ಬಿಜೆಪಿ ಚುನಾವಣಾ ಪ್ರಚಾರ ಸಭೆ : ಅಭಿವೃದ್ಧಿ ಪರ ಚಿಂತಿಸುವ ವ್ಯಕ್ತಿಗೆ ಮತ ನೀಡಲು ಮನವಿ

ಚಳ್ಳಕೆರೆ

            ಕಳೆದ ಹಲವಾರು ವರ್ಷಗಳಿಂದ ಸಮಸ್ಯೆಗಳಿಂದ ಚಿಂತೆಗೀಡಾದ ಎಲ್ಲಾ ವರ್ಗದ ಜನತೆಗೆ ಭರವಸೆಯ ಬೆಳಕನ್ನು ಮೂಡಿಸಲು ಭಾರತೀಯ ಜನತಾ ಪಕ್ಷ ರಾóಷ್ಟ್ರೀಯ ಮಟ್ಟದಲ್ಲಿ ಯಶಸ್ಸಿಯಾಗಿದೆ. ಈಗಾಗಲೇ ರಾಷ್ಟ್ರದಲ್ಲಿ ಅಧಿಕಾರವನ್ನು ಯಶಸ್ಸಿಯಾಗಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ಅಧಿಕಾರ ನೀಡಲು ತಮ್ಮ ಮತಗಳ ಮೂಲಕ ನಿರ್ಧರಿಸಿದರು. ಆದರೆ, ವಿವಿಧ ಪಕ್ಷಗಳ ರಾಜಕೀಯ ಕಪಟತನಕೆ ರಾಜ್ಯದ ಜನತೆಯ ಆಸೆ ಈಡೇರಿಲ್ಲ, ಭಾರತೀಯ ಜನತಾ ಪಕ್ಷ ಮುಂಬರುವ ದಿನಗಳಲ್ಲಿ ರಾಜ್ಯದಲ್ಲೂ ಸಹ ಅಧಿಕಾರಕ್ಕೆ ಬರುವ ದಿನಗಳು ದೂರವಿಲ್ಲವೆಂದು ಹಿರಿಯೂರು ಕ್ಷೇತ್ರದ ಶಾಸಕಿ, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.

           ಅವರು, ಶನಿವಾರ ತಡರಾತ್ರಿ ನಗರದ ಹಳೇಟೌನ್, ಸೂಜಿಮಲ್ಲೇಶ್ವರನಗರ, ಕಾಟಪ್ಪನಹಟ್ಟಿ ಪ್ರದೇಶಗಳಲ್ಲಿ ಭಾರತೀಯ ಜನತಾ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿ ಈ ತಿಂಗಳ 31ರಂದು ನಡೆಯುವ ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ವಿನಂತಿಸಿದರು. ಚಳ್ಳಕೆರೆ ನಗರದ ಪರಿಪೂರ್ಣವಾಗಿ ಬೆಳವಣಿಗೆಯಾಗುತ್ತಿದ್ದು ಬೆಳವಣಿಗೆಗೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಿಗೆ ತಮ ನೀಡಿ ಹೆಚ್ಚು ಸ್ಥಾನಗಳನ್ನು ಪಡೆಯುವಂತೆ ಮಾಡಿ ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯಲು ನಗರದ ಮತದಾರರು ಸಹಕರಿಸಬೇಕೆಂದು ತಿಳಿಸಿದರು.

            ನಗರದಲ್ಲಿ ಬಿಜೆಪಿ ಸ್ಪರ್ಧಿಸಿರುವ ಎಲ್ಲಾ ವಾರ್ಡ್‍ಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮತದಾರರು ತಮ್ಮ ಮತಗಳನ್ನು ನೀಡುವ ಮೂಲಕ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಅಭಿವೃದ್ಧಿಯ ಕನಸ್ಸಿಗೆ ನೆರವಾಗಿ ಎಂದರು.

           ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ನಗರಸಭೆ ಚುನಾವಣೆಯಲ್ಲಿ ಹೆಚ್ಚು ಪ್ರಚಾರ ಕೈಗೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಕಾರಣ ಇತ್ತೀಚೆಗೆ ನಮ್ಮ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಸಕ್ರಿಯವಾಗಿ ರಾಜಕೀಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆದರೆ, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪಕ್ಷದ ಅನೇಕ ದುರೀಣರು ಇಲ್ಲಿನ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ. ನಾನು ಸಹ ಪಕ್ಷದ ಗೆಲುವನ್ನು ಸಾಕ್ಷೀಕರಿಸುವಂತೆ ಮನವಿ ಮಾಡುತ್ತೇನೆಂದರು.

          ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ಮಾತನಾಡಿ, ನಗರದ ವಿವಿಧ ವಾರ್ಡ್‍ಗಳಲ್ಲಿ ಈಗಾಗಲೇ ಪಕ್ಷದ ವಿವಿಧ ಹಂತದ ಮುಖಂಡರು ವ್ಯಾಪಕ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ನಗರಸಭಾ ಚುನಾವಣೆಗಿಂತ ಈ ಬಾರಿಯ ನಗರಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ವತಿಯಿಂದ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಎಲ್ಲಾ ಅಭ್ಯರ್ಥಿಗಳು ಪ್ರಸ್ತುತ ರಾಷ್ಟ್ರದ ಪ್ರಗತಿಯನ್ನು ಮೂಲದಂಡವಾಗಿಟ್ಟುಕೊಂಡು ಮತದಾರರನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.

          ಪ್ರಚಾರ ಕಾರ್ಯದಲ್ಲಿ ಜಿಲ್ಲಾ ಉಪಾಧ್ಯಕ್ಷ ಶಿವಪುತ್ರಪ್ಪ, ರಾಮದಾಸ್, ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಅಭ್ಯರ್ಥಿಗಳಾದ ಜೆ.ಕೆ.ರವಿ, ಸಾಕಮ್ಮ, ಪಾಪಕ್ಕ, ಜೆ.ಕೆ.ವೀರಣ್ಣ, ಜೆಎಂಸಿ ವೀರೇಶ್, ಸಿ.ಎಸ್.ಪ್ರಸಾದ್, ಡಿ.ಎಂ.ತಿಪ್ಪೇಸ್ವಾಮಿ, ಕ್ಯಾತಣ್ಣ ಮುಂತಾದವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap