ಬರಪೀಡಿತ ತಾಲೂಕುಗಳ ಘೋಷಣೆಗೆ ಆದೇಶ

ಬೆಂಗಳೂರು:

               ರಾಜ್ಯದಲ್ಲಿ ಒಂದು ಕಡೆ  ಅತಿಯಾದ ಮಳೆಯಿಂದಾಗಿ ಜನರು ಕಷ್ಟದಲ್ಲಿ ಸಿಲುಕಿದ್ದರೆ ಮತ್ತೊಂದು ಕಡೆ ಮಳೆ ಇಲ್ಲದೆ ರೈತರು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ರಾಜ್ಯದ ಸುಮಾರು  75 ತಾಲ್ಲೂಕುಗಳಲ್ಲಿ ಮಳೆ ಕೊರತೆಯಿಂದ ಬರ ಆವರಿಸಿದ್ದು , ಬರ ಪೀಡಿತ ತಾಲ್ಲೂಕುಗಳನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮಾನ್ಯು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಅವರು  ಕಂದಾಯ, ಕೃಷಿ, ಹವಾಮಾನ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿರುವ ಮುಖ್ಯಮಂತ್ರಿಗಳು ಎಲ್ಲ ತಾಲ್ಲೂಕುಗಳಿಂದ ಮಾಹಿತಿ ತರಿಸಿಕೊಂಡು ಬರಪೀಡಿತ ತಾಲ್ಲೂಕುಗಳ ಘೋಷಣೆ ಮಾಡುವಂತೆ ಹೇಳಿದ್ದಾರೆ. ಈಗ ಬಂದಿರುವ  ಮಾಹಿತಿ ಪ್ರಕಾರ ರಾಜ್ಯದ 75 ತಾಲ್ಲೂಕು ಮಳೆಯ ಕೊರತೆ ಎದುರಿಸಿದೆ. 

Recent Articles

spot_img

Related Stories

Share via
Copy link