ತುಮಕೂರು
ನಗರದ ಉಪ್ಪಾರಹಳ್ಳಿ ಬಡಾವಣೆ ಉರ್ದು ಶಾಲೆಯ ಬಳಿಯ 8ನೇ ಕ್ರಾಸ್‍ನಲ್ಲಿ ಭಾನುವಾರ ಮಂಜುನಾಥ್ ಎಂಬುವವರ ಮಗ ವಿಜಯ್(4 ವರ್ಷ ) ಮೇಲೆ ಹಂದಿ ದಾಳಿ ಮಾಡಿದೆ.
ಬಾಲಕನ ಹಣೆ, ಕೈಗಳಿಗೆ ಕಚ್ಚಿದ್ದು, ಮೈಮೇಲೆ ಪರಚಿದೆ. ಮಧ್ಯಾಹ್ನ 3 ಗಂಟೆ ವೇಳೆಯಲ್ಲಿ ಈ ಘಟನೆ ನಡೆದಿದೆ. ಮನೆಯ ಮುಂದೆ ಬಾಲಕ ಆಟವಾಡುತ್ತಿದ್ದಾಗ ಏಕಾಏಕಿ ದಾಳಿ ಮಾಡಿದೆ ಎಂದು ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಈ ಹಿಂದಿನ ಜಿಲ್ಲಾಧಿಕಾರಿ ಆರ್.ವಿಶಾಲ್ ಅವರು ಮಹಾನಗರ ಪಾಲಿಕೆಗೆ ಹಂದಿಗಳನ್ನು ಹಾಗೂ ನಾಯಿಗಳನ್ನು ಹಿಡಿದು ಹೊರ ಹಾಕುವ ಅಧಿಕಾರ ಇದೆ ಎಂದು ಆದೇಶಿಸಿದ್ದರೂ ಪಾಲಿಕೆ ಆ ಕೆಲಸ ಮಾಡಿಲ್ಲ.ಕೇವಲ ಎಚ್ಚರಿಕೆ ಪ್ರಕಟಣೆಗಳನ್ನು ಮಾತ್ರ ಹೊರಡಿಸುತ್ತಿದೆ. ಮಕ್ಕಳ ಜೀವಕ್ಕೆ ಅಪಾಯವಾದರೆ ಯಾರು ಅದರ ಹೊಣೆಗಾರಿಕೆ ವಹಿಸುತ್ತಾರೆ ಎಂದು ಮಗು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬಡಾವಣೆಗಳಲ್ಲಿ ನಾಯಿ, ಹಂದಿಗಳಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಹಲವು ಬಾರಿ ಪತ್ರಿಕೆಗಳಲ್ಲಿ ವರದಿಗಳು ಪ್ರಕಟಗೊಂಡಿವೆ. ಆದರೂ ಈ ವರೆಗೆ ನಾಯಿ ಹಾಗೂ ಹಂದಿಗಳನ್ನು ಹಿಡಿದು ಹೊರ ಹಾಕುವ ಕೆಲಸ ಮಾಡಿಲ್ಲ. ಇದೀಗ ಪಾಲಿಕೆ ಚುನಾವಣೆ ನೆಪದಲ್ಲಿ ಇನ್ಯಾವ ಕೆಲಸಗಳೂ ನಡೆಯದಂತಾಗಿವೆ.