ಬಿಎಸ್‍ಎನ್‍ಎಲ್ ನೌಕರ ಅನಿರ್ದಿಷ್ಟಾವಧಿ ಮುಷ್ಕರ….!!!

ಬೆಂಗಳೂರು

         ವೇತನ ಪರಿಷ್ಕರಣೆ, ಪಿಂಚಣಿ ಪರಿಷ್ಕರಣೆ ಇನ್ನಿತರ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಪಡಿಸಿ ಬಿಎಸ್‍ಎನ್‍ಎಲ್ ನೌಕರರು ಸೋಮವಾರ(ಡಿ,3)ದಿಂದ ಬೆಂಗಳೂರು ನಗರ ಸೇರಿದಂತೆ ರಾಷ್ಟ್ರವ್ಯಾಪ್ತಿ ಅನಿರ್ದಿಷ್ಟ ಕಾಲದ ಮುಷ್ಕರವನ್ನು ನಡೆಸಲಿದ್ದಾರೆ.

         ನಗರದ ಬಿಎಸ್‍ಎನ್‍ಎಲ್ ಕಚೇರಿ ಆವರಣದಲ್ಲಿ ನಡೆಯುವ ಮುಷ್ಕರದಲ್ಲಿ ಸಾವಿರಾರು ನೌಕರರು ಭಾಗವಹಿಸಿ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿದ್ದಾರೆ. 

       ಕೇಂದ್ರ ಸರ್ಕಾರವು ಬಿಎಸ್‍ಎನ್‍ಎಲ್ ಸಂಸ್ಥೆಗೆ ವೇತನ ಪರಿಷ್ಕರಣೆಗೆ ಶಿಫಾರಸ್ಸು ಮಾಡುತ್ತಿಲ್ಲ. ದೂರ ಸಂಪರ್ಕ ಇಲಾಖೆಯಿಂದ ಬೇರ್ಪಡಿಸಿ ಬಿಎಸ್‍ಎನ್‍ಎಲ್ ಸಂಸ್ಥೆಯನ್ನು ಆರಂಭಿಸಲಾಯಿತಾದರೂ ವೇತನ ಪರಿಷ್ಕರಣೆಗೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಆಲ್ ಯೂನಿಯನ್ಸ್ ಮತ್ತು ಅಸೋಸಿಯೇಷನ್ ಆಫ್ ಬಿಎಸ್‍ಎನ್‍ಎಲ್ ಕರ್ನಾಟಕ ವಲಯದ ನೌಕರರು ಆರೋಪಿಸಿದ್ದಾರೆ.

      ಕೇಂದ್ರ ಸರ್ಕಾರವು ಪಿಂಚಣಿ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿದೆ. ಆದರೂ ಈ ಭರವಸೆಯನ್ನು ಈಡೇರಿಸಲು ಹಿಂದೇಟು ಹಾಕುತ್ತಿದೆ ಎಂದು ಆಪಾದಿಸಿದ್ದಾರೆ.

      ಎಲ್ಲ ಖಾಸಗಿ ಸಂಸ್ಥೆಗಳಿಗೆ 4ಜಿ ಸೇವೆಯನ್ನು ಒದಗಿಸಲಾಗಿದೆ. ಆದರೆ, ಬಿಎಸ್‍ಎನ್‍ಎಲ್ ಸಂಸ್ಥೆಗೆ ಈ ಸೇವೆ ಒದಗಿಸುತ್ತಿಲ್ಲ ಎಂದು ಆಪಾದಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link