ಬಾವಿ ಹಾಳುಗೆಡವಲು ಮುಂದಾದ ಕಿಡಿಗೇಡಿಗಳು

ಮಧುಗಿರಿ:

ತಾಲ್ಲೂಕಿನ ಕಸಬಾ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಮಧ್ಯದಲ್ಲಿರುವ ಗಜಾನನ ಕಲಾ ಮಂದಿರದ ಮುಂಭಾಗದಲ್ಲಿ ಬಾವಿ ಇದ್ದು, ಈ ಹಿಂದೆ 2005 ರಲ್ಲಿ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರೆಲ್ಲಾ ಸೇರಿ ಬಾವಿಯನ್ನು ಶುಚಿಗೊಳಿಸಿದ್ದರು.

ಕಾಲ ಕ್ರಮೇಣ ಬಾವಿಯ ಅಕ್ಕ-ಪಕ್ಕದ ನಿವಾಸಿಗಳು ಕಸ ಹಾಕಲು ಸರಿಯಾದ ವ್ಯವಸ್ಥೆ ಇಲ್ಲದೆ ಇದ್ದರಿಂದ ತಮ್ಮ ಮನೆಯ ಕಸವನ್ನು ಬಾವಿಗೆ ತುಂಬಲು ಮುಂದಾಗಿ ಬಾವಿಯನ್ನೇ ಕಸದ ತೊಟ್ಟಿಯನ್ನಾಗಿ ಬಳಸಿಕೊಂಡಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.

ಪುರಾತನ ಬಾವಿಯು ಈ ಹಿಂದೆ ಗ್ರಾಮದ ಸಾವಿರಾರು ಮನೆಗಳಿಗೆ ಕುಡಿಯುವ ನೀರನ್ನು ಒದಗಿಸುತ್ತಿತ್ತು. ಆದರೆ ಬಾವಿಯಿಂದಾಗಿ ಈಗಲೂ ಯಾರಿಗೂ ಸಮಸ್ಯೆ ಇರಲಿಲ್ಲ. ಯಾರೊ ಕಿಡಿಗೇಡಿಗಳು ಸೋಮವಾರ ಮಧ್ಯರಾತ್ರಿ ಬಾವಿಯ ಮೇಲ್ಭಾಗವನ್ನು ಹಾಳುಗೆಡವಿದ್ದಾರೆ.

ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಿತವಾದ ಕೋಟೆ ಸಹ ಇದ್ದು, ಆ ಕೋಟೆಯನ್ನು ಕೆಲವರು ವಿಕೃತಗೊಳಿಸಲು ಮುಂದಾಗುತ್ತಿದ್ದಾರೆ.

ಸಂಬಂಧಪಟ್ಟವರು ಕೋಟೆ ಹಾಗೂ ಗ್ರಾಮದ ಮಧ್ಯದಲ್ಲಿರುವ ಕುಡಿಯುವ ನೀರಿನ ಪುರಾತನ ಬಾವಿಯನ್ನು ಜೀರ್ಣೋದ್ಧಾರ ಮಾಡಬೇಕೆಂದು ಗ್ರಾಮಸ್ಥರಾದ ವೈದ್ಯ ಶ್ರೀನಿವಾಸ್,

ಲಕ್ಷ್ಮೀಕಾಂತ, ದ್ವಾರಕೀಶ್, ಬಾಲಾಜಿ, ಮಂಜುನಾಥ್, ರಮೇಶ್, ಶರತ್ ಬಾಬು, ನಾಗೇಶ್, ಎಂ ರಮೇಶ್, ಆರ್ ರಮೇಶ್, ಮಂಜುನಾಥ್, ವೆಂಕಟೇಶ್, ಶ್ರೀರಂಗ, ಧನಂಜಯ ಶೆಟ್ಟರು, ಮಾದೇವಯ್ಯ, ರಂಗಶಾಮಣ್ಣ, ವೆಂಕಟೇಶಪ್ಪ, ಪಂಚಾಕ್ಷರಯ್ಯ, ದಿನೇಶ್, ನಾಗಭೂಷಣ್, ನಾಗರಾಜು ಆಗ್ರಹಿಸಿದ್ದಾರೆ.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link