ಕುಣಿಗಲ್:-
ಕೇಂದ್ರ ಹಾಗೂ ರಾಜ್ಯ ಸರಕಾರಳೆರಡು ಜನರ ನಿರೀಕ್ಷೆಯಂತೆ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದು ಮತ್ತೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಕುಣಿಗಲ್‌ನಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಪರ ಮತಯಾಚನೆ ಮಾಡಿ ಮಾತನಾಡಿದರು. ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷದ ಮೇಲೆ ಜನರಿಗೆ ವಿಶ್ವಾಸ ಇಲ್ಲ. ಆದರೆ ಬಿಜೆಪಿಯ ಡಬಲ್ ಇಂಜಿನ್ ಸರಕಾರಗಳು ಜರ ವಿಶ್ವಾಸ ಗಳಿಸುವ ಯೋಜನೆಗಳನ್ನು ಜಾರಿ ಮಾಡುವು ಮೂಲಕ ಅಭಿವೃದ್ದಿ ಕೆಲಸಗಳನ್ನು ಮಾಡಿದೆ. ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಬಿಜೆಜೆ ಮತ್ತೇ ಸರಕಾರ ರಚನೆ ಮಾಡುವುದು ಖಚಿತ ಎಂದ ಅವರು ನಾನು ಸಿಎಂ ಆಗಿದ್ದಾಗ ಕುಣಿಗಲ್ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಅನುಧಾನ ಬಿಡುಗಡೆ ಮಾಡಿ ಶ್ರಮಿಸಿದ್ದೆನೆ. ಇದನ್ನು ಸಹ ಗಮನದಲ್ಲಿ ಇಟ್ಟುಕೊಂಡು ಕುಣಿಗಲ್ ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕೆಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ ಬಿಜೆಪಿ ಸರಕಾರಗಳಿಂದ ದೇಶದ ಜೊತೆಗೆ ರಾಜ್ಯವೂ ವಿಕಾಸಗೊಂಡಿದೆ. ಕುಣಿಗಲ್ ವಿಕಾಸ್‌ವಾಗಿಬೇಕಾದರೆ ಸತತವಾಗಿ ಮೂರು ಬಾರಿ ಸೋಲು ಕಂಡರೂ ಜನರ ಮಧ್ಯೆ ಇದ್ದು ಸೇವೆ ಸಲ್ಲಿಸುರತ್ತಿರುವ ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಅವರನ್ನು ಗೆಲ್ಲಿಸಿ ವಿಧಾನಸಭೆ ಕಳುಹಿಸಕೊಡಬೇಕೆಂದು ತಿಳಿಸಿದರು.
ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರ ಉತ್ತಮ ಅಡಳಿತ ನೀಡುವ ಮೂಲಕ ಇಡೀ ಪ್ರಪಂಚವೇ ದೇಶದ ಕಡೆ ನೋಡುವಂತೆ ಮಾಡುವ ಜೊತೆಗೆ ವಿಶ್ವ ನಾಯಕತ್ವದ ಸ್ಥಾನ ಗಳಿಸಿಕೊಂಡಿದೆ. ರಾಜ್ಯದಲ್ಲಿ ಬಿಎಸ್‌ವೈ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಸರಕಾರ ಉತ್ತಮ ಅಡಳಿತ ನಡೆಸಿದೆ. ಮುಂದೆಯು ಇವರ ಮಾರ್ಗದರ್ಶನದಲ್ಲೇ ಸರಕಾರ ನಡೆಯಲಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ