ಬಾಂಬ್‌ ಸ್ಪೋಟದ ಆರೋಪಿಗೆ ಚಿನ್ನದ ಪದಕ ಪ್ರದಾನ..!

ಗುವಾಹಟಿ:

     ಅಸ್ಸಾಂ ರಾಜ್ಯದಲ್ಲಿ ನಡೆದಿದ್ದ ಉಲ್ಫಾ-ಪ್ರಚೋದಿತ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿದ್ದ ಸಂಜಿಬ್​ ತಾಲೂಕ್ದಾರ್​ ಕೃಷ್ಣಕಾಂತಾ ಹ್ಯಾಂಡಿಕ್‌ ವಿಶ್ವವಿದ್ಯಾಲಯ ನಡೆಸಿದ  ಸ್ನಾತಕೋತ್ತರ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿ ಚಿನ್ನದ ಪದಕ ಪಡೆದಿದ್ದಾರೆ ಎಂದು ತಿಈದು ಬಂದಿದೆ .

    ಅಸ್ಸಾಂ ರಾಜ್ಯಪಾಲರಾದ ಫ್ರೋ.ಜಗದೀಶ್‌ ಮುಖ್ಖಿ ಅವರು ಈತನಿಗೆ ಪದಕ ಪ್ರದಾನ ಮಾಡಿದರು.ಇನ್ನು 2019 ರ ಗುವಾಹಟಿ ಸ್ಫೋಟದ ಶಂಕಿತರಲ್ಲಿ ಸಂಜಿಬ್ ತಾಲೂಕ್ದಾರ್ ಪ್ರಮುಖ ಆರೋಪಿಯಾಗಿದ್ದ ಮತ್ತು  ಈ ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದರು. ಜೈಲಿನಲ್ಲಿರುವಾಗ ಕೃಷ್ಣ ಕಾಂತಾ ಹ್ಯಾಂಡಿಕ್ ಸ್ಟೇಟ್ ಓಪನ್ ಯೂನಿವರ್ಸಿಟಿ (ಕೆಕೆಎಚ್‌ಎಸ್‌ಒಯು) ದಿಂದ ಮಾಸ್ಟರ್ ಆಫ್ ಆರ್ಟ್ಸ್‌ ಪರೀಕ್ಷೆ ತೆಗೆದುಕೊಂಡಿದ್ದ ಎನನ್ನಲಾಗಿದೆ  ದಾಖಲಾಗಿದ್ದು ಅದನ್ನು ಪೂರ್ಣಗೊಳಿಸಿದ್ದಾರೆ. 

 ಗುರುವಾರ ಗುವಾಹಟಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ರಾಜ್ಯಪಾಲ ಜಗದೀಶ್ ಮುಖಿ ಅವರು ಶೇ.71 ಅಂಕ ಗಳಿಸಿರುವ ಅಂಡರ್ ಟ್ರಯಲ್ ಗೆ ಚಿನ್ನದ ಪದಕ ಪ್ರದಾನ ಮಾಡಿದರು. ಮಾಧ್ಯಮದ ಜೊತೆ ಮಾತನಾಡಿದ ಸಂಜೀಬ್ ತಾಲೂಕ್‌ದಾರ್ ಸಹೋದರಿ ಡಾಲಿ, “ಇದು ನಮಗೆ ಮಿಶ್ರ ಭಾವನೆಯಾಗಿದೆ, ಆತ ಚಿನ್ನದ ಪದಕವನ್ನು ಪಡೆದಿರುವುದು ಖುಷಿ ಹಾಗೂ ಈಗ ಜೈಲಿನಲ್ಲಿ ಇರುವುದು ಬೇಸರ” ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ