ಬೆಂಗಳೂರು:

ಬಸವ ವೇದಿಕೆಯು ಕಳೆದ 29 ವರ್ಷಗಳಿಂದ ನಾಡಿನ ವಿವಿಧ ಕ್ಷೇತ್ರಗಳ ಮಹಾನ್ ಸಾಧಕರುಗಳಿಗೆ “ಬಸವ ಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾ ಬಂದಿದೆ.ಈ ದಿಸೆಯಲ್ಲಿ ಹಲವಾರು ಹಿರಿಯ ಸಾಹಿತಿಗಳಿಗೆ ನಾಡಿನ ಪ್ರತಿಷ್ಠಿತ ವ್ಯಕ್ತಿಗಳಿಗೆ ಪ್ರಶಸ್ತಿಯನ್ನು ಈಗಾಗಲೇ ನೀಡಿ ಗೌರವಿಸಿದೆ ಈ ವರ್ಷ ಶರಣ ಚಿಂತಕರು 87ನೇ ಅಖಿಲ ಭಾರತ ಕನ್ನಡ ಸಮ್ಮೇಳನ ಅಧ್ಯಕ್ಷರಾಗಿದ್ದ ನಮ್ಮ ನೆಚ್ಚಿನ ಗೊ ನಾಡೋಜ ಗೊ ರು ಚನ್ನಬಸಪ್ಪನವರಿಗೆ 2025 ನೇ ಸಾಲಿನ ಬಸವ ಶ್ರೀ ಪ್ರಶಸ್ತಿಯನ್ನು ಮೇ 3ರಂದು ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನೀಡಿ ಗೌರವಿಸುತ್ತಿದೆ.
ಇದೇ ಸಂದರ್ಭದಲ್ಲಿ “ವಚನ ಸಾಹಿತ್ಯ” ಶ್ರೀ ಪ್ರಶಸ್ತಿಯನ್ನು ಬಿಜಾಪುರದ ಬಿ ಎಲ್ ಡಿ ಸಂಸ್ಥೆಯ ವಚನ ಪಿತಾಮಹ ಹಾಗೂಡಾ ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರಕ್ಕೆ ಹಾಗೂ ಪ್ರಖ್ಯಾತ ವಚನ ಸಂಗೀತ ಗಾಯಕಿ ಎಂಡಿ ಪಲ್ಲವಿ ಅವರಿಗೆ ನೀಡಲಾಗುತ್ತಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಬಸವ ವೇದಿಕೆ ಅಧ್ಯಕ್ಷ ಡಾ. ಸಿ. ಸೋಮಶೇಖರ್ ತಿಳಿಸಿದ್ದಾರೆ. ಸಮಾರಂಭದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಠದ ಜಗದ್ಗುರು ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ವಹಿಸುವರು. ಸಮಾರಂಭವನ್ನು ಉದ್ಘಾಟಿಸಿ “ಬಸವಶ್ರೀ” ಪ್ರಶಸ್ತಿಯನ್ನು ಗೃಹ ಸಚಿವರು ಮಾಜಿ ಉಪಮುಖ್ಯಮಂತ್ರಿಗಳಾದ ಡಾ ಜಿ ಪರಮೇಶ್ವರ್ ಅವರು ಪ್ರದಾನ ಮಾಡಲಿದ್ದಾರೆ.
ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿಗಳು ಲೋಕಸಭಾ ಸದಸ್ಯರಾದ ಬಸವರಾಜ ಬೊಮ್ಮಾಯಿ ಅವರು ವಹಿಸಲಿದ್ದಾರೆ.ವಚನ ಜ್ಯೋತಿ ಕೃತಿ ನಮ್ಮ ನಾಡಿನ ಕೈಗಾರಿಕಾ ಸಚಿವರು ಬಸವ ಅಭಿಮಾನಿಗಳಾದ ಸನ್ಮಾನ್ಯ ಎಂಬಿ ಪಾಟೀಲ್ ರವರು ಬಿಡುಗಡೆ ಮಾಡಲಿ ದ್ದಾರೆ ಮತ್ತು “ವಚನ ಸಾಹಿತ್ಯ ಶೀ” ಪ್ರಶಸ್ತಿಯನ್ನು ಭಾರತ ಸರ್ಕಾರದ ಜನಶಕ್ತಿ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವರಾದ ಅಪ್ಪಟ ಬಸವಾಭಿಮಾನಿಗಳದ ವಿ. ಸೋಮಣ್ಣನವರು ಪ್ರಶಸ್ತಿಯನ್ನು ನೀಡಲಿದ್ದಾರೆ. ಈ ಸಮಾರಂಭ ದಲ್ಲಿ ಪ್ರಖ್ಯಾತ ಗಾಯಕಿ ಎಂ ಡಿ ಪಲ್ಲವಿ ಅವರಿಂದ ವಚನಗಾಯನ ಇದೆ. ನಮ್ಮ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರರೂ ಗೌರವ ಸಲಹೆಗಾರರೂ ಅದ ನಾಡೋಜ ಗೊ ರು ಚನ್ನಬಸಪ್ಪನವರಿಗೆ ಈ ಪ್ರಶಸ್ತಿಯನ್ನು ನೀಡುತ್ತಿದ್ದು ನಮ್ಮ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲೆಯ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ಬಸವ ವೇದಿಕೆ ಸಂಸ್ಥೆಯ ವಿನಂತಿಸಿದೆ. .
