಿತ ಮಾಹಿತಿಯಾಧರಿಸಿದ ರಸಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ಕೇಳಿದರು.

      ಸರಿಯುತ್ತರಗಳನ್ನು ನೀಡಿದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಅನ್ವರ್ ಹಾಗೂ ಇಂಗ್ಲಿಷ್ ಉಪನ್ಯಾಸಕಿ ಹೇಮಲತಾಎಂ.ಎಸ್. ತೀರ್ಪುಗಾರರಾಗಿ ಭಾಗವಹಿಸಿದ್ದರು. ಸುಮಾರು ಎಪ್ಪತ್ತಕ್ಕೂ ಹೆಚ್ಚು ಪ್ರಥಮ ಪಿಯುಸಿ ವಿದ್ಯಾರ್ಥಿ/ನಿಯರು ಚರ್ಚಾಸ್ಪರ್ಧೆಯಲ್ಲಿ ಪಾಲ್ಗೊಂಡರು.

      ಚರ್ಚಾಸ್ಪರ್ಧೆಯಲ್ಲಿ ವಿಷಯದ ಪರವಾಗಿ ಮಾತನಾಡಿದ ಕೀರ್ತನಾ ಟಿ., ಸನತ್‍ಕುಮಾರ್, ಕುಶಾಲ್ ಭೂಷಣ್ ವಿಷಯದ ವಿರೋಧವಾಗಿ ಮಾತನಾಡಿದ ಇಂಚರಾ, ಪಿಂಕಿ ಹಾಗೂ ಸಾನಿಯಾ ಅಮ್ರೀನ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗೆದ್ದುಕೊಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link