ತುಮಕೂರು:
ನಗರದ 11ನೇ ವಾರ್ಡ್ ವ್ಯಾಪ್ತಿಯ ಮೇಳೆಕೋಟೆ ಅಂಗಡಿ ಬಳಿ ಬಾಲಕನೊಬ್ಬ ಕೈಯಲ್ಲಿ ಚಾಕೊಲೇಟ್ ಹಿಡಿದು ನಿಂತಿದ್ದಾಗ ಬಾಲಕನ ಮೇಲೆ ಬೀದಿ ನಾಯಿ ಎರಗಿ ಗಂಭೀರ ಗಾಯಗೊಳಿಸಿದೆ. ಮುಖಕ್ಕೆ ಬಾಯಿಹಾಕಿದ ನಾಯಿ ತುಟಿಯ ಕೆಳಭಾಗದಲ್ಲಿ ಕಚ್ಚಿದ್ದರಿಂದ ಬಾಲಕನಿಗೆ ಗಂಭೀರ ಗಾಯವಾಗಿದೆ. ಸಿದ್ದಗಂಗಾ ಆಸ್ಪತ್ರೆಯಲ್ಲಿ ಗಾಯಾಳು ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿ ದ ಪಾಲಿಕೆ ಆಯುಕ್ತೆ ಆಶ್ವಿಜ ಅವರು ಬಾಲಕನ ಆರೋಗ್ಯ ವಿಚಾರಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಾಲಕನಿಗೆ ಕಚ್ಚಿದ ನಾಯಿಯನ್ನು ಹಿಡಿಯಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ರಸ್ತೆ ಯಲ್ಲಿ ಬಿಸಾಡುವ ಕೋಳಿ ಮಾಂಸ ತಿನ್ನುವ ನಾಯಿಗಳು ಹೆಚ್ಚು ವ್ಯಘ್ರಗೊಳ್ಳುತ್ತಿದ್ದು ಆಕ್ರಮಣಕಾರಿ ಪ್ರವೃತ್ತಿ ತೋರುತ್ತಿವೆ.
ನಗರದಲ್ಲಿ ವಿಪರೀತ ಎನಿಸಿರುವ ನಾಯಿಗಳ ನಿಯಂತ್ರಣಕ್ಕೆ ಪಾಲಿಕೆ ಕಠಿಣ, ತ್ವರಿತ ಕ್ರಮ ವಹಿಸಬೇಕೆಂಬ ಆಗ್ರಹ ನಾಗರಿಕರಿಂದ ಕೇಳಿಬಂದಿದೆ. ಕಳೆದ ತಿಂಗಳ ಷ್ಟೇ ಹುಚ್ಚು ನಾಯಿಯೊಂದು ಐದಾರು ಜನರಿಗೆ ಕಚ್ಚಿಗಾಯಗೊಳಿಸಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಬೀದಿನಾಯಿ ಹಾವಳಿ ಘಟನೆ ನಡೆದಿರುವುದು ತುಮಕೂರಿನ ಜನತೆ ಯಲ್ಲಿ ಆತಂಕ ಸೃಷ್ಟಿ ಸಿದೆ.