ಹುಳಿಯಾರು
ರಾಗಿ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಅಪಾರ ನಷ್ಟವಾದ ಘಟನೆ ಹುಳಿಯಾರು ಸಮೀಪದ ನವಿಲೆ ಅರಳಿಕೆರೆಯಲ್ಲಿ ಭಾನುವಾರ ಮುಂಜಾನೆ ನಡೆದಿದೆ.ಇದೇ ಗ್ರಾಮದ ಚಿಕ್ಕಣ್ಣ ಎನ್ನುವವರ ಬಣವೆಗೆ ಕಿಡಿಗೇಡಿಗಳು ಭಾನುವಾರ ನಸುಕಿನಲ್ಲಿ ಬೆಂಕಿ ಇಟ್ಟಿದ್ದಾರೆ. ನಾಯಿಗಳು ವಿಪರೀತವಾಗಿ ಬೊಗಳುತ್ತಿದ್ದರಿಂದ ಎಚ್ಚರಗೊಂಡ ಕುಟುಂಬವರ್ಗ ನೋಡಿದಾಗ ಬಣವೆ ಹೊತ್ತಿ ಹುರಿಯುತ್ತಿದೆ, ತಕ್ಷಣ ಕೂಗಿಕೊಂಡಿದ್ದಾರೆ.
ಅಕ್ಕಪಕ್ಕದ ಮನೆಯವರೂ ಸಹ ಎದ್ದು ಬಂದು ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಾಗಲೆ ಬೆಂಕಿಯ ಕೆನ್ನಾಲಿಗೆಗೆ ಚಿಕ್ಕಣ್ಣ ಸಂಗ್ರಹಿಸಿದ್ದ ಅಷ್ಟೂ ರಾಗಿ ಹುಲ್ಲು ಸುಟ್ಟು ಭಸ್ಮವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ