ಚಿತ್ರದುರ್ಗ;
ನಗರಸಭೆಯ ಚುನಾವಣೆಯಲ್ಲಿ 34ನೇ ವಾರ್ಡಿನಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಹೆಚ್.ಶ್ರೀನಿವಾಸ್ ಅವರು ಶುಕ್ರವಾರದಂದು ಕಾರ್ಯಕರ್ತರು ಮತ್ತು ಮುಖಂಡರ ಜೊತೆಗೆ ಮತಯಾಚನೆ ಮಾಡಿದರು
ವಾರ್ಡಿನ ಮನೆ ಮನೆಗೂ ಬೇಟಿ ಮಾಡಿ ಮತಯಾಚನೆ ಮಾಡಿದ ಶ್ರೀನಿವಾಸ್ ಅವರು, ವಾರ್ಡಿನ ಸಮಗ್ರ ಅಭಿವೃದ್ದಿಯ ದೃಷ್ಠಿಯಿಂದ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಬೇಕೆಂದು ಮತದಾರರನ್ನು ಮನವಿ ಮಾಡಿಕೊಂಡರು
ಮತದಾರರು ತಮ್ಮ ಮೇಲೆ ನಂಬಿಕೆ ಇಟ್ಟು ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆಯೂ ಸೇರಿದಂತೆ ಇನ್ನಿತರೆ ಮೂಲಭೂತ ಸೌಲಬ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು
ಈ ಬಾರಿಯ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದೆ. ಎಲ್ಲಾ ವಾರ್ಡ್‍ಗಳಲ್ಲೂ ಪಕ್ಷದ ಅಭ್ಯರ್ಥಿಗಳ ಪರವಾಗಿ ಒಲವು ವ್ಯಕ್ತವಾಗಿದೆ. ಬಿಜೆಪಿ ನಗರಸಭೆಯಲ್ಲಿ ಅಧಿಕಾರಕ್ಕೆ ಬರಲಿದ್ದು, 34ನೇ ವಾರ್ಡಿಗೆ ವಿಶೇಷ ಆದ್ಯತೆ ಕೊಟ್ಟು ಅಭಿವೃದ್ದಿ ಕೆಲಸಗಳಿಗೆ ಚಾಲನೆ ನೀಡಲಾಗುವುದು ಎಂದು ಶ್ರೀನಿವಾಸ್ ತಿಳಿಸಿದರು
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇದೇ ವಾರ್ಡಿನಲ್ಲಿ ಬಿಜೆಪಿಗೆ ಅತ್ಯಧಿಕ ಮತಗಳು ಲಭಿಸಿವೆ.
ಸ್ಥಳೀಯ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಮಾರ್ಗದರ್ಶನಲ್ಲಿ ನಾವು ಅಭಿವೃದ್ದಿಗೆ ಒತ್ತುಕೊಟ್ಟು ಕೆಲಸ ಮಾಡುತ್ತೇವೆ. ಶಾಸಕರನ್ನು ಬಲಪಡಿಸಲು ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕಾಗಿದೆ. ಮತದಾರರು ಜಾತಿ, ಪಕ್ಷ ಮೀರಿ ಅಭಿವೃದ್ದಿಗಾಗಿ ತಮಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು
ಇಡೀ ದೇಶ ಇಂದು ಬಿಜೆಪಿಮಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಗತ್ತು ಕೊಂಡಾಡುತ್ತಿದೆ. ಇಂತಹ ಶ್ರೇಷ್ಠ ನಾಯಕ ಇಂದು ದೇಶಕ್ಕೆ ಸಿಕ್ಕಿರುವುದು ನಮ್ಮ ಸೌಭಾಗ್ಯ. ಪಕ್ಷವನ್ನು ತಳಮಟ್ಟದಿಂದ ಇನ್ನೂ ಗಟ್ಟಿಗೊಳಿಸಬೇಕಾಗಿರುವುದರಿಂದ ಈ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಾಗಿರುವುದು ಅನಿವಾರ್ಯ ಎಂದು ಹೇಳಿದರು
ನಾಳೆ ತಿಪ್ಪಾರೆಡ್ಡಿ ಮತಯಾಚನೆ;
34ನೇ ವಾರ್ಡಿನಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಬಿಜೆಪಿಯ ಪರವಾಗಿ ಮತಯಾಚನೆ ಮಾಡುವರು ಎಂದು ಅಭ್ಯರ್ಥಿ ಹೆಚ್.ಶ್ರೀನಿವಾಸ್ ತಿಳಿಸಿದ್ದಾರೆ.
ಪಕ್ಷದ ಕಾರ್ಯಕರ್ತರು, ಮುಖಂಡರುಗಳು ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅವರು ಕೋರಿದ್ದಾರೆ
