ಬಿಸ್ಕತ್ ಬಿಸಾಡಿದ ವಿಚಾರ; ಸಚಿವ ರೇವಣ್ಣ ಸ್ಪಷ್ಟನೆ

 ಬೆಂಗಳೂರು:Related image

      ಬಿಸ್ಕತ್ ಬಿಸಾಡಿದ ವಿಚಾರದಲ್ಲಿ ಯಾವುದೇ ತಪ್ಪು ಕಲ್ಪನೆ ಬೇಡ ಎಂದು ಲೋಕೋಪಯೋಗಿ ಸಚಿವ ರೇವಣ್ಣ ತಿಳಿಸಿದರು.

      ವಿಧಾನಸೌಧದಲ್ಲಿ ಮಾತನಾಡುತ್ತಿದ್ದ ಅವರು, ಕೊಡಗು ಜಿಲ್ಲೆಯ ರಾಮನಾಥಪುರದ ಗಂಜಿ ಕೇಂದ್ರದಲ್ಲಿ ವಾಸ್ತವ್ಯವಿದ್ದ ನೆರೆಸಂತ್ರಸ್ತ ಮಹಿಳೆಯರು ಹಿಂದೆ ಕುಳಿತು ಒಂದೇ ಸಮನೆ ಕೇಳುತ್ತಿದ್ದರು. ಅವರ ಹತ್ತಿರ ತೆರಳಲು ಸಾಧ್ಯವಾಗದೇ ಈ ರೀತಿ ನೀಡಬೇಕಾಗಿ ಬಂತು. ನನ್ನಲ್ಲಿ ಆ ರೀತಿಯ ಮನೋಭಾವನೆ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಒಂದು ವೇಳೆ ನಾನು ನಡೆದುಕೊಂಡ ರೀತಿ ತಪ್ಪು ಆಗಿದ್ದರೆ, ಜನ ಕ್ಷಮೆ ಕೇಳು ಅಂದ್ರೆ ಕ್ಷಮೆ ಕೇಳುವುದಾಗಿ ಹೇಳಿದರು. ಜನರಿಗಿಂತ ನಾನು ದೊಡ್ಡವನಲ್ಲ ಎಂದರು.

ವೋಟ್ ಹಾಕ್ಸುಕೊಂಡೋರ್ ಒಬ್ರು ಬರಲಿಲ್ಲ; ರೇವಣ್ಣ ಗರಂ

      ಕಳೆದ 25 ವರ್ಷಗಳಿಂದ ವೋಟ್ ಹಾಕಿಸಿಕೊಂಡ ಒಬ್ಬ ಕೇಂದ್ರ ಸಚಿವರೂ ನೆರೆ ಸಂತ್ರಸ್ತರ ಕಡೆ ಮುಖ ತೋರಿಸದೇ ಇರುವುದು ಅವರ ವ್ಯಕ್ತಿತ್ವ ಎಂತಹುದು ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಸಚಿವ ರೇವಣ್ಣ ಗರಂ ಆದರು.

      ಸಂತ್ರಸ್ತರ ಬಳಿ ಬಂದು ಒಂದು ಸಾಂತ್ವನ ಹೇಳದೆ ಇರುವುದು ನಾಚಿಗೇಡು, ಸಂಕಷ್ಟದ ತುರ್ತು ಕಾಲದಲ್ಲಿ ಬಂದು ಅವರನ್ನು ಮಾತನಾಡಿಸುವ ಸೌಜನ್ಯವೂ ಅವರಿಗೆ ಇಲ್ಲದಂತೆ ಕಾಣುತ್ತದೆ. ಈ ಕೊಡಗು ಜಿಲ್ಲೆಯಲ್ಲಿ ಗೆದ್ದವರೆಲ್ಲಾ ಶಾಸಕರು ಮತ್ತು ಸಂಸದರು ಬಿಜೆಪಿ ಪಕ್ಷದವರೇ ಆಗಿದ್ದು, ಒಬ್ಬ ಸಂಸದನೂ ಕೂಡಾ ಇತ್ತ ಕಡೆ ತಲೆ ಹಾಕದೇ ಇರುವುದು ಇಲ್ಲಿನ ಜನರ ದುರ್ದೈವ. ಈ ಸಂದರ್ಭ ರಾಜಕೀಯ ಮಾಡುವಂತಹುದಲ್ಲ. ಎಂದು ಹೇಳಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link