ಕುಣಿಗಲ್
ಕೆಲವು ವಿದ್ಯಾರ್ಥಿಗಳಿಗೆ ಬಿಸಿಊಟ ಸೇವನೆಯಿಂದ ಉಂಟಾದ ವಾಂತಿ ಬೇಧಿಯಿಂದ ಗಾಬರಿಗೊಂಡ ಶಿಕ್ಷಕರು ಪೋಷಕರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಅನಾಹುತ ಆಗದಂತೆ ಕ್ರಮವಹಿಸಿದ ಸನ್ನಿವೇಶ ಕೆಲವೊತ್ತು ಆತಂಕವನ್ನುಂಟುಮಾಡಿತ್ತು.
ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ವಡ್ಡರಕುಪ್ಪೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಎಂದಿನಂತೆ ಮಧ್ಯಾಹ್ನದ ಬಿಸಿಯೂಟವನ್ನ ಸೋಮವಾರ ದಂಟಿನಸೊಪ್ಪಿನ ಸಾರುಮುದ್ದೆ ಅನ್ನವನ್ನ ಮಾಡಿಸಲಾಗಿತ್ತು. ಈ ವೇಳೆ ಶಾಲೆಯಲ್ಲಿರುವ 14 ವಿದ್ಯಾರ್ಥಿಗಳ ಪೈಕಿ 13 ಜನ ಊಟ ಮಾಡಿದ್ದಾರೆ.
ಅದರಲ್ಲಿ ತರುಣ್ ಎಂಬಾತ ಊಟ ಮಾಡದೆ ಇದ್ದವನಿಗೆ ಅದೇ ಸಮಯದಲ್ಲಿ ವಾಂತಿಯಾಗಿದೆ. ಇದನ್ನ ನೋಡಿದ ವಿದ್ಯಾರ್ಥಿಗಳಾದ ಶೋಭ, ಗಗನ, ಸಿಂಧು, ನಾಗೇಂದ್ರ ಹೇಮ ಎಂಬುವರಿಗೂ ವಾಂತಿಯಾಗಿದೆ ಇದರಲ್ಲಿ ಒಂದಿಬ್ಬರಿಗೆ ಬೇಧಿಯೂ ಸಹವಾಗಿದೆ. ಉಳಿದ 7 ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿರುವ ಶಿಕ್ಷಣ ಇಲಾಖೆಯವರು ಒಬ್ಬ ವಾಂತಿ ಮಾಡಿದ್ದನ್ನ ಕಂಡಂತಹ ಇತರೆ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡ ಸನ್ನಿವೇಶದಿಂದ ಇಂತಹ ಘಟನೆ ನಡೆದಿದೆ ಎಂದು ಶಿಕ್ಷಣ ಇಲಾಖೆಯವರು ತಿಳಿಸಿದ್ದಾರೆ.
ತಕ್ಷಣ ಭಯದಿಂದಲೇ 108 ವಾಹನದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಅಲ್ಲಿನ ಶಿಕ್ಷಕಿ ಮತ್ತು ಪೋಷಕರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಗೆ ಮನವಿ ಮಾಡಿ ಮೇರೆಗೆ ತರಾತುರಿಯಲ್ಲಿ ಡಾ.ಗಣೇಶಬಾಬು ಮತ್ತು ಅವರ ಸಿಬ್ಬಂದಿವರ್ಗ ತಕ್ಷಣ ಕಾರ್ಯಪ್ರವೃತ್ತರಾಗಿ ವಾಂತಿಮಾಡಿಕೊಂಡವರನ್ನ ಮತ್ತೆ ವಾಂತಿ ಮಾಡಿಸಿ ಹೆಚ್ಚಿನ ತಪಾಸಣೆಗೆ ತುಮಕೂರಿಗೆ ಸಾಗಿಸಿದ್ದು ವರದಿ ಬಂದ ನಂತರ ವಾಂತಿಯ ಪರಿಣಾಮ ತಿಳಿಯುತ್ತದೆ ಎಂದರು. ಕೆಲವರು ಈ ಆಹಾರವನ್ನ ಸೇವಿಸಿದಾಗ ಸೊಪ್ಪಿನ ಪರಿಣಾಮವೋ ಇಲ್ಲ, ಉಷಾರಿಲ್ಲದ ವಿದ್ಯಾರ್ಥಿ ತರುಣ್ ಎಂಬಾತ ಊಟ ಮಾಡದೆ ಇದ್ದ ವಿದ್ಯಾರ್ಥಿಗೆ ವಾಂತಿ ಉಂಟಾಗಿದ್ದನ್ನ ಕಂಡ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡರು ಎಂದು ಶಿಕ್ಷಣ ಇಲಾಖೆಯವರು ತಿಳಿಸಿದ್ದಾರೆ.
ಆದರೆ ಡಾ. ಗಣೇಶ್‍ಬಾಬು ಮಾತನಾಡಿ ಮಕ್ಕಳು ವಾಂತಿ ಮಾಡಿದ್ದನ್ನ ತುಮಕೂರು ಆಸ್ಪತ್ರೆಗೆ ಪರೀಕ್ಷೆಗೆ ಕಳುಹಿಸಲಾಗಿದ್ದು ಇನ್ನಾವುದೇ ಸಮಸ್ಯೆ ಇಲ್ಲ. ಊಟ ಮಾಡಿದ ಇನ್ನೂ ಏಳು ವಿದ್ಯಾರ್ಥಿಗಳಿಗೆ ಯಾವುದೆ ತೊಂದರೆ ಇಲ್ಲದೆ ಆರೋಗ್ಯವಾಗಿರುವುದರಿಂದ ಸಂಪೂರ್ಣ ಎಲ್ಲ ವಿದ್ಯಾರ್ಥಿಗಳನ್ನ ನಮ್ಮ ವೈದ್ಯರ ತಂಡ ಪರೀಕ್ಷಿಸಿ ಗುಲ್‍ಕೋಸ್ ನೀಡಿ ಕ್ಷೇಮವಾಗಿ ಮನೆಗೆ ವಾಪಸ್ ಆಗಿದ್ದಾರೆಂದು ತಿಳಿಸಿದ್ದಾರೆ. ಆಸ್ಪತ್ರೆಗೆ ಬಿಇಒ ಹಾಗೂ ಬಿಆರ್‍ಸಿ ಸೇರಿದಂತೆ ಶಾಸಕ ಡಾ.ರಂಗನಾಥ್, ಇತರರು ಭೇಟಿ ನೀಡಿ ಕ್ರಮವಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
