ಬೆಂಗಳೂರು:
ಎಪ್ರಿಲ್ 14 ರಂದು ವಿಶ್ವದಾದ್ಯಂತ ಕೆಜಿಎಫ್ 2 ಚಿತ್ರವು ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆಗಳನ್ನೇ ನಿರ್ಮಿಸುತ್ತಿದೆ. ಈಗಾಗಲೇ 1000 ಕೋಟಿ ಕ್ಲಬ್ ನ್ನು ತಲುಪುವ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದರ ಜೊತೆಗೆ ಈಗ ಹಿಂದಿ ಆವೃತ್ತಿಯಲ್ಲಿ ಬಾಹುಬಲಿ 2 ನಂತರ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಖ್ಯಾತಿಯನ್ನು ಕೆಜಿಎಫ್ 2 ಹೊಂದಿದೆ.ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎನ್ನುವಂತೆ ತಮಿಳುನಾಡಿನಲ್ಲಿ 100 ಕೋಟಿ ಗಡಿ ದಾಟಿದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಷ್ಟೇ ಅಲ್ಲದೆ ನಾಲ್ಕು ಭಾಷೆಗಳಲ್ಲಿ 100 ಕೋಟಿ ಗಡಿ ದಾಟಿದ ಮೊದಲ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ KGF 2 ಚಿತ್ರ ಪಾತ್ರವಾಗಿದೆ.ಇದಕ್ಕೂ ಮೊದಲು ಬಾಹುಬಲಿ ಸ್ಯಾಂಡಲ್ ವುಡ್ ವೊಂದನ್ನು ಹೊರತುಪಡಿಸಿ ಉಳಿದೆಲ್ಲಾ ಭಾಷೆಗಳಲ್ಲಿ 100 ಕೋಟಿ ಗಡಿಯನ್ನು ದಾಟಿತ್ತು. ಆಗ ಅದು ಕನ್ನಡದಲ್ಲಿ ಡಬ್ಬಿಂಗ್ ರೂಪದಲ್ಲಿ ಬಿಡುಗಡೆಯಾಗಿರಲಿಲ್ಲ.
18-40 ವರ್ಷ ವಯಸ್ಸಿನವರಿಗೆ ಕೇಂದ್ರ ಸರ್ಕಾರ ಪ್ರತಿ ತಿಂಗಳು ₹1,800 ನೀಡುತ್ತಿದೆಯೇ?
ಈಗ ಈದ್ ಹಿನ್ನಲೆಯಲ್ಲಿ ಕೆಜಿಎಫ್ 2 ಚಿತ್ರ ನೋಡಲು ಧಾವಿಸುತ್ತಿರುವವರು ಸಂಖ್ಯೆ ಅಧಿಕವಾಗಿದೆ.ಅಚ್ಚರಿ ಏನೆಂದರೆ ಜರ್ಸಿ, ರನ್ವೇ 34, ಹಾಗೂ ಹೀರೋಪಂತಿ 2 ಯಂತಹ ಹಿಂದಿ ಚಿತ್ರಗಳು ಬಿಡುಗಡೆಯಾದರೂ ಸಹ ಹಿಂದಿ ಬೆಲ್ಟ್ ನಲ್ಲಿ ಕೆಜಿಎಫ್ 2 ಚಿತ್ರವು ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ.
ತಕ್ಷಣದಿಂದ ಜಾರಿಗೆ ಬರುವಂತೆ ʼರೆಪೊ ದರ 40 bps ಹೆಚ್ಚಳʼ : RBI ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆ
ಈಗ ಬಾಕ್ಸ್ ಆಫೀಸ್ ನಲ್ಲಿರುವ ಈಗಿನ ಟ್ರೆಂಡ್ ನ್ನು ನೋಡಿದರೆ ಈ ಚಿತ್ರವು ಸುಲಭವಾಗಿ 1100 ಗಡಿಯನ್ನು ಸುಲಭವಾಗಿ ದಾಟಲಿದೆ ಎನ್ನಲಾಗುತ್ತಿದೆ. ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಮತ್ತು ಪ್ರಕಾಶ್ ರಾಜ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಇನ್ನೂ ನಿಲ್ಲದ ಕುದುರೆ ಎನ್ನಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
