ಬಾಲಕಿಯನ್ನು ಅತ್ಯಾಚಾರ ಮಾಡಿ ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳು ಅಂದರ್

ಶಿವಮೊಗ್ಗ :ಬಾಲಕಿಯನ್ನು ಅತ್ಯಾಚಾರ ಮಾಡಿ ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳು ಅಂದರ್

            ಶಾಲೆ ಮುಗಿಸಿ ತನ್ನೂರಿಗೆ ಹೋಗಲು ಹೊಸನಗರ ಬಸ್ ನಿಲ್ದಾಣದಲ್ಲಿ ಬಾಲಕಿ ನಿಂತಿದ್ದಾಗ, ನಾವು ಸಹ ಊರಿಗೆ ಹೋಗ್ತಾ ಇದ್ದೇವೆ ಎಂದು ಬಾಲಕಿಯನ್ನು ಕಾರಿನಲ್ಲಿ ಕೂರಿಸಿಕೊಂಡು ನಂತರ ರೂಂಗೆ ಕರೆದು ಕೊಂಡು ಹೋಗಿ ಇಬ್ಬರೂ ಅತ್ಯಾಚಾರ ನಡೆಸಿದ್ದಾರೆ.

17 ವರ್ಷದ ಶಾಲಾ ಬಾಲಕಿಯನ್ನು ಅತ್ಯಾಚಾರ ನಡೆಸಿ, ಆಕೆಯ ಅಶ್ಲೀಲ ವಿಡಿಯೋವನ್ನು ವೈರಲ್ ಮಾಡಿದ ಆರೋಪದಡಿ ಇಬ್ಬರನ್ನು ಹೊಸನಗರ ಪೊಲೀಸರು ಬಂಧಿಸಿದ್ದಾರೆ.

 

ಜೆಸಿಬಿ ಆಪರೇಟರ್​​ಗಳಾದ ಸಂತೋಷ್(24) ಹಾಗೂ ಸುನೀಲ್(26) ಬಂಧಿತರು. ಶಾಲೆ ಮುಗಿಸಿ ತನ್ನೂರಿಗೆ ಹೋಗಲು ಹೊಸನಗರ ಬಸ್ ನಿಲ್ದಾಣದಲ್ಲಿ ಬಾಲಕಿ ನಿಂತಿದ್ದಾಗ, ನಾವು ಸಹ ಊರಿಗೆ ಹೋಗ್ತಾ ಇದ್ದೇವೆ ಎಂದು ಬಾಲಕಿಯನ್ನು ಕಾರಿನಲ್ಲಿ ಕೂರಿಸಿಕೊಂಡು ನಂತರ ರೂಂಗೆ ಕರೆದು ಕೊಂಡು ಹೋಗಿ ಇಬ್ಬರೂ ಅತ್ಯಾಚಾರ ನಡೆಸಿದ್ದಾರೆ.

ಅತ್ಯಾಚಾರ ನಡೆಸಿದ ವೇಳೆ ವಿಡಿಯೋ ಚಿತ್ರೀಕರಣ ಸಹ ಮಾಡಿದ್ದಾರೆ. ಅತ್ಯಾಚಾರ ನಡೆಸಿದ ವಿಷಯ ಯಾರಿಗೂ ಹೇಳಬಾರದು, ಒಂದು ವೇಳೆ ವಿಷಯ ತಿಳಿಸಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಪುನಃ ಬಾಲಕಿಯನ್ನು ಈ ಕಾಮುಕರು ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಸಿ ಕರೆದಿದ್ದಾರೆ. ಆಗ ಆಕೆ      ಹೋಗದಿದ್ದಕ್ಕೆ ವಿಡಿಯೋವನ್ನು ರಾಘವೇಂದ್ರ, ಸಚಿನ್ ಹಾಗೂ ಸುಬ್ಬು ಎಂಬುವರಿಗೆ ಕಳುಹಿಸಿದ್ದಾರೆ.

ಈ ಕುರಿತು ಬಾಲಕಿ ದೂರು ನೀಡಿದ ಅನ್ವಯ ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರನ್ನೂ ಬಂಧಿಸಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ